Advertisement

ಸರ್ಕಾರದಿಂದ ಕಾರ್ಮಿಕರ ಶೋಷಣೆ

04:21 PM May 23, 2019 | Team Udayavani |

ಮೊಳಕಾಲ್ಮೂರು: ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕಾರ್ಮಿಕರ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಶಿವರುದ್ರಪ್ಪ ಆರೋಪಿಸಿದರು.

Advertisement

ಪಟ್ಟಣದ ಬಸ್‌ ನಿಲ್ದಾಣದ ಆವರಣದಲ್ಲಿ ಸಿಪಿಐ ವತಿಯಿಂದ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಡವಾಳಶಾಹಿಗಳು ಅಸಂಘಟಿತ ಕಾರ್ಮಿಕರನ್ನು ಹೆಚ್ಚು ಕಾಲದವರೆಗೆ ದುಡಿಸಿಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿ ಎಂಟು ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ಕಾನೂನು ಜಾರಿಗೊಂಡಿದೆ. ಕೈಗಾರಿಕೆಗಳಲ್ಲಿ ಅರ್ಹತೆ ದುಡಿಯುತ್ತಿರುವ ಕಾರ್ಮಿಕರು, ಕಾರ್ಮಿಕ ಕಾಯ್ದೆ ಅನ್ವಯ ಕಲ್ಪಿಸಿರುವ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರೈತರ ಮತ್ತು ಅಸಂಘಟಿತರ ಪರವಾಗಿ ಯೋಜನೆಗಳನ್ನು ರೂಪಿಸದೆ ಉದ್ಯಮಿಗಳ ಕಲ್ಯಾಣಕ್ಕೆ ಶ್ರಮಿಸುತ್ತಿವೆ ಎಂದು ದೂರಿದರು.

ಸಿಪಿಐ ತಾಲೂಕು ಪ್ರಧಾನ ಕಾರ್ಯದರ್ಶಿ ಜಾಫರ್‌ ಷರೀಫ್‌ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕರನ್ನು ನಿರ್ಲಕ್ಷಿಸಿವೆ. ಕಾರ್ಮಿಕರ ಅಭಿವೃದ್ಧಿಗಾಗಿ ಹಕ್ಕುಗಳನ್ನು ನೀಡುವಲ್ಲಿ ನಿರ್ಲಕ್ಷಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಎಐಕೆಎಸ್‌ನ ಡಿ. ಪೆನ್ನಯ್ಯ ಮಾತನಾಡಿ, ದೇಶದಲ್ಲಿ ಶೇ. 70 ರಷ್ಟು ಅಸಂಘಟಿತ ಕಾರ್ಮಿಕರು ಕೈಗಾರಿಕೆಗಳಲ್ಲಿ ಕೆಲಸ ಮಾಡದಿದ್ದಲ್ಲಿ ಬಂಡವಾಳಶಾಹಿಗಳು ಸಾವಿರಾರು ಕೋಟಿ ರೂ.ಗಳನ್ನು ಸಂಪಾದನೆ ಮಾಡಲಾಗುತ್ತಿರಲಿಲ್ಲ. ಬಡತನ ಮತ್ತು ತೀವ್ರ ಬರದಿಂದ ಹಿಂದುಳಿದ ತಾಲೂಕಿನ ದುಡಿಯುವ ವರ್ಗಕ್ಕೆ ಸರಿಯಾದ ಮೂಲ ಸೌಲಭ್ಯಗಳನ್ನು ಕಲ್ಪಿಸದೆ ಸರ್ಕಾರಗಳು ವಂಚಿಸಿವೆ. ರೈತರು ಮತ್ತು ಕಾರ್ಮಿಕ ವರ್ಗದ ಮೇಲೆ ಪ್ರಮಾಣವಚನ ಸ್ವೀಕರಿಸಿ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದರು.

Advertisement

ಎಐಟಿಯುಸಿ ಜಿಲ್ಲಾ ಮಂಡಳಿಯ ಜಯದೇವಪ್ಪ, ಲಕ್ಷ್ಮಣಪ್ಪ, ತಿಪ್ಪೇರುದ್ರಪ್ಪ, ಈರಣ್ಣ, ಮಹಾದೇವಿ, ಮಂಗಳಮುಖೀಯ ಒಕ್ಕೂಟದ ಪಾಲಮ್ಮ, ಪಲ್ಲವಿ, ಕೋಮಲ, ನುಂಕಮ್ಮ, ಮಾರಕ್ಕ, ಚಂದ್ರಮ್ಮ, ಸುಧಮ್ಮ, ಮೋನಿಕಾ, ಲಕ್ಷ್ಮೀ ಇದ್ದರು.

ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಸರ್ಕಾರಿ ಸ್ವಾಮ್ಯದ ಬಹು ದೊಡ್ಡ ಕೈಗಾರಿಕೆಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಿ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಬಡ ರೈತರಿಗೆ, ಅಸಂಘಟಿತ ಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ನೀಡುತ್ತಿಲ್ಲ.
ಜಾಫರ್‌ ಷರೀಫ್‌,
ಸಿಪಿಐ ತಾಲೂಕು ಕಾರ್ಯದರ್ಶಿ.

Advertisement

Udayavani is now on Telegram. Click here to join our channel and stay updated with the latest news.

Next