Advertisement

ಮಹಾಸಾಧ್ವಿಯ ಕೊಡುಗೆ ಅಪಾರ: ಶ್ರೀರಾಮ ರೆಡ್ಡಿ ಬಣ್ಣನೆ

05:07 PM May 11, 2020 | Naveen |

ಮೊಳಕಾಲ್ಮೂರು: ರೆಡ್ಡಿ ಸಮುದಾಯದ ಏಳ್ಗೆಗೆ ಶ್ರಮಿಸಿದ ಹೇಮರೆಡ್ಡಿ ಮಲ್ಲಮ್ಮಳ ತತ್ವಾದರ್ಶಗಳನ್ನು ಪಾಲಿಸಿ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದು ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಕೆ.ಟಿ. ಶ್ರೀರಾಮ ರೆಡ್ಡಿ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 13ನೇ ಶತಮಾನದಲ್ಲೇ ರೆಡ್ಡಿ ಸಮುದಾಯದ ಕುರುಹು ಇತ್ತು ಎಂಬುದಲ್ಲೆ ಹೇಮರೆಡ್ಡಿ ಮಲ್ಲಮ್ಮಳೇ ಸಾಕ್ಷಿ. ರೆಡ್ಡಿ ಸಮುದಾಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾಳೆ. ಉತ್ತಮ ಗೃಹಿಣಿಯಾಗಿ ನೀಡಿದ ಕೆಲಸವನ್ನು ಶಿಸ್ತು ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾಳೆ ಎಂದರು.

ರೆಡ್ಡಿ ಸಮುದಾಯದ ಮುಖಂಡ ಸೋಮರೆಡ್ಡಿ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಏಳ್ಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾಳೆ. ವಚನ ಸಾಹಿತ್ಯವನ್ನು ತನ್ನ ಮೈದುನನ ಮೂಲಕ ಸಮಾಜಕ್ಕೆ ತಿಳಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾಳೆ ಎಂದು ಸ್ಮರಿಸಿದರು.

ಉಪ ತಹಶೀಲ್ದಾರ್‌ ಏಳುಕೋಟಿ, ಶಿಕ್ಷಕ ಓಬಣ್ಣ, ಮುಖಂಡರಾದ ಶಿವಾ ರೆಡ್ಡಿ, ಹನುಮಂತ ರೆಡ್ಡಿ, ನರಸಿಂಹ ರೆಡ್ಡಿ, ಪಲ್ಲಕ್ಕಿ ರೆಡ್ಡಿ, ಭೀಮಾ ರೆಡ್ಡಿ, ಲಕ್ಷ್ಮಣ ರೆಡ್ಡಿ, ಸುರೇಶಬಾಬು, ಶಂಕರ್‌ ನಾಗ್‌, ನವೀನ್‌, ರಂಗನಾಥ, ತಾಲೂಕು ಕಚೇರಿ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next