Advertisement

ಕುರುಬ ಸಮಾಜಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆಗೆ ಮನವಿ

06:32 PM May 17, 2020 | Naveen |

ಮೊಳಕಾಲ್ಮೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರಿ ಸಾಕಾಣಿಕೆ, ಕುರಿ ಉಣ್ಣೆ, ಕಂಬಳಿ ತಯಾರಿಕೆ ಮಾಡುವ ಕುರುಬ ಸಮಾಜಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ನೆರವು ನೀಡಬೇಕೆಂದು ಒತ್ತಾಯಿಸಿ ಹಾಲುಮತ ಮಹಾಸಭಾದ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್‌ ಎಂ. ಬಸವರಾಜ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಹಾಲುಮತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಜಿ.ಎನ್‌. ಜಗದಿಧೀಶ್‌ ಮಾತನಾಡಿ, ಕೊರೊನಾ ವೈರಸ್‌ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲು ಲಾಕ್‌ಡೌನ್‌ ಅಸ್ತ್ರ ಬಳಸಿ ಜನರ ಪ್ರಾಣ ರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ಶ್ರಮಿಕ ವರ್ಗಕ್ಕೆ ನೆರವು ನೀಡಿರುವುದು ಪ್ರಯೋಜನಕಾರಿಯಾಗಿದೆ. ಆದರೆ ಹಾಲುಮತದ ಕುಲಕಸುಬಾದ ಕುರಿ ಉಣ್ಣೆ, ಕಂಬಳಿ ತಯಾರಿಕೆ, ಕುರಿ ಮತ್ತು ಗೋಪಾಲಕರನ್ನು ನಿರ್ಲಕ್ಷಿಸಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿರುವುದರಿಂದ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ನೆರವು ನೀಡಬೇಕು. ಕುರಿಗಳು ಮತ್ತು ಇನ್ನಿತರ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ ಹಿಂದಿನ ಸರ್ಕಾರ ನೀಡುತ್ತಿದ್ದ ಸಹಾಯಧನವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು. ಎಂ.ಬಿ. ತಿಪ್ಪೇಸ್ವಾಮಿ, ದೊಡ್ಡವೀರಣ್ಣ, ವೆಂಕಟೇಶ್‌, ನಾಗರಾಜ್‌, ಮಂಜು, ನಾಗೇಶ್‌, ಟಿ. ಈಶ್ವರಪ್ಪ, ಶಿವಣ್ಣ, ಓಂಕಾರಪ್ಪ, ಮಹಾಂತೇಶ್‌, ಎಂ.ಬಿ. ಮಂಜುನಾಥ, ವಿರೂಪಾಕ್ಷಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next