Advertisement

ಪೈಪ್‌ಲೈನ್‌ ಕಾಮಗಾರಿ ಅವೈಜ್ಞಾನಿಕ

06:14 PM Feb 20, 2020 | Team Udayavani |

ಮೊಳಕಾಲ್ಮೂರು: ಪಟ್ಟಣದ ಕೋನಸಾಗರ ರಸ್ತೆ ಬದಿಯಲ್ಲಿ ಕೈಗೊಂಡಿರುವ ತುಂಗಾ ಹಿನ್ನೀರು ಯೋಜನೆಯ ಪೈಪ್‌ ಲೈನ್‌ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಪಟ್ಟಣ ಪಂಚಾಯತ್‌ ಸದಸ್ಯರು ಕಾಮಗಾರಿಯನ್ನು ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತ್‌ ಸದಸ್ಯ ಎಂ. ಅಬ್ದುಲ್ಲಾ, ರಸ್ತೆ ಮಧ್ಯದಿಂದ 21 ಮೀಟರ್‌ ಅಂತರದಲ್ಲಿ ಪೈಪ್‌ಲೈನ್‌ ಅಳವಡಿಸಬೇಕೆಂಬ ನಿಯಮವಿದೆ. ಆದರೆ ರಸ್ತೆಯ ಬದಿಯ 10 ಅಡಿ ಅಂತರದಲ್ಲಿಯೇ ಪೈಪ್‌ಲೈನ್‌ ಹಾಕುತ್ತಿರುವುದು ಅವೈಜ್ಞಾನಿಕವಾಗಿದೆ. ಟೌನ್‌ ವ್ಯಾಪ್ತಿಗೆ ಬರುವ ಈ ರಸ್ತೆ ಬದಿಯ 10 ಅಡಿ ಅಂತರದಲ್ಲಿ ಪೈಪ್‌ ಲೈನ್‌ ಹಾಕಿದರೆ ವ್ಯರ್ಥವಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಯೋಜನೆ ವಿಫಲವಾಗಲಿದೆ. ಈ ರಸ್ತೆ ರಾಜ್ಯ ಹೆದ್ದಾರಿಗೆ ಒಳಪಟ್ಟಿದ್ದು 21 ಮೀಟರ್‌ ಅಂತರದಲ್ಲಿ ಕಾಮಗಾರಿ ಕೈಗೊಳ್ಳದೆ ರಸ್ತೆ ಸಮೀಪದಲ್ಲಿ ಪೈಪ್‌ ಲೈನ್‌ ಹಾಕಿದರೆ ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣವಾಗುವಾಗ ಈ ಯೋಜನೆಯಿಂದ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತುಂಗಾ ಹಿನ್ನೀರಿನ ಕಾಮಗಾರಿ ಯೋಜನೆಯ ಮೆಗಾ ಕನ್ಸ್ಟ್ರಕ್ಷನ್‌ ಯೋಜನಾ ವ್ಯವಸ್ಥಾಪಕ ಪೊನ್ನುಸ್ವಾಮಿ ಮಾತನಾಡಿ, ಈಗಾಗಲೇ ಹಾನಗಲ್‌ ಹಾಗೂ ಇನ್ನಿತರ ಗ್ರಾಮೀಣ ಪ್ರದೇಶಗಳ ರಸ್ತೆ ಬದಿಯಲ್ಲಿ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ಮಾಡಿದಂತೆ ಈ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ರಸ್ತೆಯಿಂದ ಕೋನಸಾಗರ ಗ್ರಾಮದ ಮಾರ್ಗವಾಗಿ ಹೋಗುವ ಪೈಪ್‌ಲೈನ್‌ ಕಾಮಗಾರಿ ಕೈಗೊಂಡಿದ್ದು, ಕೂಡಲೇ ರಸ್ತೆಯ ನಿಯಮದಂತೆ ಪಟ್ಟಣ ಪಂಚಾಯತ್‌ ಅನುಮತಿ ಪಡೆದು ಕಾಮಗಾರಿ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಪಟ್ಟಣ ಪಂಚಾಯತ್‌ ಇಂಜಿನಿಯರ್‌ ರೇವಣಸಿದ್ದೇಶ್ವರ ಮಾತನಾಡಿ, ಪಟ್ಟಣದ ವ್ಯಾಪ್ತಿಗೊಳಪಡುವ ಈ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳುವ ಮುನ್ನ ಪಪಂ ಗಮನಕ್ಕೆ ತಂದು ಅನುಮತಿ ಪಡೆಯಬೇಕಿದೆ. ಕುಡಿಯುವ ನೀರಿನ ಈ ಯೋಜನೆ
ಶಾಶ್ವತವಾಗಿದ್ದು, ನಿಯಮಾನುಸಾರ 21 ಮೀಟರ್‌ ಅಂತರದಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು. ಪಟ್ಟಣ ಪಂಚಾಯತ್‌ ಸದಸ್ಯರಾದ ಟಿ.ಟಿ. ರವಿಕುಮಾರ್‌, ನಬಿಲ್‌ ಅನ್ಸರ್‌, ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಸಹಾಯಕ ಅಭಿಯಂತರ ಪವನ್‌, ಮುಖಂಡರಾದ ಡಿಶ್‌ ರಾಜ್‌, ಗೋಪಾಲ್‌, ಓಬಣ್ಣ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next