Advertisement

ಕೋವಿಡ್ ವ್ಯಾಪಿಸದಂತೆ ಅಗತ್ಯ ಕ್ರಮ: ಬಸವರಾಜ್‌

03:34 PM Jul 10, 2020 | Naveen |

ಮೊಳಕಾಲ್ಮೂರು: ತಾಲೂಕಿನಲ್ಲಿ ಕೋವಿಡ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಎಂ. ಬಸವರಾಜ್‌ ತಿಳಿಸಿದರು.

Advertisement

ತಾಲೂಕಿನ ರಾಂಪುರ ಗ್ರಾಮದಲ್ಲಿ ಬಾಲಕಿಯೊಬ್ಬಳಿಗೆ ಕೋವಿಡ್ ಪಾಸಿಟಿವ್‌ ಪತ್ತೆಯಾಗಿದ್ದರಿಂದ ಈ ಗ್ರಾಮ ಹಾಗೂ ಇನ್ನಿತರ ಗ್ರಾಮಸ್ಥರಿಗೆ ಹರಡದಂತೆ ಲಾಕ್‌ ಡೌನ್‌ ಮಾಡಲಾಗಿತ್ತು. ಲಾಕ್‌ಡೌನ್‌ ತೆರವು ಮಾಡಬೇಕೆಂದು ಗ್ರಾಮಸ್ಥರು ಮಾಡಿದ ಮನವಿಗೆ ಅವರು ಪ್ರತಿಕ್ರಿಯಿಸಿದರು. ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ದಿನಗಳ ಹಿಂದೆ ಕೋವಿಡ್ ಪಾಸಿಟಿವ್‌ ಪತ್ತೆಯಾದ ಬಾಲಕಿಯ ಮನೆಯಲ್ಲಿಯೇ ವೃದ್ಧೆಗೆ ಕೋವಿಡ್ ಸೋಂಕು ತಗುಲಿದೆ. ಹಾಗಾಗಿ ಲಾಕ್‌ಡೌನ್‌ ಅನ್ನು ಮಧ್ಯಾಹ್ನ 2 ರಿಂದ ಮುಂದುವರೆಸಲಾಗುವುದು. ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಗ್ರಾಮಸ್ಥರು ಲಾಕ್‌ ಡೌನ್‌ಗೆ ಸಹಕಾರ ನೀಡುವಂತೆ ಕೋರಿದರು.

ವಕೀಲ ಆರ್‌.ಎಂ. ಅಶೋಕ ಮಾತನಾಡಿ, ರಾಂಪುರದಲ್ಲಿ ಕಳೆದ ಹತ್ತು ದಿನಗಳಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಕಾನೂನು ಪಾಲನೆ ಮಾಡಲಾಗಿದೆ. ಈ ಗ್ರಾಮದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಜಾಸ್ತಿ ಇಲ್ಲ. ಲಾಕ್‌ಡೌನ್‌ನಿಂದ ಬೀದಿಬದಿ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಲಾಕ್‌ಡೌನ್‌ ಸಡಿಲಗೊಳಿಸಿ ಬೀದಿಬದಿ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.  ನಾಗರಾಜ್‌, ಗಂಗಾರೆಡ್ಡಿ, ಕೆ.ಆರ್‌. ಮಲಿಕಾರ್ಜುನ, ಗಡ್ಡೆ ತಿಪ್ಪಣ್ಣ, ಎಂ.ಕೆ. ಮೂರ್ತಿ, ಮಲ್ಲಯ್ಯಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next