Advertisement

ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸಿ: ಮೃತ್ಯುಂಜಯ

05:11 PM Aug 25, 2019 | Naveen |

ಮೊಳಕಾಲ್ಮೂರು: ಯುವಜನರು ಮದ್ಯಪಾನ, ಡ್ರಗ್ಸ್‌, ಅಫೀಮು, ಗಾಂಜಾ , ಹೆರಾಯಿನ್‌ ಸೇರಿದಂತೆ ಇನ್ನಿತರ ಮಾದಕ ದ್ರವ್ಯ ಸೇವನೆಗೆ ಬಲಿಯಾಗದೆ ಭವಿಷ್ಯವನ್ನು ಉತ್ತಮ ರೂಪಿಸಿಕೊಂಡು ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆ ಪಿಎಸ್‌ಐ ಮೃತ್ಯುಂಜಯ ಕರೆ ನೀಡಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿ.ಇ.ಎನ್‌ ಅಪರಾಧ ಪೊಲೀಸ್‌ ಠಾಣೆ ಚಿತ್ರದುರ್ಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದೊಂದಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಜನರು ಯಾವುದೋ ಕಾರಣದಿಂದ ಸ್ನೇಹಿತರು ಹಾಗೂ ಇನ್ನಿತರರೊಂದಿಗೆ ಬೀಡಿ, ಸಿಗರೇಟ್ ನೊಂದಿಗೆ ಗಾಂಜಾದಂತಹ ಮಾದಕ ದ್ರವ್ಯಗಳನ್ನು ಸೇವನೆ ಮಾಡದೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮದ್ಯಪಾನ, ಡ್ರಗ್ಸ್‌ , ಅಫೀಮು, ಗಾಂಜಾ , ಹೆರಾಯಿನ್‌ ಇನ್ನಿತರ ಮಾದಕ ದ್ರವ್ಯಗಳನ್ನು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಸುಮಾರು 7.5 ಕೋಟಿ ಜನರು ಡ್ರಗ್ಸ್‌ ಚಟಕ್ಕೆ ಒಳಗಾಗಿದ್ದು, ಮಾದಕ ವಸ್ತು ಸೇವನೆ ಗೀಳಿನಿಂದ ಪ್ರತಿ ದಿನ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೆಟ್ರೋಪಾಲಿಟನ್‌ ಸಿಟಿಗಳಲ್ಲಿ ಹೆಚ್ಚಾಗಿ ಗಾಂಜಾ, ಹೆರಾಯಿನ್‌, ಅಫೀಮು ಬಳಕೆ ಹೆಚ್ಚಾಗುತ್ತಿದೆ. ಹೆರಾಯಿನ್‌ ವಹಿವಾಟು ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿದ್ದು, ಸುಮಾರು 20 ಲಕ್ಷ ಕೋಟಿ ರೂ.ಗಳ ವ್ಯವಹಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾವಂತ ಯುವಕರು ಹೆಚ್ಚಾಗಿ ಮೊಬೈಲ್ ಬಳಸುತ್ತಿರುವುದು ಅನಾಹುತಕ್ಕೆ ಕಾರಣವಾಗುತ್ತಿದೆ.

ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌, ಟ್ವೀಟರ್‌ಗಳಲ್ಲಿ ಬರುವ ಸಂದೇಶಗಳನ್ನು ನಂಬಬೇಡಿ ಹಾಗೂ ಅವುಗಳನ್ನು ಬಳಸುವಾಗ ವೈಯಕ್ತಿಕ ನಿಂದನೆ, ಅವಮಾನ ಮಾಡಬಾರದು. ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಿ. ಸೂರಯ್ಯ, ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯ ಸಿಬ್ಬಂದಿ ನರಸಿಂಹ, ಕಾಲೇಜು ಉಪನ್ಯಾಸಕರಾದ ತಿಮ್ಮಣ್ಣ, ಲಲಿತ, ಡಾ| ಕೆ.ವಿ. ಪ್ರಜ್ಞಾ, ವಿಶ್ವರಾಜ್‌ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next