Advertisement

ಮೊಳಹಳ್ಳಿಯಲ್ಲಿ ಹುಲಿ ಸಂಚಾರ ವಿಡಿಯೋ ವೈರಲ್: ಸುಳ್ಳು ವದಂತಿ ಎಂದ ಅಧಿಕಾರಿಗಳು

08:21 AM Dec 24, 2020 | keerthan |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಮೊಳಹಳ್ಳಿ ಎಂಬಲ್ಲಿ ಕಳೆದ ರಾತ್ರಿ ಹುಲಿ ಸಂಚರಿಸುತ್ತಿದೆ ಎನ್ನುವ ವೀಡಿಯೋ ದೃಶ್ಯ ತುಣುಕು ಭಾರೀ ವೈರಲ್ ಆಗುತ್ತಿದೆ.

Advertisement

ಹುಲಿಯೊಂದು ಮೂರು ಮರಿಗಳೊಂದಿಗೆ ರಾತ್ರಿ ವೇಳೆ ತಿರುಗಾಡುವ ದೃಶ್ಯ ಇದಾಗಿದ್ದು, ಮೊಳಹಳ್ಳಿ ಎಂದು ಲೊಕೇಶನ್ ಹಾಕಲಾಗಿದೆ.

ಇದನ್ನೂ ಓದಿ:ರೌಡಿಶೀಟರ್ ಬಾಂಬೆ ರವಿಗೆ ಮಂಗಳೂರು ಸಂಪರ್ಕ!

ಈ ಬಗ್ಗೆ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರು ಪ್ರತಿಕ್ರಿಯಿಸಿ, ಮೊಳಹಳ್ಳಿ ಪರಿಸರದಲ್ಲಿ ಈ ರೀತಿಯ ಯಾವುದೇ ಪ್ರಕರಣಗಳು ಇದುವರೆಗೆ ಕಂಡು ಬಂದಿಲ್ಲ. ಯಾವುದೋ ಪಾರ್ಕ್ ನಲ್ಲಿ ಚಿತ್ರಿಕರಿಸಿದ ವೀಡಿಯೋಗೆ ಮೊಳಹಳ್ಳಿ ಲೊಕೇಶನ್ ಹಾಕಿ ಯಾರೋ ಸುಳ್ಳು ವದಂತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next