Advertisement

ಮಾತಿನ ಚಿತ್ರೀಕರಣ ಪೂರ್ಣಗೊಳಿಸಿದ ನಿರ್ಭಯ 2

03:50 PM Jan 11, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ನಿರ್ಭಯಾ 2′ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತು. ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ನಿರ್ಭಯಾ 2′ ಚಿತ್ರಕ್ಕೆ ರಾಜು ಕುಣಿಗಲ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

Advertisement

ಬಾಲಕೃಷ್ಣ ಕೆ.ಆರ್‌ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ನಿರ್ಭಯಾ 2′ ಚಿತ್ರದ ಚಿತ್ರೀಕರಣ ಮಾತಿನ ಭಾಗ ಮುಕ್ತಾಯವಾಗಿದ್ದು, ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಸದ್ಯಕ್ಕೆ ಬಾಕಿಯಿದೆ.

ಕಿರುತೆರೆಯ “ಪಾರು’ ಧಾರಾವಾಹಿಯ ಖ್ಯಾತಿಯ ಮೋಕ್ಷಿತಾ ಪೈ “ನಿರ್ಭಯಾ 2′ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅರ್ಜುನ್‌ ಕೃಷ್ಣ, ಹರೀಶ್‌ ಹೆಚ್‌. ಆರ್‌, ಕುಸುಮಾ, ರಾಧಾ ರಾಮಚಂದ್ರ, ಅಶೋಕ್‌, ಗಣೇಶ್‌ ರಾವ್‌, ಹನುಮಂತೇ ಗೌಡ ಮುಂತಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ:ಹೊಸಬರಿಗೆ ಮತ್ತೆ ಸಂಕಷ್ಟ: ರಿಲೀಸ್‌ ಮಾಡೋದೇ ಸವಾಲು

“ನಿರ್ಭಯಾ 2′ ಚಿತ್ರದ ಹಾಡುಗಳಿಗೆ ಆಕಾಶಪರ್ವ ಸಂಗೀತ ಸಂಯೋಜಿಸುತ್ತಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್‌, ಕವಿರಾಜ್‌ ಹಾಗೂ ಸಂತೋಷ್‌ ನಾಯಕ್‌ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್‌ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. ರಂಗ್‌ ಮಂಜು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next