Advertisement

ಮೊಹರಂ; ಇರಾನಿಯರಿಂದ ಕರಾಳ ದಿನಾಚರಣೆ

09:01 AM Sep 11, 2019 | mahesh |

ಗದಗ: ಪ್ರವಾದಿ ಇಮಾಮ್ ಹುಸೇನ್ ಅವರ ಹುತಾತ್ಮ ಸ್ಮರಣಾರ್ಥವಾಗಿ ನಗರದ ಇರಾನಿ ಕಾಲೋನಿಯಲ್ಲಿ ಮುಸ್ಲಿಂ ಬಾಂಧವರು ಮಂಗಳವಾರ ದೇಹ ದಂಡಿಸಿಕೊಳ್ಳುವ ಮೂಲಕ ಮೊಹರಂ ಹಬ್ಬವನ್ನು ಕರಾಳ ದಿನವಾಗಿ ಆಚರಿಸಿದರು. ಮೆರವಣಿಗೆಯುದ್ದಕ್ಕೂ ಶೋಕ ಗೀತೆಗಳೊಂದಿಗೆ ಹರಿತವಾದ ಅಸ್ತ್ರಗಳಿಂದ ದೇಹ ದಂಡಿಸಿಕೊಂಡು ನೆತ್ತರು ಹರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

Advertisement

ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಇರಾನಿ ಕಾಲೋನಿಯ ಇರಾನಿ ಮಸೀದಿಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರವಾದಿ ಹಸನ್, ಹುಸೈನ್ ಅವರ ಪ್ರತಿರೂಪವಾದ ಪಂಜೆಗಳನ್ನಿಡಿದು ಸುಮಾರು ಒಂದು ಕಿಲೋ ಮೀಟರ್ ದೂರದಷ್ಟು ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಳ್ಗೊಂಡಿದ್ದ ಇರಾನಿ ಯುವಕರು, ಮಹಿಳೆಯರು ಹಾಗೂ ಮಕ್ಕಳೂ ತಮ್ಮ ಅಂಗೈ ಹಾಗೂ ಎದೆ ಭಾಗದಲ್ಲಿ ಜೋರಾಗಿ ಬಡಿದುಕೊಂಡರು. ಇದೇ ವೇಳೆ ಕೆಲ ಯುವಕರು ಹರಿತವಾದ ವಸ್ತು(ಬ್ಲೇಡ್)ಗಳಿಂದ ಒಡೆದುಕೊಂಡು, ರಸ್ತೆಯುದ್ದಕ್ಕೂ ನೆತ್ತರು ಚೆಲ್ಲಿದರು. ಮೆರವಣಿಗೆಯುದ್ದಕ್ಕೂ ನೆರೆದಿದ್ದ ಸಾರ್ವಜನಿಕರ ಮೈ ನವಿರೇಳುವಂತೆ ಮಾಡಿದರು.

ಇರಾನಿ ಜನರ ಈ ವಿಶಿಷ್ಟ ಸಂಪ್ರದಾಯವನ್ನು ನೋಡಲು ನಗರದ ವಿವಿಧೆಡೆಯಿಂದ ಆಗಮಿಸಿದ್ದ ಜನರು ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ನೆರೆದಿದ್ದರು. ಮನೆಗಳ ಮಹಡಿ ಹಾಗೂ ಮೆಟ್ಟಿಲುಗಳ ಮೇಲೆ ನಿಂತು, ಇರಾನಿಯರ ಶೋಕಾಚರಣೆಗೆ ಕಂಬನಿ ಮಿಡಿದರು. ಈ ವೇಳೆ ಕೆಲ ಯುವಕರು ಕರಾಳ ದಿನವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಯಿಡಿಯುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next