Advertisement
ನಗರದ ಮಾಬುಸುಬಾನಿ ಕಟ್ಟೆ, ಜುಮ್ಮಾ ಮಸೀದಿ, ದಖನಿ ಗಲ್ಲಿ, ಒಕ್ಕಲಗೇರಿ ಓಣಿ, ಖಾನ್‌ತೋಟ, ಮುಕ್ತುಂ ಗರಡಿ, ಹಳೇ ಕಚೇರಿ, ಹನುಮನ ಗರಡಿ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪವಿತ್ರ ಪಂಜಾ ಹಾಗೂ ಡೋಲಿಗಳ ಮೆರವಣಿಗೆ ನಡೆಯಿತು.
Related Articles
Advertisement
ಗ್ರಾಮೀಣ ಭಾಗದ ಹಲವೆಡೆ ಕೆಂಡ ಹಾಯುವ ಧಾರ್ಮಿಕ ಕಾರ್ಯಕ್ರಮವು ನೆರವೇರಿಸಲಾಯಿತು. ಈ ಸಂದರ್ಭ ಅನೇಕರು ಯ್ಯೋಮೆ ಅಶುರಾ (ಉಪವಾಸ) ಆಚರಿಸಿದರು. ಕಳೆದೈದು ದಿನಗಳಿಂದ ಹಸನ್-ಹುಸೇನ್‌ರ ತ್ಯಾಗ-ಬಲಿದಾನ ಸ್ಮರಿಸುವ ಕಾರ್ಯಕ್ರಮ ನಡೆದವು.
ಪಂಜಾ ಕೂರಿಸಿದ್ದ ಕಟ್ಟೆಗಳಲ್ಲಿ ಕವಡೆ-ಊದು ಹಾಕಿ, ಹೂವಿನಿಂದ ಅಲಂಕರಿಸಿ, ಮಗ್ದುಮ್ ಸಕ್ಕರೆ ಫಾತೆಹಾ ಅರ್ಪಿಸಲಾಯಿತು. ಯುವಕರು ಹಾಗೂ ಬಾಲಕರು ಕೈಗೆ ದಾರ ಕಟ್ಟಿಕೊಂಡು ಫಕೀರರಾಗಿ, ಅಳ್ಳೊಳ್ಳಿ ಬಾವಾ, ಹುಲಿ ವೇಷ ಧರಿಸಿ ಅಲಾಹಿ ಕುಣಿತದಲ್ಲಿ ಪಾಲ್ಗೊಳ್ಳುವ ಮೂಲಕ ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸಲಾಯಿತು.