Advertisement

ನಾಲತವಾಡ: ಪಟ್ಟಣದ ಮೂರು ಓಣಿಯ ಮಸೂತಿಯಲ್ಲಿ ಹಿಂದೂ-ಮುಸ್ಲಿಂ ಮೊಹರಂ ಆಚರಣೆ

09:55 AM Aug 09, 2022 | Team Udayavani |

ನಾಲತವಾಡ: ಪಟ್ಟಣದ ಮೂರು ಓಣಿಯ ಮಸೂತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಅದ್ದೂರಿಯಾಗಿ ಹಿಂದೂ-ಮುಸ್ಲಿಂ ಸೇರಿಕೊಂಡು ಐದು ದಿನಗಳ ಕಾಲ ಮೊಹರಂ ಹಬ್ಬ ಆಚರಿಸಿದರು.

Advertisement

ಸೋಮವಾರ ರಾತ್ರಿ ಚವನಭಾವಿ ಅವರಿಂದ ಯಜ್ಜೆ ಮೇಳ ಹಾಗೂ ನಾಲತವಾಡ ಪಟ್ಟಣದ ರಿವಾಯತ ಪದಗಳು ಮೆರಗು ತಂದವು. ರಾತ್ರಿಯಿಡಿ ಜಾಗ್ರಣೆ ಮಾಡಿ ಬಳಿಕ 15 ಜನ ಯುವಕರು, ಹಿರಿಯರು ಸೇರಿಕೊಂಡು ಬಿಂದಿಗೆ ತಗೊಂಡು ಗಂಗಸ್ಥಳಕೆ ಹೋಗಿ ಶುದ್ಧ(ಮಡಿ) ಆಗಿ ಬಿಂದಿಗೆ ತುಂಬಿಕೊಂಡು ಬಂದು ಅಲಾಯ್ ಕುಣಿಯ ಐದು ಸುತ್ತು ನೀರನ್ನು ಹಾಕಿ ನಂತರ ಮಸೂತಿ ಒಳಗೆ ಹೋಗಿ ಮಸೂತಿ ಮಡಿ ಮಾಡಿ, ಅಲಾಯ್ ಕುಣಿಯ ಮುಂದೆ ದೀಪಗಳನ್ನು ಹಚ್ಚಿ ಒಂದು ನಿಂಬೆ‌ ಹಣ್ಣನ್ನು ಇಟ್ಡು, 15 ಜನ ಮಡಿಯಿಂದ ಬೆಂಕಿ ಇರುವ ಅಲಾಯ್ ಕುಣಿಯಲ್ಲಿ ಒಬ್ಬರಂತೆ ಒಬ್ಬರು ಬೆಂಕಿ ಒಳಗೆ ಹಾದು ಮಸೂತಿ ಒಳ ಹೋದರು.

ಒಟ್ಟಾರೆ ಈ ವರ್ಷ ಮೊಹರಂ ಹಬ್ಬ ಅದ್ದೂರಿಯಾಗಿ ನಡೆಯಿತು. ಯಾಕೆಂದರೆ ಎರಡು ವರ್ಷಗಳ ಕಾಲ ಕೊರೊನಾ ಹಿನ್ನೆಲೆ ಮೊಹರಂ ಹಬ್ಬ ಅದ್ದೂರಿಯಾಗಿ ಆಚರಿಸಿರಲಿಲ್ಲ ಎಂದು ನಿವೃತ್ತ ಶಿಕ್ಷಕ ಇಮಾಮ ಸಾಬ್ ಅವಟಿ ಹೇಳಿದರು.

ಹಸನಸಾಬ್ ಕುಳಗೇರಿ, ಖಾಜಹುಸೆನ್ ಖತೀಬಿ, ರಾಜೇಸಾಬ ಕುಳಗೇರಿ, ಬಸವರಾಜ ಭೂವಿ,  ರಾಯಪ್ಪ ಭೂವಿ, ಅಲ್ಲಾಭಕ್ಷ ಕುಳಗೇರಿ, ಬಸವರಾಜ ತಳವಾರ, ಇನ್ನೂ ಮೂರು ಓಣಿಯ ಗುರು ಹಿರಿಯರು ಹಾಗೂ ಯುವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next