Advertisement
ಸದ್ಯ ಇಲ್ಲಿನ ಫಕೀರಸ್ವಾಮಿ ದರ್ಗಾದಲ್ಲಿ ಹಿಂದೂ ಸಂಪ್ರದಾಯಗಳಂತೆ ಕುಂಕುಮ ಮತ್ತು ವಿಭೂತಿಗಳನ್ನು ಬಳಸದೇ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಮೋಹರಂ ಹಬ್ಬದ ನಿಮಯಾವಳಿಯಂತೆ ಪಂಜಾ ಪ್ರತಿಷ್ಠಾಪನೆ, ಡೋಲಿ ನಿರ್ಮಾಣ ಹಾಗೂ ಧಾರ್ಮಿಕ ಆಚರಣೆಗಳೆಲ್ಲವನ್ನು ಹಿಂದೂ ಹಿರಿಯರ ನೇತೃತ್ವದಲ್ಲಿಯೇ ಅದ್ದೂರಿಯಾಗಿ ನಡೆಸಲಾಗುತ್ತಿದೆ.
Related Articles
Advertisement
ಗ್ರಾಮಸ್ಥರ ಪ್ರಕಾರ ಮಶೀದಿಯು ಸವಣೂರು ನವಾಬರ ಆಡಳಿತದಲ್ಲಿ ಅಸ್ಥಿತ್ವವಿರುವದಕ್ಕೆ ನಿದರ್ಶನವೆಂಬಂತೆ ಮಶೀದಿಯ ಹಿಂದುಗಡೆ ಕೋಟೆಯ ಕುರುಹು ಕಂಡು ಬರುತ್ತದೆ. ಈ ಜಾಗವನ್ನು ಅಶ್ವದಳದ ಕುದುರೆಗಳನ್ನು ಕಟ್ಟಲು ಬಳಸುತ್ತಿದ್ದರು ಎನ್ನಲಾಗಿದೆ. ಕೆಲ ದಶಕಗಳ ಹಿಂದೆ ಹರ್ಲಾಪೂರ ಮತ್ತು ಸುತ್ತಮುತ್ತಲಿನ ಗ್ರಾಮದ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹಬ್ಬಿತಂತೆ. ಮೋಹರಂ ಹಬ್ಬದಂದು ಮಶೀದಿಯಲ್ಲಿನ ಡೋಲಿ ಹೊರುತ್ತಿದ್ದ ಗೋವಿಂದಪ್ಪ ಚುಳಕಿ ಎಂಬುವರು ತಮ್ಮ ಉಡಿಯಲ್ಲಿ ಬೆಂಕಿಯನ್ನು ತೆಗೆದುಕೊಂಡು ಗ್ರಾಮದ ಸುತ್ತ ಭಸ್ಮವನ್ನು ಹಾಕಿ ದಿಗ್ಬಂಧನ ಮಾಡಿದಾಗಿನಿಂದ ಇಲ್ಲಿಯವರೆಗೆ ಒಂದೂ ಪ್ರಾಣಿಗೂ ಈ ತರ ಕಾಯಿಲೆ ಕಾಣಿಸಿಕೊಂಡಿಲ್ಲ ಎಂಬುವುದು ಇಲ್ಲಿಯ ವಾಡಿಕೆ.
ವಿಸ್ಮಯದ ಬೇವಿನಮರ: ದೈವತ್ವದ ತಳಹದಿಯಲ್ಲಿ ಕ್ಷಣಾರ್ಧದಲ್ಲಿ ಜೀವಿಗಳ ದೇಹದಲ್ಲಿಯ ಹಾವಿನ ವಿಷವನ್ನು ಹೊರಹಾಕುವ ಶಕ್ತಿ ಇರುವ ಈ ಬೇವಿನಮರಕ್ಕೆ ಕಹಿ ಸಂಜೀವಿನಿ ಎನ್ನಬಹುದು. ಸರ್ಪದಿಂದ ಕಚ್ಚಿಸಿಕೊಂಡು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಬದುಕುಳಿವುದು ಸಾಧ್ಯತೆ ಕಡಿಮೆ ಆದರೆ ಈ ಬೇವಿನಮರದಿಂದ ಔಷಧಿ ಪಡೆದ ಹಾವು ಕಚ್ಚಿಸಿಕೊಂಡ ಪ್ರತಿಯೊಬ್ಬರು ಸಂಪೂರ್ಣ ಗುಣಮುಖರಾದ ನಿದರ್ಶನಗಳಿವೆ.
ಪಂಜಾ ದೇವರುಗಳಲ್ಲಿನ ಒಂದು ದೇವರನ್ನು ಹೊರುವ ಭೀಮಪ್ಪ ಬಡಿಗೇರ ಅವರು, ಈ ಬೇವಿನ ಮರಕ್ಕೆ ವಿಶೇಷ ಶಕ್ತಿ ಇದ್ದು, ವಿಷಕಾರಿ ಜಂತುಗಳಿಂದ ಕಚ್ಚಿಸಿಕೊಂಡವರು ಈ ಮರದ ಎಲೆಗಳನ್ನು ಅರೆದು ಕುಡಿದ ಕ್ಷಣ ಮಾತ್ರದಲ್ಲಿ ವಿಷವನ್ನು ದೇಹದಿಂದ ಹೊರಹಾಕುತ್ತದೆ ಎಂದು ದೈವವಾಣಿ ನುಡಿದಾಗಿನಿಂದ ಗ್ರಾಮಸ್ಥರು ಆಸ್ಪತ್ರೆಯ ಮೊರೆ ಹೋಗದೆ ಹಾವು ಕಚ್ಚಿಸಿಕೊಂಡು ವ್ಯಕ್ತಿಯನ್ನು ಇಲ್ಲಿಗೆ ಕರೆದುಕೊಂಡು ಬಂದು ಗುಣ ಪಡಿಸಿಕೊಂಡು ಹೋಗುತ್ತಿದ್ದಾರೆ.
ಕಳೆದ 2-3 ವರ್ಷದ ಹಿಂದೆ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆಂದು ಬಂದ ಕುಟುಂಬದ 8-9 ತಿಂಗಳ ಮಗುವಿಗೆ ಹಾವು ಕಚ್ಚಿದಾಗ ಈ ಫಕೀರಸ್ವಾಮಿ ದೇವಸ್ಥಾನಕ್ಕೆ ತಂದು ಬೇವಿನ ಮರದ ಎಲೆಗಳನ್ನು ಅರೆದು ಕುಡಿಸಿದಾಗ ಮಗುವಿನ ತಾಯಿಗೆ ವಾಂತಿ ಆಗಿ ಮಗು ವಿಷ ಮುಕ್ತವಾಗಿ ಗುಣಮುಖವಾಯಿತೆಂದು ವಿಸ್ಮಯ ಕಂಡ ಪ್ರತ್ಯಕ್ಷದರ್ಶಿ ಶಿವಪ್ಪ ವಕ್ಕುಂದ ಅವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ
ಮಾರಣಾಂತಿಕ ವಿಷವನ್ನು ಹೊರ ಹಾಕುವ ಮರಕ್ಕೆ ಪ್ರಚಾರದ ಕೊರತೆ ಇದ್ದು, ಸಂಬಂಧ ಪಟ್ಟವರು ಅದರ ವಿಶೇಷತೆ ತಿಳಿಸಿ ಉಳಿಸಿ ಬೆಳಿಸುವ ಕಾರ್ಯ ಮಾಡಬೇಕಾಗಿದೆ. ಹಾಗೆಯೇ ಈ ಗ್ರಾಮಕ್ಕೆ ಬಸ್ಸಿನ ಸೌಲಭ್ಯ ಕಲ್ಪಿಸಿ ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಣೆಯಾಗಬೇಕಿದೆ.
ಗ್ರಾಮಸ್ಥರು ತಮ್ಮ ಮನೆಗಳಿಗೆ ಸುಣ್ಣ-ಬಣ್ಣ ಬಳಿದು, ಹೊಸ ಉಡುಗೆ ತೊಡಗೆ ಖರೀದಿಸಿ ಹಬ್ಬದ ಆಚರಣೆಗೆ ಪ್ರತಿವರ್ಷ ಸಿದ್ದತೆ ನಡೆಸುತ್ತಾರೆ. ಮೊಹರಮ್ ನಿಮಯಾವಳಿಯಂತೆ ಹಿಂದೂ ಹಿರಿಯರ ಮಾರ್ಗದರ್ಶನದಲ್ಲಿ ಪಂಜಾ ಪ್ರತಿಷ್ಠಾಪನೆ, ಡೋಲಿ ನಿರ್ಮಾಣ ಹಾಗೂ ಧಾರ್ಮಿಕ ಆಚರಣೆಗಳೆಲ್ಲವೂ ನಡೆಯುತ್ತಿವೆ.– ಮಹಾದೇವಪ್ಪ ಪವಾಡಿ, ಮುಖಂಡರು. – ಡಿ ಎಸ್ ಕೊಪ್ಪದ ಸವದತ್ತಿ