Advertisement

ಮಲಯಾಳಂ ಸೂಪರ್‌ಸ್ಟಾರ್‌ ನಟ ಮೋಹನ್‌ಲಾಲ್‌ ಇನ್ನು “ಮಾನ್‌ಸ್ಟರ್‌’

07:32 PM Nov 10, 2021 | Team Udayavani |

ನವದೆಹಲಿ: ಮಲಯಾಳಂ ಸೂಪರ್‌ಸ್ಟಾರ್‌ ನಟ ಮೋಹನ್‌ಲಾಲ್‌ (61) “ಮಾನ್‌ಸ್ಟರ್‌’ ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

Advertisement

2016ರಲ್ಲಿ ತೆರೆಕಂಡ “ಪುಲಿಮುರುಗನ್‌’ ಸಿನಿಮಾ ನಿರ್ದೇಶನ ಮಾಡಿದ ವೈಶಾಖ್‌ ಹೊಸ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಲಿದ್ದಾರೆ.

ಹೊಸ ಸಿನಿಮಾದಲ್ಲಿ ಲಾಲೇಟ್ಟನ್‌ ಲಕ್ಕಿ ಸಿಂಗ್‌ ಎಂಬ ಹೆಸರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಹೊಸ ಸಿನಿಮಾದ ಫ‌ಸ್ಟ್‌ ಲುಕ್‌ ಅನ್ನು ಖುದ್ದು ಮೋಹನ್‌ಲಾಲ್‌ ಅವರೇ ಬುಧವಾರ ಟ್ವೀಟ್‌ ಮಾಡಿದ್ದಾರೆ.

ಉದಯಕೃಷ್ಣನ್‌ ಅವರ ಚಿತ್ರ ಸಾಹಿತ್ಯ ಇರಲಿದೆ ಮತ್ತು ಚಿತ್ರೀಕರಣ ಕೂಡ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಬೆಳೆ ಕಟಾವು ಬಳಿಕ ಒತ್ತುವರಿ ತೆರವು : ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next