Advertisement

ಮೋಹನಚಂದ್ರಗೆ ಸಿಜಿಕೆ ರಂಗ ಪುರಸ್ಕಾರ

09:04 PM Jul 04, 2019 | mahesh |

ಸಿಜಿಕೆ ಬೀದಿ ರಂಗ ದಿನದ ನೆನಪಿನಲ್ಲಿ ಪ್ರತೀ ಜಿಲ್ಲೆಯಲ್ಲಿ ನೀಡುವ ರಂಗ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರಂಗಕರ್ಮಿ ಮೋಹನಚಂದ್ರ ಯು. ಇವರು ಆಯ್ಕೆಯಾಗಿದ್ದಾರೆ.

Advertisement

ಮೋಹನಚಂದ್ರ ಯು. ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ದುಡಿಯುತ್ತಿರುವ ರಂಗಕರ್ಮಿ, ಪ್ರೊಸೀನಿಯಮ್‌ ಹಾಗೂ ಬೀದಿನಾಟಕದಲ್ಲಿ ಸತತವಾಗಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ನಿರ್ದೇಶಕ. ತೃತೀಯ ರಂಗಭೂಮಿಯ ಜನಕ ಬಾದಲ್‌ ಸರ್ಕಾರ್‌ ಜೊತೆ ನಿಕಟವಾಗಿ ಕೆಲಸ ಮಾಡಿರುವ ಇವರು ಕರ್ನಾಟಕದ ಉದ್ದಗಲದಲ್ಲಿ ಸಂಚರಿಸಿ ಬೀದಿ ನಾಟಕ ತಂಡಗಳನ್ನು ಕಟ್ಟಿ ಪರಿಣಾಮಕಾರಿ ನಾಟಕಗಳನ್ನು ಮಾಡಿಸಿದವರು. “ಸಮುದಾಯ’ದಲ್ಲಿ ಕೆಲಸ ಮಾಡಿರುವ ಇವರು ಸಾಕಷ್ಟು ರಾಜ್ಯಮಟ್ಟದ ಜಾಥಾಗಳನ್ನು ಯಶಸ್ವಿಯಾಗಿ ನಿರ್ವಹಿಸಿ¨ªಾರೆ. “ನೀನಾಸಂ’ನಲ್ಲಿ ನಾಟಕ ಪದವಿಯನ್ನು ಪಡೆದು ಜನಜಾಗೃತಿಗಾಗಿ ನಾಟಕ ಮಾಧ್ಯಮವನ್ನು ವಿವಿಧ ರೀತಿಯಲ್ಲಿ ಬಳಸಿ ಕೆಲವು ಹೊಸ ಪ್ರಕಾರಗಳನ್ನು ಯಶಸ್ವಿಯಾಗಿ ಹುಟ್ಟುಹಾಕಿದ್ದಾರೆ. ತೀಕ್ಷ್ಣವಾದ ವಿಚಾರಧಾರೆ, ನಿಷ್ಠುರವಾದ ಮಾತು, ಖಚಿತವಾದ ನಿಲುವಿನ, ಗಂಭೀರ ವ್ಯಕ್ತಿತ್ವದ ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು “ತಾಯಿ’, “ಕತ್ತಲೆ ದಾರಿ ದೂರ’, “ಗ್ರಾಮಚಾವಡಿ’, “ಬಸ್ತಿ’, “ನೆಮ್ಮದಿ ಅಪಾಮೆಂಟ್’, “ಜ್ಯೂಲಿಯಸ್‌ ಸೀಝರ್‌’, “ದಂಗೆಯ ಮುಂಚಿನ ದಿನಗಳು’ ಹಾಗೂ “ಸಂಪಿಗೆ ನಗರ ಪೋಲೀಸ್‌ ಸ್ಟೇಶನ್‌’.

ಕರ್ನಾಟಕ ಬೀದಿ ನಾಟಕ ಅಕಾಡೆಮಿಯ ಈ ಪುರಸ್ಕಾರವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾದುವ ಕಾಲೇಜ್‌ ಆಫ್ ಕಾಮರ್ಸ್‌ ಆ್ಯಂಡ್‌ ಮ್ಯಾನೇಮೆಂಟ್ ಇದರ ನಾಟಕ ತಂಡವಾದ ಪಾದುವ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ(ರಿ.) ಮಂಗಳೂರು ಹಾಗೂ ಅರೆಹೊಳೆ ಪ್ರತಿಷ್ಠಾನ ಜಂಟಿಯಾಗಿ ಪುರಸ್ಕೃತರಿಗೆ ನೀಡುತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next