Advertisement

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

09:04 AM Sep 19, 2024 | Team Udayavani |

ಹೊಸದಿಲ್ಲಿ: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಸ್ಕ್ವಾಡ್ರನ್‌ ಲೀಡರ್‌ ಮೋಹನಾ ಸಿಂಗ್‌ ಬುಧವಾರ ನಿಯೋಜ­ನೆಗೊಂಡಿದ್ದಾರೆ ಎಂದು ಅಧಿ­ಕಾ­ರಿಗಳು ತಿಳಿಸಿದ್ದಾರೆ.

Advertisement

ಗುಜ­ರಾತ್‌ನ ನಂ 18- ಫ್ಲೈಯಿಂಗ್‌ ಬುಲೆಟ್ಸ್‌ ಸ್ಕ್ವಾಡ್ರನ್‌ಗೆ ಮೋಹನಾ ನಿಯೋಜನೆಗೊಂಡಿದ್ದಾರೆ. ರಾಜಸ್ಥಾನದಲ್ಲಿದ್ದ ನಂ 3 ಫೈಟರ್‌ ಸ್ಕ್ವಾಡ್ರನ್‌ನಲ್ಲಿ ನಿಯೋಜನೆಗೊಂಡಿದ್ದ ಅವರು ಮಿಗ್‌-21 ಬೈಸಾನ್‌ ಯುದ್ಧ ವಿಮಾನದ ಹಾರಾಟ ನಡೆಸುತ್ತಿದ್ದರು. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಯುದ್ಧವಿಮಾನಗಳ ಪೈಲಟ್‌ಗಳಾಗಿ ಮೂವರು ಮಹಿಳೆಯರು ಸೇರ್ಪಡೆಗೊಂಡರು.

ಇದನ್ನೂ ಓದಿ: Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Advertisement

Udayavani is now on Telegram. Click here to join our channel and stay updated with the latest news.

Next