Advertisement

SpaceX; ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ!

01:20 AM Sep 13, 2024 | Team Udayavani |

ಹೊಸದಿಲ್ಲಿ: 4 ಮಂದಿ ಗಗನಯಾತ್ರಿಗಳ ತಂಡವೊಂದು ಇದೇ ಮೊದಲ ಬಾರಿಗೆ ಖಾಸಗಿ ಬಾಹ್ಯಾಕಾಶ ನಡಿಗೆಯನ್ನು ಗುರುವಾರ ಕೈಗೊಂಡಿದೆ. ಪೋಲಾರಿಸ್‌ ಡಾನ್‌ ಮಿಷನ್‌ ಭಾಗವಾಗಿ ಶತಕೋಟ್ಯ ಧೀಶ ಜೇರೆಡ್‌ ಐಸಾಕ್‌ಮನ್‌ ಸೇರಿ ನಾಲ್ವರು ಸ್ಪೇಸ್‌ಎಕ್ಸ್‌ ಮೂಲಕ ಬಾಹ್ಯಾ ಕಾಶಕ್ಕೆ ತೆರಳಿದ್ದಾರೆ.

Advertisement

ಇದು ವಾಣಿಜ್ಯಿಕ ವಾಗಿ ಅಭಿವೃದ್ಧಿಪಡಿಸಿದ ಉಪಕರಣ ಗಳು, ನವೀನ ಕಾರ್ಯವಿಧಾನಗಳು ಮತ್ತು ಹೊಸ ಸ್ಪೇಸ್‌ಎಕ್ಸ್‌ ಇವಿಎ ಸೂಟ್‌ಗಳನ್ನು ಬಳಸಿಕೊಂಡು ಮೊಟ್ಟಮೊದಲ ಎಕ್ಸ್‌ಟ್ರಾ ವೆಹಿಕಲರ್‌ ಆ್ಯಕ್ಟಿವಿಟಿ(ಇವಿಎ) ಎಂದು ದಾಖಲಾಯಿತು.

ಈವರೆಗೆ 12 ದೇಶದ ವೃತ್ತಿಪರ ಗಗನಯಾತ್ರಿಗಳು ಮಾತ್ರ ಬಾಹ್ಯಾಕಾಶ ನಡಿಗೆ ಕೈಗೊಂಡಿ ದ್ದರು. ಇದೀಗ ಖಾಸಗಿ ಬಾಹ್ಯಾಕಾಶ ನಡಿಗೆಯ ಮೂಲಕ ಹೊಸ ಅಧ್ಯಾಯ ಶುರುವಾಗಿದೆ. ಅಮೆರಿಕದ ಫ್ಲೋರಿಡಾ ದಿಂದ ಬಾಹ್ಯಾಕಾಶಕ್ಕೆ ನೆಗೆದ ಇವರು, ಸ್ಪೇಸ್‌ಎಕ್ಸ್‌ ಅಭಿವೃದ್ಧಿಪಡಿಸಿರುವ ಹೊಸ ಸೂಟ್‌ ಧರಿಸಿಯೇ ಈ ಸಾಧನೆ ಮಾಡಿದ್ದಾರೆ. ಬಾಹ್ಯಾಕಾಶ ಕಕ್ಷೆಯನ್ನು ಅರ್ಧಕ್ಕೆ (740 ಕಿ.ಮೀ.) ಇಳಿಸಲಾಗಿತ್ತು. ಈ ಪೈಕಿ ಒಬ್ಬರ ವೀಡಿಯೋವನ್ನು ಸ್ಪೇಸ್‌ ಎಕ್ಸ್‌ ಹಂಚಿಕೊಂಡಿದೆ. ಒಬ್ಬರು ಕ್ಯಾಪ್ಸೂéಲ್‌ನಿಂದ ಹೊರಗೆ 10 ನಿಮಿಷ ಕಳೆದ ಬಳಿಕ, ಮತ್ತೂಬ್ಬರು ಹೊರ ಹೋಗಿ ಬಾಹ್ಯಾಕಾಶ ನಡಿಗೆ ಪೂರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next