Advertisement

ಸಾಗಿಬಂದ ಹಾದಿ ಮರೆಯಬಾರದು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

12:26 PM Mar 08, 2020 | Suhan S |

ಬೆಂಗಳೂರು: ಮನುಷ್ಯ ಎಷ್ಟೇ ಪ್ರಗತಿ ಸಾಧಿಸಿದರೂ ತಾನು ಬೆಳೆದುಬಂದ ಹಾದಿಯನ್ನು ಮರೆಯಬಾರದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಬೆಂಗಳೂರು ಹೊರವಲಯದ ಜನಸೇವಾ ವಿದ್ಯಾಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂಘ ಇಷ್ಟೊಂದು ಬದಲಾಗಿದೆ. ಆದರೆ,  ಸ್ವಯಂಸೇವಕರ  ನಿಷ್ಠೆ, ಪ್ರಮಾಣಿಕತೆ,  ಶ್ರದ್ಧೆ ಸ್ವಲ್ಪವೂ  ಬದಲಾಗಿಲ್ಲ. ಹಿಂದೆ ಹೇಗೆ ಕೆಲಸ ಮಾಡುತ್ತಿದ್ದರೂ ಈಗಲೂ ಹಾಗೆ ಕೆಲಸ ಮಾಡುತ್ತಾರೆ ಎಂದರು.

ಜಗತ್ತಿನಲ್ಲಿ ನಾವು ಮುಂದೆ ಸಾಗಬೇಕಾದರೆ ಸಾಧನೆ ಬೇಕು. ಲೋಕಕಲ್ಯಾಣಕ್ಕಾಗಿ ಸುವಿಧ ಇರಬೇಕು. ಸಾಧನೆ ಮತ್ತು ಸುವಿಧದಿಂದ ಜಗತ್ತು ಚೆನ್ನಾಗಿರುತ್ತದೆ. ಶಿಕ್ಷಣವು ಸಂಸ್ಕಾರದ ಭಾಗವಾಗಿರಬೇಕು ಮತ್ತು ಕಾರ್ಯಪರತೆಯು ಉತ್ಕೃಷ್ಟ ರೂಪದಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.

ಮುದ್ದೇನ ಹಳ್ಳಿ ಸತ್ಯಸಾಯಿ ಗ್ರಾಮದ ಮಧುಸೂಧನ್ ಸಾಯಿ ಜೀ,  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಸಚಿವರಾದ ಆರ್ ಅಶೋಕ್, ವಿ ಸೋಮಣ್ಣ, ಬೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಆರೆಸ್ಸೆಸ್ ಪ್ರಮುಖರಾದ ಕಲಡ್ಕ ಪ್ರಭಾಕರ್ ಭಟ್ ಮತ್ತು ಮುಕುಂದ್ ಮೊದಲಾದವವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next