ಮೂಡುಬಿದಿರೆ : ಮನಸ್ಸು ಕಟ್ಟುವ ಕೆಲಸಕ್ಕಾಗಿ ನನ್ನ ಬದುಕಿನಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. 25 ವಿರಾಸತ್, 17 ನುಡಿಸಿರಿ ನಡೆಸಿ¨ªಾಗಿದೆ. ಈಗ ವಿಶ್ವ ಮಟ್ಟದ ಸ್ಕೌಟ್ ಸಾಂಸ್ಕೃತಿಕ ಜಾಂಬೂರಿಯ ವಿಚಾರ. ಅದು ಸವಾಲು ಹೌದು, ಆದರೆ ಯುವಶಕ್ತಿಯ ಮನಸ್ಸನ್ನು ಸದಭಿರುಚಿ, ಸಂಸ್ಕೃತಿಯಿಂದ ಸಮೃದ್ಧಗೊಳಿಸಲು ಒಳ್ಳೆಯ ಅವಕಾಶ.
Advertisement
ಇದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಜಾಂಬೂರಿಯ ಸಮಗ್ರ ಉಸ್ತುವಾರಿ ವಹಿಸಿಕೊಂಡಿರುವ ಡಾ| ಮೋಹನ ಆಳ್ವ ಅವರ ಖಚಿತ ನುಡಿ. ಜಾಂಬೂರಿಯ ಕೊನೆಯ ಹಂತದ ಸಿದ್ಧತೆಯ ಮಧ್ಯೆ ಅವರು ಉದಯವಾಣಿ ಯೊಂದಿಗೆ ಹಲವು ವಿಚಾರಗಳನ್ನು ಹಂಚಿ ಕೊಂಡರು. ಅದರ ಮುಖ್ಯಾಂಶ ಇಲ್ಲಿವೆ.
ಸಮಾಜ ಹೇಗೆಯೇ ಇರಲಿ, ಮಕ್ಕಳಿಗೆ ಶಿಕ್ಷಣಕ್ಕೆ ಕೊರತೆಯಾಗುವುದಿಲ್ಲ, ಆದರೆ ಅವರಿಗೆ ಒಳ್ಳೆಯ ಮನಸ್ಸು ಕಟ್ಟಿಕೊಡಲು ಸೋಲುತ್ತದೆ. ಒಳ್ಳೆಯ ಮನಸ್ಸು ಎಂದರೆ ದೇಶಪ್ರೇಮ, ಸಹಬಾಳ್ವೆ, ಭಾÅತೃತ್ವ, ಪರಿಸರ ಸಂರಕ್ಷಣೆಯ ಅರಿವು, ಗುರುಹಿರಿಯರ ಮೇಲೆ ಗೌರವ ಇತ್ಯಾದಿ. ನಮ್ಮ ದೇಶದಲ್ಲಿ ಒಂದನೇ ತರಗತಿಯಿಂದ ಸ್ನಾತಕೋತ್ತರ ವರೆಗೆ 40 ಕೋಟಿ ಯುವಜನರಿ¨ªಾರೆ. ಅವರ ಮನಸ್ಸು ಕಟ್ಟುವ ಕೆಲಸ ಆಗಬೇಕಿದೆ. ಅದರ ಸಣ್ಣ ಪ್ರಯತ್ನ ಇಲ್ಲಿ ಮಾಡುತ್ತೇವೆ. ಇದು ವಿಶೇಷ ಯಾಕೆಂದರೆ…
ಇಷ್ಟರ ವರೆಗೆ 24 ಬಾರಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಆಗಿದೆ. ಬೇರೆ ಕಡೆ ಡೇರೆಯಲ್ಲಿ ಕೂರಿಸುತ್ತಾರೆ, ಇಲ್ಲಿ ಸುಸಜ್ಜಿತ ಹಾಸ್ಟೆಲ್ ಕಟ್ಟಡಗಳಲ್ಲಿ ಶೌಚಾಲಯದ ಸರಿಯಾದ ವ್ಯವಸ್ಥೆ ಮಾಡಿದ್ದೇವೆ,
ಹಿಂದೆ ಊಟೋಪಚಾರವನ್ನು ಸಂಬಂಧಪಟ್ಟ ರಾಜ್ಯದವರೇ ನೋಡುತ್ತಿದ್ದರು. ಇಲ್ಲಿ ನಾವೇ ಕಲ್ಪಿಸುತ್ತಿದ್ದೇವೆ. ಹೊರಗಿನ ಜನರಿಗೆ ಜಾಂಬೂರಿಯಲ್ಲಿ ಪ್ರವೇಶ ಇರುತ್ತಿರಲಿಲ್ಲ, ಸ್ಕೌಟ್‌ಆಂದೋಲನದ ಬಗ್ಗೆ ಅರಿವು
ಮೂಡಬೇಕು ಎಂಬ ಕಾರಣಕ್ಕಾಗಿ ನಾವು ಜನಸಾಮಾನ್ಯರಿಗೂ ಪ್ರವೇಶಾವಕಾಶ ಕೊಟ್ಟಿದ್ದೇವೆ. ಇಲ್ಲಿ ಸಾಂಸ್ಕೃತಿಕ, ಶಾಸ್ತ್ರೀಯ, ಜನಪದ ವಿಚಾರಗಳಿರುತ್ತವೆ. ಸೃಜನಶೀಲತೆ, ಆಸಕ್ತಿ, ಕುತೂಹಲ ತಣಿಸುವುದು, ಸಾಹಸಮಯ ಕೆಲಸಕ್ಕೆ ಒತ್ತುಕೊಡಲಿದ್ದೇವೆ. 12 ಎಕ್ರೆ ಅರಣ್ಯವನ್ನು ಕಾಡಿನ ಪರಿಸರ ಪರಿಚಯಕ್ಕೆ ಸಿದ್ಧಗೊಳಿಸಿದ್ದೇವೆ. ಜಾಂಬೂರಿ ನಡೆಯುವ ಇಂಚಿಂಚು ಜಾಗದಲ್ಲೂ ಕಲಾಕೃತಿಗಳಿದ್ದು ಮಕ್ಕಳ ಮನಸ್ಸನ್ನು ಪ್ರಫುಲ್ಲಗೊಳಿಸಲಿದ್ದೇವೆ.
Related Articles
35ರಿಂದ 40 ಕೋಟಿ ರೂ. ಹೇಗಾದರೂ ಬೇಕಾಗುತ್ತದೆ. ಕಿಟ್, ಆಹಾರ, ಸಾಂಸ್ಕƒತಿಕ ಮೇಳದ ಖರ್ಚು, ಇತರ ಶೋಭೆ ತರುವ ವಿಚಾರಗಳಿಗೆ ದೊಡ್ಡ ಮೊತ್ತ ಬೇಕು, ರಾಜ್ಯ ಸರಕಾರ 10 ಕೋಟಿ ರೂ. ಕೊಟ್ಟಿದೆ. ಇನ್ನಷ್ಟು ಬರುವ ನಿರೀಕ್ಷೆ ಇದೆ.
Advertisement
ಯಾವ ಇಲಾಖೆ ಎಂಬುದೇ ಗೊಂದಲ115 ವರ್ಷದ ಇತಿಹಾಸದಲ್ಲಿ ಸ್ಕೌಟ್ ಯಾವ ಇಲಾಖೆಯಡಿ ಬರುತ್ತದೆ ಎನ್ನುವುದೇ ಇನ್ನೂ ಸ್ಪಷ್ಟವಾಗಿಲ್ಲ, ಶಿಕ್ಷಣ ಇಲಾಖೆ, ಕ್ರೀಡೆ, ಸಂಸ್ಕƒತಿ ಯಾವುದೆನ್ನುವುದೇ ತಿಳಿಯದು. ಅದು ನಮ್ಮ ದುರಂತ, ಹಾಗಾಗಿ ಕೇಂದ್ರದಿಂದಲೂ ಯಾವುದೇ ಸಹಾಯ ಬರುತ್ತಿಲ್ಲ. ಯುವಶಕ್ತಿ ಕೇಂದ್ರ ಆಗಬೇಕು
ಜಾಂಬೂರಿ ಇಲ್ಲಿಗೆ ನಿಲ್ಲಬಾರದು, ಇದರ ಸ್ಫೂರ್ತಿ ಪಡೆದು ಪಿಲಿಕುಳದಲ್ಲಿರುವ 15 ಎಕ್ರೆ ಜಾಗದ್ಲೊಂದು ಯುವಶಕ್ತಿ ಕೇಂದ್ರ ಸ್ಥಾಪನೆಯಾಗಬೇಕು ಎನ್ನುವುದು ನನ್ನ ಗುರಿ. ಎನ್‌ಸಿಸಿ, ಸ್ಕೌಟ್, ಎನ್‌ಎಸ್‌ಎಸ್, ಮಿಲಿಟರಿ ಇಂತಹ ವಿಚಾರದಲ್ಲಿ 1000 ಮಂದಿಯ ಶಿಬಿರ ನಡೆಸುವಂತಹ ವ್ಯವಸ್ಥೆ ಇದಾಗಬೇಕು ಎಂಬುದೇ ನನ್ನ ಆಶಯ ಎಂದರು ಆಳ್ವ. – ವೇಣುವಿನೋದ್ ಕೆ.ಎಸ್.