ನವದೆಹಲಿ: ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿರುವ ದೆಹಲಿ ಪೊಲೀಸರು, ಜುಬೈರ್ ಕಂಪನಿ ಪಾಕಿಸ್ತಾನ, ಸಿರಿಯಾ ಮತ್ತು ಇತರ ಗಲ್ಫ್ ದೇಶಗಳಿಂದ ದೇಣಿಗೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ನೂಪುರ್ ಹೇಳಿಕೆಗೆ ಬೆಂಬಲ:ಮಹಾರಾಷ್ಟ್ರದಲ್ಲೂ ವ್ಯಕ್ತಿಯ ಹತ್ಯೆ: ತಡವಾಗಿ ಬೆಳಕಿಗೆ ಬಂದ ಪ್ರಕರಣ
ಆಲ್ಟ್ ನ್ಯೂಸ್ ನ ಮೂಲ ಕಂಪನಿಯಾದ ಪ್ರಾವ್ಡಾ ಮೀಡಿಯಾಕ್ಕೂ ಜುಬೈರ್ ನಿರ್ದೇಶಕನಾಗಿದ್ದು, ಈ ಕಂಪನಿ ಎರಡು ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ವಿವಿಧ ವಹಿವಾಟಿನ ಮೂಲಕ ಪಡೆಯಲಾಗಿದ್ದು, ಇದರ ಐಪಿ ವಿಳಾಸ ವಿದೇಶಗಳದ್ದಾಗಿದೆ ಎಂದು ದೆಹಲಿ ಪೊಲೀಸರ ಪರ ವಕೀಲರು ಚೀಫ್ ಮೆಟ್ರೋಪಾಲಿಟಿಯನ್ ಮ್ಯಾಜಿಸ್ಟ್ರೇಟ್ ಗೆ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಬಂದಿದ್ದು, ಇದರ ಮೂಲವನ್ನು ಪರಿಗಣಿಸಬೇಕಾಗಿದೆ. ಇದೊಂದು ಕೇವಲ ಸಾಧಾರಣ ಟ್ವೀಟ್ ಗೆ ಸಂಬಂಧಪಟ್ಟ ಪ್ರಕರಣವಲ್ಲ. ಪಾವ್ಡಾ ಮೀಡಿಯಾ ಡೈರೆಕ್ಟರ್ ಆರೋಪಿ ಜುಬೈರ್, ತುಂಬಾ ಚಾಣಕ್ಷತನದಿಂದ ಎಲ್ಲವನ್ನೂ ಡಿಲೀಟ್ ಮಾಡುತ್ತಿರುವುದಾಗಿ ದೆಹಲಿ ಪೊಲೀಸರು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
14 ದಿನಗಳ ನ್ಯಾಯಾಂಗ ಬಂಧನ:
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಜಾಮೀನು ಅರ್ಜಿಯನ್ನು ದೆಹಲಿಯ ಪಟಿಯಾಲಾ ಹೈಕೋರ್ಟ್ ವಾದ, ಪ್ರತಿವಾದ ಆಲಿಸಿದ ನಂತರ ವಜಾಗೊಳಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.