Advertisement

Ankle Injury: ಐಪಿಎಲ್ ಗಿಲ್ಲ ಮೊಹಮ್ಮದ್ ಶಮಿ; ಗುಜರಾತ್ ಗೆ ಭಾರಿ ಹಿನ್ನಡೆ

03:36 PM Feb 22, 2024 | Team Udayavani |

ಹೊಸದಿಲ್ಲಿ: ಕಳೆದ ಏಕದಿನ ವಿಶ್ವಕಪ್ ನಲ್ಲಿ ಮಿಂಚಿದ್ದ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವುದಿಲ್ಲ. ಈ ಬಗ್ಗೆ ವರದಿಯಾಗಿದೆ.

Advertisement

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಎಡ ಪಾದದ ಗಾಯದಿಂದಾಗಿ ಬ್ರಿಟನ್‌ ನಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಐಪಿಎಲ್ 2024 ರಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

ಮೊಹಮ್ಮದ್ ಶಮಿ ಅವರು ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಾರೆ. ಹೊಸ ನಾಯಕ ಶುಭ್ಮನ್ ಗಿಲ್ ಅವರಿಗೆ ಇದೀಗ ಶಮಿ ಅಲಭ್ಯತೆ ದೊಡ್ಡ ಹಿನ್ನಡೆಯಾಗಿದೆ.

ಕಳೆದೆರಡು ಸೀಸನ್ ಗಳಲ್ಲಿ ಶಮಿ ಅವರು ಗುಜರಾತ್ ತಂಡಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. 2022ರ ಸೀಸನ್ ನಲ್ಲಿ 20 ವಿಕೆಟ್ ಕಿತ್ತಿದ್ದ ಶಮಿ, 2023ರ ಆವೃತ್ತಿಯಲ್ಲಿ 18.64ರ ಸರಾಸರಿಯಲ್ಲಿ 28 ವಿಕೆಟ್ ಕಿತ್ತು ಮಿಂಚಿದ್ದರು. ಈ ಎರಡೂ ಆವೃತ್ತಿಗಳಲ್ಲಿ ಗುಜರಾತ್ ಫೈನಲ್ ಪ್ರವೇಶ ಪಡೆದು ಮೊದಲ ಬಾರಿ ಗೆಲುವು ಕಂಡಿತ್ತು.

ಗುಜರಾತ್ ಟೈಟಾನ್ಸ್ ಇದುವರೆಗೂ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಶಮಿ ಅಲಭ್ಯತೆಯ ಕಾರಣದಿಂದ ಗುಜರಾತ್ ಫ್ರಾಂಚೈಸಿಯು ಬದಲಿ ಆಟಗಾರನ ಹುಡುಕಾಟದಲ್ಲಿದೆ. ಐಪಿಎಲ್ ಮಿನಿ ಹರಾಜಿನಲ್ಲಿ ಬಿಕರಿಯಾಗದ ಆಟಗಾರನನ್ನು ಶಮಿ ಬದಲಿಯಾಗಿ ಖರೀದಿ ಮಾಡಬಹುದು.

Advertisement

“ಶಮಿ ಅವರು ವಿಶೇಷ ಪಾದದ ಚುಚ್ಚುಮದ್ದನ್ನು ತೆಗೆದುಕೊಳ್ಳಲು ಜನವರಿಯ ಕೊನೆಯ ವಾರದಲ್ಲಿ ಲಂಡನ್‌ ನಲ್ಲಿದ್ದರು. ಮೂರು ವಾರಗಳ ನಂತರ ಅವರು ಲಘು ಓಟವನ್ನು ಪ್ರಾರಂಭಿಸಬಹುದು ಎಂದು ಅವರಿಗೆ ತಿಳಿಸಲಾಯಿತು. ಆದರೆ ಚುಚ್ಚುಮದ್ದು ಅವರಿಗೆ ಕೆಲಸ ಮಾಡಲಿಲ್ಲ. ಹೀಗಾಗಿ ಈಗ ಉಳಿದಿರುವ ಏಕೈಕ ಆಯ್ಕೆಯೆಂದರೆ ಅದು ಶಸ್ತ್ರಚಿಕಿತ್ಸೆ. ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗಾಗಿ ಯುಕೆಗೆ ತೆರಳುತ್ತಾರೆ. ಐಪಿಎಲ್ ನಲ್ಲಿ ಆಡುವುದು ಕಷ್ಟ” ಎಂದು ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next