Advertisement

ಮೊಹಮ್ಮದ್‌ ಶಮಿ ಮೊಬೈಲ್‌ ವಶ

06:00 AM Mar 14, 2018 | Team Udayavani |

ಕೋಲ್ಕತಾ: ಕಲಕಿದ ನೀರಂತಾಗಿರುವ ಭಾರತದ ವೇಗಿ ಮೊಹಮ್ಮದ್‌ ಶಮಿ ಅವರ ವೈವಾಹಿಕ ಬದುಕು ಸರಿದಾರಿಗೆ ಬರುವಂತೆ ಕಾಣುತ್ತಿಲ್ಲ. ಶಮಿ ಪತ್ನಿ ಹಸಿನ್‌ ಜಹಾನ್‌ ಕಳೆದ ಕೆಲವು ದಿನಗಳಿಂದ ಶಮಿ ವಿರುದ್ಧ ವಿವಿಧ ದೂರುಗಳನ್ನು ನೀಡುತ್ತಲೇ ಇದ್ದು, ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಕೋಲ್ಕತಾ ಪೊಲೀಸರು ಶಮಿಯವರ ಮೊಬೈಲ್‌ ಫೋನನ್ನು ವಶಕ್ಕೆ ಪಡೆದಿದ್ದಾರೆ.

Advertisement

ಶಮಿಯ ವಿರುದ್ಧ ಜಹಾನ್‌ ಕಿರುಕುಳ, ಕೊಲೆಗೆ ಯತ್ನ, ಅನೈತಿಕ ಸಂಬಂಧ, ಅತ್ಯಾಚಾರಕ್ಕೆ ಯತ್ನ, ಮ್ಯಾಚ್‌ ಫಿಕ್ಸಿಂಗ್‌ನಂಥ ಗಂಭೀರ ಆರೋಪಗಳನ್ನು ಮಾಡಿದ್ದು, ಪ್ರಕರಣವನ್ನು ಕೋಲ್ಕತಾದ ಲಾಲ್‌ ಬಜಾರ್‌ ಪೊಲೀಸ್‌ ತನಿಖಾ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಹಕರಿಸುವಂತೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ)ಯನ್ನು ಕೇಳಿರುವ ಪೊಲೀಸರು, ಶಮಿ ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ಮರಳುತ್ತಿದ್ದ ವೇಳೆ ಉಳಿದುಕೊಂಡಿದ್ದ ಬಗ್ಗೆ, ಪ್ರಯಾಣದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.

ಹಸಿನ್‌ ಮಾಡಿರುವ ಆರೋಪದ ವಿಚಾರಣೆಗೆ ಸಂಬಂಧಿಸಿ ಶಮಿಯ ಮೊಬೈಲ್‌, ಸಿಮ್‌ ವಶಕ್ಕೆ ಪಡೆದಿರುವ ಪೊಲೀಸರು ಮೊಬೈಲನ್ನು ಫೊರೆನ್ಸಿಕ್‌ ಪರೀಕ್ಷೆಗೆ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next