Advertisement

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

11:15 PM Oct 25, 2021 | Team Udayavani |

ಹೊಸದಿಲ್ಲಿ: ಪಾಕಿಸ್ಥಾನ ವಿರುದ್ಧ ಸೋಲನುಭವಿ ಸಿದ ಬಳಿಕ ತೀವ್ರ ಟೀಕೆಗೊಳಗಾಗಿ, ಸಾಮಾಜಿಕ ಜಾಲತಾಣಿಗರ ದಾಳಿಗೆ ತುತ್ತಾಗಿರುವ ಮೊಹಮ್ಮದ್‌ ಶಮಿ ಬೆಂಬಲಕ್ಕೆ ಸಹಸ್ರ ಸಹಸ್ರ ಮಂದಿ ಧಾವಿಸಿದ್ದಾರೆ.

Advertisement

ಐಕಾನಿಕ್‌ ಕ್ರಿಕೆಟರ್‌ ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹವಾಗ್‌, ರಾಜಕಾರಣಿಗಳು, ಟೀಮ್‌ ಇಂಡಿಯಾದ ಅಪ್ಪಟ ಅಭಿಮಾನಿಗಳು ಶಮಿಗೆ ನೈತಿಕ ಶಕ್ತಿ ತುಂಬಿದ್ದಾರೆ.

ಪಾಕ್‌ ಎದುರಿನ ಸೋಲಿನಲ್ಲಿ ಭಾರತದ ಬೌಲಿಂಗ್‌ ದಯನೀಯ ವೈಫ‌ಲ್ಯ ಕಂಡಿತ್ತು. ಪ್ರಧಾನ ವೇಗಿ ಮೊಹಮ್ಮದ್‌ ಶಮಿ 3.5 ಓವರ್‌ಗಳಲ್ಲಿ 43 ರನ್‌ ನೀಡಿ ಅತ್ಯಂತ ದುಬಾರಿಯಾಗಿದ್ದರು. ಇದನ್ನು ಸಹಿಸದ ಜಾಲತಾಣಿಗರು, “ನೀವು ಪಾಕಿಸ್ಥಾನದ ಪರ ಆಡುವುದಿದ್ದರೆ ಭಾರತದ ಜೆರ್ಸಿ ತೊಡುವುದೇಕೆ..’ ಎಂದೆಲ್ಲ ಟೀಕಾಪ್ರಹಾರ ಮಾಡಿದ್ದರು.

“ನಾವು ಟೀಮ್‌ ಇಂಡಿಯಾವನ್ನು ಬೆಂಬಲಿಸುವಾಗ ತಂಡದ ಎಲ್ಲ ಆಟಗಾರರನ್ನೂ ಬೆಂಬಲಿಸುತ್ತೇವೆ. ಮೊಹಮ್ಮದ್‌ ಶಮಿ ವಿಶ್ವ ದರ್ಜೆಯ ಬೌಲರ್‌. ಇದು ಅವರ ದಿನವಾಗಿರಲಿಲ್ಲ, ಅಷ್ಟೇ. ನಾನು ಶಮಿ ಮತ್ತು ಟೀಮ್‌ ಇಂಡಿಯಾ ಪರವಾಗಿ ನಿಲ್ಲುತ್ತೇನೆ’ ಎಂಬುದು ಸಚಿನ್‌ ತೆಂಡುಲ್ಕರ್‌ ಪ್ರತಿಕ್ರಿಯೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

Advertisement

“ಶಮಿ ಮೇಲಿನ ಆನ್‌ಲೈನ್‌ ಆಕ್ರಮಣ ಅತ್ಯಂತ ಆಘಾತಕಾರಿ. ಅವರೋರ್ವ ಚಾಂಪಿಯನ್‌ ಬೌಲರ್‌.ಆನ್‌ಲೈನ್‌ನಲ್ಲಿ ಗಲಭೆ ಎಬ್ಬಿಸುವವರಿಗಿಂತ ಹೆಚ್ಚಿನ ದೇಶಪ್ರೇಮ ಭಾರತದ ಕ್ಯಾಪ್‌ ಧರಿಸಿದವರ ಹೃದಯದಲ್ಲಿರುತ್ತದೆ. ಶಮಿ, ಮುಂದಿನ ಪಂದ್ಯದಲ್ಲಿ ನಿಮ್ಮ ತಾಕತ್ತು ತೋರಿಸಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ’ ಎಂದು ಸೆಹವಾಗ್‌ ಆತ್ಮವಿಶ್ವಾಸ ತುಂಬಿದ್ದಾರೆ.

ಇರ್ಫಾನ್‌ ಪಠಾಣ್‌, ಹರ್ಭಜನ್‌ ಸಿಂಗ್‌, ಯಜುವೇಂದ್ರ ಚಹಲ್‌, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಲೋಕಸಭಾ ಸದಸ್ಯ ಅಸಾದುದ್ದೀನ್‌ ಒವೈಸಿ ಕೂಡ ಶಮಿ ಪರವಾಗಿ ನಿಂತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next