Advertisement
ಹೌದು, ಹಲವಾರು ಕಷ್ಟನಷ್ಟದ ನಂತರ ಶಮಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತನ್ನ ನಿಖರ ಬೌಲಿಂಗ್‌ನಿಂದಲೇ ಗಮನ ಸೆಳೆದ ಮಾಂತ್ರಿಕ ವೇಗಿಯಾಗಿದ್ದಾರೆ. ಗಾಯದಿಂದ ಸಮಸ್ಯೆ ಬಂದರೂ ಶಮಿ ಕುಗ್ಗಲಿಲ್ಲ. ತಂಡಕ್ಕೆ ಹಲವು ಸಲ ಆಯ್ಕೆಯಾಗದೆ ಇದ್ದಾಗಿಯೂ ಬೇಸರಪಟ್ಟುಕೊಳ್ಳಲಿಲ್ಲ. ಈ ನಡುವೆ ಕಳೆದೊಂದುವರೆ ವರ್ಷದಲ್ಲಿ ಸಂಸಾರ ರಾದ್ಧಾಂತ ಶಮಿಗೆ ಇನ್ನಿಲ್ಲದಂತೆ ಕಾಡಿದೆ, ಪತ್ನಿ ಹಸಿನ್ ಜಹಾನ್ ಜತೆಗಿನ ವಿರಸ ಸುನಾಮಿಯಂತೆ ಅಪ್ಪಳಿಸಿ ವೈಯಕ್ತಿಕ ಜೀವನವನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಇದೆಲ್ಲ ಆಗಿದ್ದರೂ ಶಮಿ ಕ್ಯಾರೆ ಅಂದಿಲ್ಲ. ಪ್ರಸಕ್ತ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಸಾಗುತ್ತಿರುವ ವಿಶ್ವ ಕೂಟದಲ್ಲಿ ಎಲ್ಲವನ್ನು ಮರೆತು ಪ್ರಚಂಡ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಶಮಿ ಸಾಧನೆಗೆ ಎಲ್ಲೆಡೆಯಿಂದ ಹೊಗಳಿಕೆಗಳ ಸುರಿಮಳೆ ಸುರಿಯುತ್ತಿದೆ. ಒಟ್ಟಾರೆ 15 ವಿಕೆಟ್ ಕಬಳಿಸಿ ಅಗ್ರ 6ನೇ ಸ್ಥಾನದಲ್ಲಿದ್ದಾರೆ. ಅಂತಹ ಸಾಧಕ ಶಮಿ ಬಗೆಗಿನ ಸಮಗ್ರ ಮಾಹಿತಿ ಇಲ್ಲಿದೆ ನೋಡಿ.
ವಿಶ್ವಕಪ್ ಕ್ರಿಕೆಟ್ ಕೂಟದ ಪಂದ್ಯವೊಂದರಲ್ಲಿ 5 ವಿಕೆಟ್ ಗೊಂಚಲು ಪಡೆದ ಬೌಲರ್‌ಗಳ ಪೈಕಿ ಮೊಹಮ್ಮದ್ ಶಮಿ ಭಾರತದ 6ನೇ ಬೌಲರ್ ಎನಿಸಿಕೊಂಡಿದ್ದಾರೆ. ಇಂಗೆÉಂಡ್ ವಿರುದ್ಧದ ಪಂದ್ಯದಲ್ಲಿ ಶಮಿ 69ಕ್ಕೆ5 ವಿಕೆಟ್ ಕಬಳಿಸಿದ್ದರು. ಈ ಮೂಲಕ ಕಪಿಲ್ ದೇವ್ (1983), ರಾಬಿನ್ ಸಿಂಗ್ (1999), ವೆಂಕಟೇಶ್ ಪ್ರಸಾದ್ (1999), ಆಶಿಷ್ ನೆಹ್ರಾ (2003), ಯುವರಾಜ್ ಸಿಂಗ್ (2011) ಇದೀಗ 2019ರಲ್ಲಿ ಮೊಹಮ್ಮದ್ ಶಮಿ ಅಂತಹ ದಿಗ್ಗಕ ಕ್ರಿಕೆಟಿಗರ ಸಾಧಕರ ಕ್ಲಬ್‌ಗ ಸೇರಿದ್ದಾರೆ. ಶಮಿ ಆಫ^ನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ 4 ವಿಕೆಟ್ ಉರುಳಿಸಿದ್ದರು. ಅದಾದ ಬಳಿಕ ಇಂಗ್ಲೆಂಡ್ ವಿರುದ್ಧ ಸಾಧನೆ ಮೆರೆದಿದ್ದರು ಎನ್ನುವುದು ವಿಶೇಷ. ಹ್ಯಾಟ್ರಿಕ್ ವೀರ ನಮ್ಮ ವೇಗಿ
ಮೊಹಮ್ಮದ್ ಶೆಮಿ ಆಫ^ನಿಸ್ತಾನ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಈ ಸಾಧನೆ ಮಾಡಿದ ಭಾರತ ನಾಲ್ಕನೇ ಬೌಲರ್ ಎನಿಸಿಕೊಂಡರು. ಹಿಂದೆ ಚೇತನ್ ಶರ್ಮ, ಕಪಿಲ್ ದೇವ್ ಹಾಗೂ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದರು.
Related Articles
ಮೊಹಮ್ಮದ್ ಶಮಿ ಜಾತಿ ಧರ್ಮ ಮೀರಿದ ಭಾರತದ ಕ್ರಿಕೆಟಿಗ. ಎಲ್ಲರು ಧರ್ಮಿಯರು ಶಮಿ ಪ್ರತಿಭೆಯನ್ನು ಇಷ್ಟಪಡುತ್ತಾರೆ ಹೊರತು ಅವರ ಧರ್ಮದಿಂದ ಅಲ್ಲ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಟೀವಿ ವಾಹಿನಿಯೊಂದರಲ್ಲಿ ಶಮಿ ಮುಸ್ಲಿಂ ಧರ್ಮಿಯನಾಗಿದ್ದು ತನ್ನ ಪ್ರಯತ್ನವನ್ನು ವಿಶ್ವಕಪ್‌ನಲ್ಲಿ ನಡೆಸಿದ್ದಾರೆ ಎಂದು ಹೇಳಿಕೆ ನೀಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಹೇಳಿಕೆ ಸ್ವತಃ ಮುಸ್ಲಿಂ ಧರ್ಮಿಯರ ಆಕ್ರೋಶಕ್ಕೂ ಸಿಲುಕಿದೆ. ಜಂಟ್ಲಮೆನ್ ಕ್ರೀಡೆ ಎಂದು ಕರೆಯಿಸಿಕೊಳ್ಳುವ ಕ್ರಿಕೆಟ್‌ನಲ್ಲಿ ಇಂತಹ ಕೀಳು ಮಟ್ಟದ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ ಎನ್ನುವುದನ್ನು ನಾಲಿಗೆ ಹೊರಗೆ ಚಾಚುವ ಮೊದಲು ಅಬ್ದುಲ್ ರಜಾಕ್ ಯೋಚಿಸಬೇಕಿತ್ತು ಎನ್ನುವುದು ಹಲವರ ವಾದವಾಗಿದೆ.
Advertisement
ಕ್ರಿಕೆಟ್ ಶಮಿಗೆ ಸರ್ವಸ್ವ: ಶಮಿ ಮೂಲತಃ ಉತ್ತರ ಪ್ರದೇಶದವರು. ಬಾಲ್ಯದಿಂದಲೂ ಕ್ರಿಕೆಟ್‌ಗಾಗಿ ಪ್ರತಿ ಕ್ಷಣವೂ ಅವರ ಮನ ತುಡಿಯುತ್ತಿತ್ತು. ನಿರಂತರ ಕ್ರಿಕೆಟ್ ಅಭ್ಯಾಸದ ಫಲವೊ ಗೊತ್ತಿಲ್ಲ, 2010ರಲ್ಲಿ ಅಸ್ಸಾಂ ವಿರುದ್ಧ ಆಡುವ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಶಮಿ ಆಡಲು ಶುರು ಮಾಡಿದರು. ಆಡಿದ ಮೊದಲ ಪಂದ್ಯದಲ್ಲೇ ಭರ್ಜರಿ 3 ವಿಕೆಟ್ ಕಿತ್ತು ಮಿಂಚಿದ್ದರು. 2012ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ “ಎ’ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾದರು. ಆ ಪ್ರವಾಸದಲ್ಲಿ ಚೇತೇಶ್ವರ ಪೂಜಾರ ಜತೆಗೆ 10ನೇ ವಿಕೆಟ್‌ಗೆ 73 ರನ್ ಜತೆಯಾಟ ನೀಡಿ ಎಲ್ಲರ ಗಮನ ಸೆಳೆದಿದ್ದರು. ಒಟ್ಟು 63 ಪಂದ್ಯಗಳಲ್ಲಿ ಉತ್ತರ ಪ್ರದೇಶ ತಂಡ ಪ್ರತಿನಿಧಿಸಿ 242 ವಿಕೆಟ್ ಕಬಳಿಸಿದ್ದಾರೆ. 2013ರಲ್ಲಿ ನವದೆಹಲಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಏಕದಿನ ತಂಡದ ಪರ ಪದಾರ್ಪಣೆ ಮಾಡಿದರು. 2013 ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ ಶಮಿ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದಾರೆ. ಶಮಿ ಭಾರತದ ಪರ 40 ಟೆಸ್ಟ್‌ನಿಂದ 144 ವಿಕೆಟ್ ಕಬಳಿಸಿದ್ದಾರೆ. ಒಟ್ಟು ಇದುವರೆಗೆ 67 ಏಕದಿನ ಪಂದ್ಯವನ್ನಾಡಿ 127 ಹಾಗೂ 7 ಟಿ20 ಪಂದ್ಯದಿಂದ 8 ವಿಕೆಟ್ ಉರುಳಿಸಿದ್ದಾರೆ.
ಬಿರುಗಾಳಿಗೆ ಸಿಕ್ಕ ವೈಯಕ್ತಿಕ ಜೀವನಮೊಹಮ್ಮದ್ ಶಮಿ ತಮ್ಮ ಬಾಳಸಂಗಾತಿಯಾಗಿ ಹಸಿನ್ ಜಹಾನ್ ಎಂಬುವವರನ್ನು ಕೈಹಿಡಿದಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಅವರಿಬ್ಬರ ನಡುವೆ ಮನಸ್ತಾಪ ದೊಡ್ಡದಾಗಿದೆ. ಇದೀಗ ಡೈವರ್ ತನಕ ಬಂದಿದೆ. ಒಂದು ಹೆಣ್ಣು ಮಗು ಜನನದ ಬಳಿಕ ಅವರಿಬ್ಬರು ಚೆನ್ನಾಗಿದ್ದರು. ಆದರೆ ಹಠಾತ್ ಅವರ ಕುಟುಂಬ ಅಸಮಾಧಾನದ ಬಿರುಗಾಳಿಗೆ ಸಿಲುಕಿದ್ದು ವಿಶೇಷ. ಸದ್ಯ ಹಸಿನ್ ಜಹಾನ್ ಪತಿ ಶಮಿ ಹಾಗೂ ಕುಟುಂಬದ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಇದರ ವಿಚಾರಣೆ ಇನ್ನೂ ನ್ಯಾಯಾಲಯದ ಮೆಟ್ಟಿಲಲ್ಲಿದೆ. ಒಂದು ಹಂತದಲ್ಲಿ ಶಮಿ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದೇ ಕಷ್ಟ ಎಂದು ಹೇಳಲಾಗಿತ್ತು. ಆದರೆ ಶಮಿ ಅಪರಾಧಿ ಎನ್ನುವುದು ಸಾಬೀತಾದರೆ ಮಾತ್ರ ಅವರನ್ನು ತಂಡದಿಂದ ಹೊರಕ್ಕೆ ಹಾಕಲಾಗುವುದು ಎಂದು ಬಿಸಿಸಿಐ ತಿಳಿಸಿದ್ದರಿಂದ ಈ ಬಗ್ಗೆ ಇದ್ದ ಎಲ್ಲ ಗೊಂದಲ ಪರಿಹಾರಗೊಂಡಿತ್ತು.