Advertisement

ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್‌ ಶಮಿ!

12:59 AM May 04, 2020 | Sriram |

ಹೊಸದಿಲ್ಲಿ: ಕೌಟುಂಬಿಕ ಕಲಹ, ವೈಯಕ್ತಿಕ ಕಾರಣ ಹಾಗೂ ಖಿನ್ನತೆಯಿಂದ ತಾನು ಮೂರು ಸಲ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂಬುದಾಗಿ ಸ್ಪೀಡ್‌ಸ್ಟರ್‌ ಮೊಹಮ್ಮದ್‌ ಶಮಿ ಹೇಳಿದ್ದಾರೆ. ಇದು ಎರಡು ವರ್ಷಗಳ ಹಿಂದಿನ ಸಂಗತಿಯಾಗಿದ್ದು, ಆಗ ಕುಟುಂಬವಿಡೀ ತನ್ನ ಮೇಲೆ ಭಾರೀ ಕಣ್ಗಾವಲು ಇರಿಸಿತ್ತು, ಎಂದಿದ್ದಾರೆ.

Advertisement

ಭಾರತದ ಪ್ರಧಾನ ವೇಗಿಯಾಗಿರುವ ಮೊಹಮ್ಮದ್‌ ಶಮಿ ಅವರ ವೈವಾಹಿಕ ಬದುಕು ಆಗಾಗ ಅನಪೇಕ್ಷಿತ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಜತೆಗೆ ಸಾಕಷ್ಟು ವೈಯಕ್ತಿಕ ಸಮಸ್ಯೆಗಳೂ ಎದುರಾಗಿದ್ದವು. ಕ್ರಿಕೆಟ್‌ನಿಂದಲೂ ದೂರವಾಗಬೇಕಾಯಿತು. ತಾನು ಮಾನಸಿಕವಾಗಿ ನೊಂದಿದ್ದೆ, ಖಿನ್ನತೆಗೆ ಒಳಗಾದೆ. ಹೀಗಾಗಿ ಮೂರು ಸಲ ಸಾಯಲು ಮುಂದಾಗಿದ್ದೆ ಎಂದು ರೋಹಿತ್‌ ಶರ್ಮ ಜತೆಗಿನ ಇನ್‌ಸ್ಟಾಗ್ರಾಮ್‌ ಚಾಟ್‌ ವೇಳೆ ಮೊಹಮ್ಮದ್‌ ಶಮಿ ಹೇಳಿಕೊಂಡಿದ್ದಾರೆ.

“ಮಾನಸಿಕ ಒತ್ತಡದಿಂದ ಹೊರಬಂದು ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಕೊಡು ಎಂದು ಹೆತ್ತವರು ಸಲಹೆ ನೀಡುತ್ತಿದ್ದರು. ನನ್ನ ಸೋದರನೂ ಬೆಂಬಲಕ್ಕೆ ನಿಂತ. ಆದರೆ ನನಗೆ ಏನೂ ತೋಚುತ್ತಿರಲಿಲ್ಲ. 2-3 ಮಂದಿ ಗೆಳೆಯರು ನನ್ನನ್ನು ಕಾಯುತ್ತಲೇ ಇದ್ದರು. ಅಪಾರ್ಟ್‌ಮೆಂಟ್‌ನ 24ನೇ ಮಹಡಿಯಲ್ಲಿ ನಮ್ಮ ವಾಸ. ಇಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಾನು ಎಂಬ ಆತಂಕ ಅವರದಾಗಿತ್ತು…’ ಎಂದು ಶಮಿ ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next