Advertisement

ಜಾಮೀನು ಅರ್ಜಿ ವಜಾ; ಮೊಹಮ್ಮದ್ ನಲಪಾಡ್ ಗೆ “ಬ್ಲ್ಯಾಕ್ ಪ್ರೈಡೇ”

03:35 PM Mar 02, 2018 | Sharanya Alva |

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಕಳೆದ ಹತ್ತು ದಿನಗಳಿಂದ ಜೈಲು ಕಂಬಿ ಎಣಿಸುತ್ತಿದ್ದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಾಗೂ ಉಳಿದ 6 ಆರೋಪಿಗಳ ಜಾಮೀನು ಅರ್ಜಿಯನ್ನು ಬೆಂಗಳೂರಿನ 63ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿ ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಿದೆ.

Advertisement

ಇದೊಂದು ಗಂಭೀರ ಪ್ರಕರಣವಾಗಿದೆ. ಇಂತಹ ಗಂಭೀರ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಧೀಶ ಪರಮೇಶ್ವರ್ ಪ್ರಸನ್ನ ನೀಡಿರುವ ತೀರ್ಪಿನಲ್ಲಿ ತಿಳಿಸಿದ್ದಾರೆ. ಆರೋಪಿ ಪ್ರಭಾವಿಯಾಗಿದ್ದು ಒಂದೊಮ್ಮೆ ಜಾಮೀನು ನೀಡಿದ್ರೆ ತನಿಖೆಗೆ ಹಿನ್ನೆಡೆಯಾಗುತ್ತದೆ. ಜಾಮೀನು ಕೊಟ್ಟರೆ ಆರೋಪಿಗಳು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚು ಎಂದು ಆದೇಶದಲ್ಲಿ ನಮೂದಿಸಿರುವುದಾಗಿ ವರದಿ ಹೇಳಿದೆ.

ಮಾರಣಾಂತಿಕ ಹಲ್ಲೆ ಪ್ರಕರಣದ ಸಂಬಂಧ ಕೋರ್ಟ್ ವಾದ, ಪ್ರತಿವಾದ ಆಲಿಸಿ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಕಾಯ್ದಿರಿಸಿತ್ತು. ಆರೋಪಿ ನಲಪಾಡ್ ಪರ ಟ್ಯಾಮಿ ಸೆಬಾಷ್ಟಿಯನ್ ವಾದಿಸಿದ್ದರೆ, ಹಲ್ಲೆಗೊಳಗಾದ ವಿದ್ವತ್ ಪರ ಎಸ್ ಪಿಪಿ ಶ್ಯಾಮ್ ಸುಂದರ್ ಪ್ರತಿವಾದ ಮಂಡಿಸಿದ್ದರು.

ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪುಟಗಳ ವಿವರವಾದ ಆದೇಶ ಪ್ರತಿ ಜಡ್ಜ್ ಬರೆಯಿಸಿ ಸಹಿ ಹಾಕಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಕೀಲರ ದಂಡೇ ನೆರದಿತ್ತು.

ಕುಸಿದು ಬಿದ್ದ ನಲಪಾಡ್:

Advertisement

ಜಾಮೀನು ಅರ್ಜಿ ವಜಾಗೊಳಿಸಿದ ಆದೇಶ ಹೊರಬಂದ ಸುದ್ದಿ ತಿಳಿಯುತ್ತಿದ್ದಂತೆಯೇ ನಲಪಾಡ್ ಕುಸಿದು ಬಿದ್ದಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ. ಟಿವಿ ಹಾಲ್ ನಲ್ಲೇ ಕುಸಿದು ಬಿದ್ದ ನಲಪಾಡ್ ಗೆ ಜೈಲು ಸಿಬ್ಬಂದಿ ನೀರು ಕುಡಿಸಿ, ಮತ್ತೆ ಜೈಲು ಕೊಠಡಿಗೆ ಕರೆದೊಯ್ದಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next