Advertisement

 ಕ್ರೈಸ್ತರಾಗಿದ್ದ ಯೂಸುಫ್ ಮತಾಂತರಗೊಂಡಿದ್ದೇಕೆ?: ಸಾಮಾಜಿಕ ತಾಣದಲ್ಲಿ ವ್ಯಂಗ್ಯ

04:18 PM Dec 29, 2019 | Team Udayavani |

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ ತಾನು ಹಿಂದೂವೆಂಬ ಕಾರಣಕ್ಕೆ ತಾರತಮ್ಯ ಮಾಡಲಾಗಿತ್ತು ಎಂಬ ದಾನಿಶ್‌ ಕನೇರಿಯ ಹೇಳಿಕೆ ವಿವಾದ ಮುಂದುವರಿದಿದೆ.

Advertisement

ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಯೂಸುಫ್ ಪ್ರತಿಕ್ರಿಯಿಸಿ, ತಾನು ಯಾವತ್ತೂ ಪಾಕ್‌ ತಂಡದಲ್ಲಿ ಅಂತಹ ಘಟನೆ ನಡೆದಿದ್ದನ್ನು ನೋಡಲಿಲ್ಲ. ಇದು ಸುಳ್ಳು ಎಂದು ಹೇಳಿದ್ದಾರೆ. ಇದರ ವಿರುದ್ಧ ಸಾಮಾಜಿಕ ಜಾಲತಾಣಿಗರು ಹರಿಹಾಯ್ದಿದ್ದಾರೆ. ಹಾಗಿದ್ದರೆ ಕ್ರೈಸ್ತರಾಗಿದ್ದ ಮೊಹಮ್ಮದ್‌ ಯೂಸುಫ್, ಮುಸ್ಲಿಮನಾಗಿ ಮತಾಂತರ ಗೊಂಡಿದ್ದೇಕೆ ಎಂದು ವ್ಯಂಗ್ಯವಾಡಿದ್ದಾರೆ.

ವಾಸ್ತವವಾಗಿ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದ, ಕೆಲವೇ ಕೆಲವು ಕ್ರೈಸ್ತರಲ್ಲಿ ಯೂಸುಫ್ ಕೂಡ ಒಬ್ಬರಾಗಿದ್ದರು. ಆಗ ಅವರ ಹೆಸರು ಯೂಸುಫ್ ಯೊಹಾನ ಎಂದಾಗಿತ್ತು. ಕಾಲಕ್ರಮೇಣ ಅವರು ಇಸ್ಲಾಂಗೆ ಮತಾಂತರಗೊಂಡು, ಮೊಹ ಮ್ಮದ್‌ ಯೂಸುಫ್ ಎಂದು ಹೆಸರು ಬದಲಾಯಿಸಿ ಕೊಂಡಿದ್ದರು. ಇನ್ನು ಟ್ವೀಟಿಗರು ಬಗೆಬಗೆಯಾಗಿ ಅಣಕಿಸಿದ್ದಾರೆ.
ಅವು ಹೀಗಿವೆ…

-ಹೌದು ಮೊಹಮ್ಮದ್‌ ಯೂಸುಫ್ಗೆ ಯಾವತ್ತೂ ಪಾಕ್‌ ತಂಡದಲ್ಲಿ ತಾರತಮ್ಯ ಮಾಡಲಿಲ್ಲ. ಅದೆಲ್ಲ ಆಗಿದ್ದು ಯೂಸುಫ್ಯೊ ಹಾನಗೆ.

-ಮುಸ್ಲಿಂ ಕ್ರಿಕೆಟಿಗರಿಂದ ವಿಪರೀತ ಕಿರುಕುಳಕ್ಕೊಳಗಾದ ಕಾರಣಕ್ಕೇ ಪಾಕಿಸ್ತಾನದ ಆ ಕ್ರೈಸ್ತ ವ್ಯಕ್ತಿ ಮತಾಂತರ ಗೊಂಡರು. ಈಗವರು ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ, ಕಾರಣ ಈಗವರು ಕ್ರೈಸ್ತರಲ್ಲ. ಗೊತ್ತಾಯ್ತ?

Advertisement

ಹಣಕ್ಕಾಗಿ ಕನೇರಿಯ ಏನು ಬೇಕಾದರೂ ಮಾತಾಡುತ್ತಾರೆ ಹಣಕ್ಕಾಗಿ ಕನೇರಿಯ ಏನು ಬೇಕಾದರೂ ಮಾತನಾಡುತ್ತಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೆದ್‌ ಮಿಯಾಂದಾದ್‌ ಕಿಡಿಕಾರಿದ್ದಾರೆ. ಕನೇರಿಯರಲ್ಲಿ ಕ್ರಿಕೆಟ್‌ ಆಡುವ ಯಾವುದೇ ಶಕ್ತಿಯೂ ಉಳಿದಿಲ್ಲ. ಮ್ಯಾಚ್‌ ಫಿಕ್ಸಿಂಗ್‌ ಮಾಡಿ ದೇಶದ ಮಾನಹ ರಾಜು ಹಾಕಿದ್ದಾರೆ. ಪಾಕಿಸ್ತಾನ ಅವರಿಗೆ ಎಲ್ಲವನ್ನೂ ನೀಡಿದೆ. ಪಾಕ್‌ ಪರ ಅವರು 10 ವರ್ಷ ಕ್ರಿಕೆಟ್‌ ಆಡಿದ್ದಾರೆ. ಧಾರ್ಮಿಕ ತಾರತಮ್ಯ ಇದ್ದಿದ್ದರೆ ಇದು ಸಾಧ್ಯವಿತ್ತೇ? ಎಂದು ಮಿಯಾಂದಾದ್‌ ಪ್ರಶ್ನಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next