Advertisement

ಶಿವಲಿಂಗದ ಚಿತ್ರ ಹಾಕಿ ವೇಗಿ ಶಮಿ ಶುಭಾಶಯ

06:50 AM Jan 02, 2018 | Team Udayavani |

ನವದೆಹಲಿ: ಟ್ವೀಟರ್‌ನಲ್ಲಿ ಶಿವಲಿಂಗದ ಚಿತ್ರಹಾಕಿ ಹೊಸ ವರ್ಷಕ್ಕೆ ಶುಭ ಹಾರೈಸಿದ ಕ್ರಿಕೆಟಿಗ ಮೊಹಮ್ಮದ್‌ ಶಮಿ ಕೆಲವರಿಂದ ಟೀಕೆಗೆ ಗುರಿಯಾಗಿದ್ದಾರೆ.

Advertisement

ಕೆಲವರು ಇದನ್ನು ಸ್ವಾಗತಿಸಿದ್ದಾರೆ. ಕೆಲವರು ವಿರೋಧಿಸಿದ್ದಾರೆ. ಶಮಿ ಟ್ವೀಟರ್‌ನಲ್ಲಿ ಟೀಕೆಗೆ ಗುರಿಯಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಬುರ್ಖಾ ಧರಿಸದ ಪತ್ನಿ ಜತೆಗಿರುವ ಫೋಟೋವನ್ನು ಟ್ವೀಟರ್‌ನಲ್ಲಿ ಹಾಕಿದಾಗ ಭಾರೀ ಟೀಕೆಗೆ ಗುರಿಯಾಗಿದ್ದರು. ಆದರೆ ಆ ಸಂದರ್ಭದಲ್ಲಿ ಶಮಿ ಟೀಕಾಗಾರರಿಗೆ ಸರಿಯಾಗಿ ತಿರುಗೇಟು ನೀಡಿದ್ದರು. ಹಲವು ಮಾಜಿ ಕ್ರಿಕೆಟಿಗರು ಶಮಿ ಬೆಂಬಲಕ್ಕೆ ನಿಂತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next