Advertisement

ಮೊಹಮ್ಮದ್‌ ಶಾಜಾದ್‌ಗೆ ಒಂದು ವರ್ಷ ನಿಷೇಧ

01:29 AM Aug 19, 2019 | Sriram |

ಕಾಬೂಲ್‌: ಕಳೆದ ವಿಶ್ವಕಪ್‌ ಪಂದ್ಯಾವಳಿಯ ವೇಳೆ ನೀತಿಸಂಹಿತೆ ಉಲ್ಲಂಘಿಸಿದ ಅಫ್ಘಾನಿಸ್ಥಾನದ ಆಟಗಾರ ಮೊಹಮ್ಮದ್‌ ಅನಾಸ್‌ ಅವರಿಗೆ ಅಲ್ಲಿನ ಕ್ರಿಕೆಟ್‌ ಮಂಡಳಿ ಒಂದು ವರ್ಷದ ನಿಷೇಧ ಹೇರಿದೆ. ಈ ಅವಧಿಯಲ್ಲಿ ಅವರು ಯಾವುದೇ ಮಾದರಿಯ ಕ್ರಿಕೆಟ್‌ ಪಂದ್ಯಗಳಲ್ಲೂ ಪಾಲ್ಗೊಳ್ಳುವಂತಿಲ್ಲ ಎಂದು ಶಿಸ್ತು ಸಮಿತಿ ಎಚ್ಚರಿಸಿದೆ.

Advertisement

ಅಶಿಸ್ತಿನ ಕಾರಣಕ್ಕಾಗಿ ಶಾಜಾದ್‌ ಅವರನ್ನು ವಿಶ್ವಕಪ್‌ ನಡುವಲ್ಲೇ ವಾಪಸ್‌ ಕರೆಸಿಕೊಳ್ಳಲಾಗಿತ್ತು. ವಿಕೆಟ್‌ ಕೀಪರ್‌ ಹಾಗೂ ಆರಂಭಿಕನೂ ಆಗಿದ್ದ ಶಾಜಾದ್‌ ಬದಲು ಇಕ್ರಮ್‌ ಅಲಿ ಖೀಲ್‌ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದರು. ಅಂದು ಶಾಜಾದ್‌ ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತಿನಲ್ಲಿಡಲಾಗಿತ್ತು. ಆದರೀಗ ಶಿಸ್ತು ಸಮಿತಿಯ ತೀರ್ಪು ಪ್ರಕಟಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next