Advertisement
ಪ್ರಕರಣ ಸಂಬಂಧ ವಿದ್ವತ್ ಪರ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್, ಮೊಹಮ್ಮದ್ ನಲಪಾಡ್ ಪರ ಟಾಮಿ ಸೆಬಾಸ್ಟಿನ್ ಹಾಗೂ ಇತರೆ ಆರೋಪಿಗಳ ಪರ ಬಾಲನ್ ವಾದ ಮಂಡಿಸಿದರು. ಮೂವರು ವಕೀಲರು ಸುಮಾರು 2 ಗಂಟೆಗೂ ಅಧಿಕ ಕಾಲ ಮಂಡಿಸಿದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ವಿಚಾರಣೆ ಪೂರ್ಣಗೊಳಿಸಿ ಮಾ.2ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದರು.
Related Articles
Advertisement
ಈ ಹಿಂದೆ ವಿದ್ವತ್‌ಗೆ ಅಪಘಾತದ ಬಗ್ಗೆ ಮಾಹಿತಿ ನೀಡಿಲ್ಲ. ವಿದ್ವತ್ ಆರೋಗ್ಯವಾಗಿದ್ದರೂ ಗಂಭೀರ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ತಿರಸ್ಕರಿಸುವಂತಹ ಬಲವಾದ ಸಾûಾÂಗಳಿಲ್ಲ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್, ದೂರು ದಾಖಲಾಗುತ್ತಿದ್ದಂತೆ ಮೊದಲಿಗೆ ಪೊಲೀಸರು ಹÇÉೆಗೊಳಗಾದವರು ರಕ್ಷಣೆ ಮಾಡುವುದು ಬಿಟ್ಟು ,ವಿದ್ವತ್ ಕುಡಿದಿದ್ದಾನಾ ಎಂದು ಪರೀಕ್ಷೆ ನಡೆಸಿದರು. ವಿದ್ವತ್ ಐಸಿಯೂನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರವಾದ ಮಾತ್ರಕ್ಕೆ ಆರೋಪಿಗಳಿಗೆ ಜಾಮೀನು ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ವಿದ್ವತ್ ವಿರುದ್ಧ ದೂರು ನೀಡಿರುವ ಅರುಣ್‌ಬಾಬು ದೂರಿನ ಪ್ರತಿಯನ್ನು ಗಮನಿಸಿದರೆ ಇದೊಂದು ಉದ್ದೇಶ ಪೂರ್ವಕ ದೂರು ಎಂಬುದು ಕಾಣುತ್ತದೆ. ದೂರುದಾರರ ವಿಳಾಸ ಮತ್ತು ಫೋನ್ ಸಂಖ್ಯೆಗಳನ್ನು ಬೇರೆ ಬೇರೆ ಪೆನ್‌ಗಳನ್ನು ಬಳಸಿ ಬರೆಯಲಾಗಿದೆ. ದೂರಿನಲ್ಲಿ ದಿನಾಂಕ ಮತ್ತು ದೂರುದಾರರ ಸಹಿಯನ್ನೂ ತಿದ್ದಿರುವಂತಿದ್ದು, ಇದು ಪೊಲೀಸರೇ ಖುದ್ದು ಬರೆದ ದೂರಿನ ಪ್ರತಿಯೇ ಹೊರತು ಅರುಣ್‌ಬಾಬು ಬರೆದ ದೂರು ಅಲ್ಲ.
ಅಲ್ಲದೇ, ಮೊದಲ ಎಫ್ಐಆರ್ ಮಧ್ಯಾಹ್ನ 3.30ಕ್ಕೆ ದಾಖಲಾಗಿದೆ. ಎರಡನೇ ಎಫ್ಐಆರ್ ಅಂದರೆ ಅರುಣ್‌ಬಾಬು ನೀಡಿದ ದೂರು 5.30ಕ್ಕೆ ದಾಖಲಾಗಿದೆ. ವಿದ್ವತ್ ಮದ್ಯಪಾನ ಮಾಡಿದ್ದರು ಎಂದು ಹೇಳಿದ್ದಾರೆ. ಆದರೆ, ಆಸ್ಪತ್ರೆ ವೈದ್ಯರು ವಿದ್ವತ್ ಮದ್ಯ ಸೇವಿಸಿಲ್ಲ ಎಂದು ವರದಿ ನೀಡಿದ್ದಾರೆ ಎಂದು ವಾದಿಸಿದರು.
ಮೊಹಮ್ಮದ್ ಪರ ವಾದ ಮಂಡಿಸಿದ ವಕೀಲ ಟಾಮಿ ಸೆಬಾಸ್ಟಿನ್, ಮೊಹಮ್ಮದ್ ವಿರುದ್ಧ ದಾಖಲಾಗಿರುವ ಪ್ರಕರಣವೇ ಸುಳ್ಳು. ಫರ್ಜಿ ಕೆಫೆಯಲ್ಲಿನ ಸಿಸಿಟಿವಿಯನ್ನು ಆಧರಿಸಿ ವಶಕ್ಕೆ ಪಡೆಯಲಾಗಿದೆ. ಗಾಯಗೊಂಡಿರುವವರು ಆಸ್ಪತ್ರೆಯಲ್ಲಿ ಇರುವವರೆಗೂ ಆರೋಪಿಗಳು ಜೈಲಿನಲ್ಲಿ ಉಳಿಯಬೇಕೇ? ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕು ಎಂದು ವಾದ ಮಂಡಿಸಿದರು.
ಎರಡು ಕಡೆಯ ವಾದ-ಪ್ರತಿವಾದಗಳನ್ನು ನ್ಯಾಯಾಧೀಶರು ಪರಿಗಣಿಸಿದ್ದಾರೆ. ಮಾ.2ರಂದು ತೀರ್ಪು ಪ್ರಕಟಿಸಲಿದ್ದಾರೆ. ನಮಗೆ ಜಾಮೀನು ಸಿಗುವ ವಿಶ್ವಾಸವಿದೆ. ಸದ್ಯದ ಮಾಹಿತಿ ಪ್ರಕಾರ ವಿದ್ವತ್ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗುತ್ತಾನೆ ಎಂಬ ಮಾಹಿತಿಯಿದೆ. ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.-ಟಾಮಿ ಸೆಬಾಸ್ಟಿನ್, ಮೊಹಮ್ಮದ್ ಪರ ವಕೀಲ ಖಾಸಗಿಯಾಗಿ ನೇಮಕವಾಗಿರುವ ಪ್ರಾಸಿಕ್ಯೂಟರ್‌ಗಳು ಬಂದರೆ ಕೆಲವೊಂದು ಗೊಂದಲ ಸೃಷ್ಟಿಯಾಗುತ್ತವೆ. ಘಟನೆಯನ್ನು ಮಾಫಿಯಾಗೆ ಹೊಲಿಕೆ ಮಾಡಿದ್ದಾರೆ. ಇದೊಂದು ಸಣ್ಣ ಪ್ರಕರಣ ಮೊಹಮ್ಮದ್ ತಂದೆ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ದೊಡ್ಡದು ಮಾಡಲಾಗಿದೆ. ಈ ಘಟನೆಯ ಹಿಂದೆ ಸಂಘಪರಿವಾರದವರ ಕೈವಾಡವಿದೆ.
-ಬಾಲನ್, ಆರೋಪಿಗಳ ಪರ ವಕೀಲ ಸಮಾಜದಲ್ಲಿ ನಡುಕ ಹುಟ್ಟಿಸುವಂತಹ ಘಟನೆ ಇದು. ಇಂತಹ ಆರೋಪಿಗಳಿಗೆ ಮಾತ್ರ ಜಾಮೀನು ಲಭ್ಯವಾಗಬಾರದು.
-ಶ್ಯಾಮ್‌ಸುಂದರ್, ಸರ್ಕಾರಿ ಪರ ವಕೀಲರು. ಮಾಡಿದ ತಪ್ಪಿಗೆ ಶಿಕ್ಷೆ: ಮೊಹಮ್ಮದ್ ನಲಪಾಡ್ ವಿಚಾರದಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಸೂಕ್ತ ಕಾನೂನು ಕ್ರಮ ಕೈಗೊಂಡಿದೆ ಎಂದು ಎಐಸಿಸಿ ಮಾಧ್ಯಮ ಸಂಪರ್ಕ ಪ್ರಭಾರ ರಣದೀಪ್‌ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ. ಶಾಸಕ ಹ್ಯಾರಿಸ್ ಪುತ್ರ ಮಾಡಿದ ತಪ್ಪಿಗೆ ಶಿಕ್ಷೆ ಆಗಿದೆ. ಕಾಂಗ್ರೆಸ್ ಕಾನೂನು ಪರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಇಂಥವರಿಗೆ ಎಂದೂ ಮಣೆ ಹಾಕಿಲ್ಲ. ನಲಪಾಡ್ ಟಿಕೆಟ್ ಕೇಳಿಲ್ಲ, ಆತನಿಗೆ ಕೊಡುವುದೂ ಇಲ್ಲ ಎಂದು ಹೇಳಿದರು. ಹ್ಯಾರಿಸ್‌ಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದ್ದು ಎಂಎಲ್‌ಎ ಮಗ, ಎಂಎಲ್‌ಎ ಅಲ್ಲ. ಪ್ರಕರಣದಲ್ಲಿ ಶಾಸಕರದ್ದು ಯಾವುದೇ ತಪ್ಪು ಇಲ್ಲ ಎಂದು ಸಮರ್ಥಿಸಿಕೊಂಡರು.