Advertisement

ಬಿಜೆಪಿ ನಾಯಕನ ರಂಪ

06:30 AM Dec 27, 2018 | |

ನವದೆಹಲಿ: “ನಾನು ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ಗೆ ಓಟು ಹಾಕುತ್ತೇನೆ’ ಎಂದು ಹೇಳಿದ ದಿವ್ಯಾಂಗಿ ವ್ಯಕ್ತಿಯೊಬ್ಬರಿಗೆ ಉತ್ತರ ಪ್ರದೇಶದ ಬಿಜೆಪಿ ನಾಯಕ ಮೊಹಮ್ಮದ್‌ ಮಿಯಾ ಥಳಿಸಿರುವ ಘಟನೆ ವರದಿಯಾಗಿದೆ.

Advertisement

ವ್ಯಕ್ತಿಯನ್ನು ದೈಹಿಕವಾಗಿ ಹಿಂಸಿಸುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಭಾರೀ ಆಕ್ರೋಶಕ್ಕೆ ಎಡೆ ಮಾಡಿದೆ. ಮಿಯಾ ಕೋಲಿನಿಂದ ಅಂಗವಿಕಲ ವ್ಯಕ್ತಿಯನ್ನು ಥಳಿಸುತ್ತಾ, ಅವರ ಬಾಯಿಗೆ ಕೋಲು ತುರುಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಕೃತ್ಯ ಸಮರ್ಥಿಸಿಕೊಂಡಿರುವ ಮಿಯಾ, “ಆ ವ್ಯಕ್ತಿ ಪ್ರಧಾನಿ ಮೋದಿ ಮತ್ತು ಯೋಗಿ ಅವರನ್ನು ಸಾರ್ವಜನಿಕ ವಾಗಿ ಬಯ್ಯುತ್ತಿದ್ದ. ಹಾಗಾಗಿ ಆತನನ್ನು ಅಲ್ಲಿಂದ ಹೊರಕಳುಹಿಸಲು ಯತ್ನಿಸಿದೆ’ ಎಂದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next