Advertisement

ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಜರುದ್ದೀನ್ ಆಯ್ಕೆ

08:11 AM Sep 28, 2019 | Hari Prasad |

ಹೈದ್ರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜೀ ಕಪ್ತಾನ ಮತ್ತು ಕಾಂಗ್ರೆಸ್ ನಾಯಕ ಮಹಮ್ಮದ್ ಅಜರುದ್ದೀನ್ ಅವರು ಹೈದ್ರಾಬಾದ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 56 ವರ್ಷದ ಅಜರುದ್ದೀನ್ ಅವರು 147-73 ಮತಗಳ ಅಂತರದಿಂದ ಜಯಗಳಿಸಿದರು.

Advertisement

ಭಾರತ ತಂಡದ ಪರ 99 ಟೆಸ್ಟ್ ಹಾಗೂ 334 ಏಕದಿನ ಪಂದ್ಯಗಳನ್ನು ಆಡಿರುವ ಅಜರುದ್ದೀನ್ ಅವರು ಭಾರತ ಕ್ರಿಕೆಟ್ ತಂಡದ ಯಶಸ್ವೀ ನಾಯಕರಲ್ಲಿ ಒಬ್ಬರಾಗಿದ್ದಾರೆ. ಆದರೆ ಮ್ಯಾಚ್ ಫಿಕ್ಸಿಂಗ್ ಆರೋಪ ಅಜರ್ ಅವರ ಕ್ರಿಕೆಟ್ ಬದುಕನ್ನು ಮುಗಿಸಿಬಿಟ್ಟಿತ್ತು. ತನ್ನ ಮೇಲೆ ವಿಧಿಸಲಾಗಿದ್ದ ಜೀವಾವಧಿ ನಿಷೇಧವನ್ನು 2012ರಲ್ಲಿ ನ್ಯಾಯಾಲಯದ ಮೂಲಕ ತೆರವುಗೊಳಿಸಿಕೊಳ್ಳುವಲ್ಲಿ ಅಜ್ಹರ್ ಯಶಸ್ವಿಯಾಗಿದ್ದರು. 2009ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಇದೀಗ ಹೈದ್ರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ಮಹಮ್ಮದ್ ಅಜರುದ್ದೀನ್ ಅವರ ಹೊಸ ಕ್ರಿಕೆಟ್ ಬಾಳ್ವೆ ಪ್ರಾರಂಭಗೊಂಡಂತಾಗಿದೆ.

ಸೌರವ್ ಗಂಗೂಲಿ ಮರು ಆಯ್ಕೆ
ಇದೇ ಸಂದರ್ಭದಲ್ಲಿ ಬೆಂಗಾಲ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಟೀ ಇಂಡಿಯಾ ಮಾಜೀ ಕಪ್ತಾನ ಸೌರವ್ ಗಂಗೂಲಿ ಅವರು ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. 2015ರಲ್ಲಿ ಜಗಮೋಹನ್ ದಾಲ್ಮಿಯಾ ಅವರ ನಿಧನದ ಬಳಿಕ ಬೆಂಗಾಲ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಗಂಗೂಲಿ ಅವರು ಸಹ ಕಾರ್ಯದರ್ಶಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next