Advertisement

ಮೊಹಾಲಿ: ಪಂಜಾಬ್‌-ಹೈದರಾಬಾದ್‌ ಆಟ

10:42 PM Apr 07, 2019 | Sriram |

ಮೊಹಾಲಿ: ಹಿಂದಿನ ಪಂದ್ಯಗಲ್ಲಿ ಕಳಪೆ ಪ್ರದರ್ಶನ ನೀಡಿ ಪರಾಭವಗೊಂಡ ಪಂಜಾಬ್‌ ಮತ್ತು ಹೈದರಾಬಾದ್‌ ತಂಡಗಳು ಸೋಮವಾರ ಮೊಹಾಲಿ ಅಂಗಳದಲ್ಲಿ ಮುಖಾಮುಖೀಯಾಗಲಿವೆ.

Advertisement

ಎರಡೂ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದು 6 ಅಂಕ ಹೊಂದಿವೆ. ರನ್‌ರೇಟ್‌ನಲ್ಲಿ ಸನ್‌ರೈಸರ್ ಪಂಜಾಬ್‌ಗಿಂತ ಮೇಲಿದೆ. ಪಂಜಾಬ್‌ಗ ಇದು ತವರಿನ ಪಂದ್ಯವಾದರಿಂದ ಗೆಲುವಿನ ಅವಕಾಶ ಹೆಚ್ಚು ಎಂಬುದೊಂದು ಲೆಕ್ಕಾಚಾರ ಶನಿವಾರ ಚೆನ್ನೈತಂಡವನ್ನು ಪಂಜಾಬ್‌ 160ಕ್ಕೆ ಕಟ್ಟಿಹಾಕಿದರೂ ಪಂಜಾಬ್‌ಗ ಗೆಲುವು ಮರೀಚಿಕೆಯಾಗಿತ್ತು.

ಚೈನ್ನೈತಂಡದ ಸಂಘಟಿತ ಬೌಲಿಂಗ್‌ ದಾಳಿಗೆ ರಾಹುಲ್‌ ಮತ್ತು ಸಫ‌ìರಾಜ್‌ ಕೊನೆಯ ಹಂತದಲ್ಲಿ ರನ್‌ ಗಳಿಸಲು ಪರದಾಡಿದರು. ಪಂಜಾಬ್‌ ಸೋಲನ್ನು ಹೊತ್ತುಕೊಂಡಿತು.
ರಾತ್ರಿ ನಡೆದ ಮುಂಬೈ-ಹೈದರಾಬಾದ್‌ ಪಂದ್ಯದಲ್ಲಿಯೂ ಇದೇ ರೀತಿಯ ಫ‌ಲಿತಾಂಶ ಮರುಕಳಿಸಿತು. 137 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಹೈದರಾಬಾದ್‌ ನಾಟಕೀಯ ಕುಸಿತಕಂಡು 96 ರನ್ನಿಗೆ ಆಲೌಟಾಯಿತು. ಅಲ್ಜಾರಿ ಜೋಸೆಫ್ ಮೊದಲ ಪಂದ್ಯದಲ್ಲೇ ಐಪಿಎಲ್‌ ಹೀರೋ ಆಗಿ ಮೂಡಿಬಂದದ್ದು ಈಗ ಇತಿಹಾಸ.

ಇತ್ತಂಡಗಳ ಬ್ಯಾಟಿಂಗ್‌ ಬರ
ಬಿಗ್‌ ಹಿಟ್ಟರ್‌ ಕ್ರೀಸ್‌ ಗೇಲ್‌ ಅವರನ್ನೇ ಹೆಚ್ಚಾಗಿ ಅವಲಂಬಿಸಿರುವ ಪಂಜಾಬ್‌ ಸದ್ಯ ಬ್ಯಾಟಿಂಗ್‌ ಬರ ಎದುರಿಸುತ್ತಿದೆ. ಮಿರ್ಣಾಯಕ ಹಂತದಲ್ಲಿ ರನ್‌ ಗಳಿಸಲು ಪರದಾಡುತ್ತಿರುವುದು ಪಂಜಾಬ್‌ ತಂಡದ ದೊಡ್ಡ ಸಮಸ್ಯೆಯಾಗಿದೆ. ನಿಧಾನ ಗತಿಯ ಬ್ಯಾಟಿಂಗ್‌ನಿಂದ ಹೊರಬಂದರೆ ಪಂಜಾಬ್‌ ಗೆಲುವಿನ ಟ್ರ್ಯಾಕ್‌ ಹತ್ತಬಹುದು. ಡೆಲ್ಲಿ ವಿರುದ್ಧ ಹ್ಯಾಟ್ರಿಕ್‌ ಸಾಧಿಸಿದ 20ರ ಹರೆಯದ ಸ್ಯಾಮ್‌ ಕರನ್‌ ಕರನ್‌ ಚೆನ್ನೈ ವಿರುದ್ಧ ಕ್ಲಿಕ್‌ ಆಗಿರಲಿಲ್ಲ. ಶಮಿ, ಆರ್‌. ಅಶ್ವಿ‌ನ್‌, ಮುರುಗನ್‌ ಅಶ್ವಿ‌ನ್‌ ತವರಿನಂಗಳದಲ್ಲಿ ಘಾತಕ ಪ್ರದರ್ಶನ ನೀಡಬೇಕಾದುದು ಅನಿವಾರ್ಯ.

ಸನ್‌ರೈಸರ್ಗೆ ವಾರ್ನರ್‌, ಬೇರ್‌ಸ್ಟೊ, ಆಲ್‌ರೌಂಡರ್‌ ವಿಜಯ್‌ ಶಂಕರ್‌, ಯೂಸುಫ್ ಪಠಾಣ್‌ ಅವರ ಬ್ಯಾಟಿಂಗ್‌ ಬಲವಿದ್ದರೂ ಮುಂಬೈ ವಿರುದ್ಧ ನಾಟಕೀಯ ಕುಸಿತ ಅನುಭವಿಸಿದ್ದನ್ನು ನಂಬಲಾಗುತ್ತಿಲ್ಲ. ರಶೀದ್‌ ಖಾನ್‌, ಮೊಹಮ್ಮದ್‌ ನಬಿ, ಭುವನೇಶ್ವರ್‌ ಮೊಹಾಲಿಯಲ್ಲಿ ಮಿಂಚಿದರೆ ಸನ್‌ರೈಸರ್ ಗೆಲುವನ್ನು ನಿರೀಕ್ಷಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next