Advertisement

ಮೊಗ್ರಾಲ್‌ ಪುತ್ತೂರು : ಅಂಡರ್‌ ಪಾಸ್‌ ಯೋಜನೆ ಸಾಕಾರ

07:40 PM May 04, 2019 | sudhir |

ಕುಂಬಳೆ: ಕೇಂದ್ರ ರೈಲ್ವೆ ಇಲಾಖೆಯ ವತಿಯಿಂದ ದೇಶದಾದ್ಯಂತ ರೈಲು ಹಳಿಯ ಲೆವೆಲ್‌ ಕ್ರಾಸಿಂಗನ್ನು ಕಡಿಮೆಗೊಳಿಸಲು ಅಂಡರ್‌ಪಾಸ್‌ ಯೋಜನೆಯ ಮೂಲಕ ಕಾಮಗಾರಿ ನಡೆಯುತ್ತಿದೆ. ಇದರಿಂದ ಲೆವೆಲ್‌ ಕ್ರಾಸಿಂಗ್‌ನ ನೌಕರರ ಏಕಾಂತ ವಾಸಕ್ಕೆ ಮೋಕ್ಷವಾಗಲಿದೆ. ಅಲ್ಲದೆ ಇಲಾಖೆಗೆ ಯೋಜನೆಯಿಂದ ಲಾಭವಾಗಲಿದೆ.

Advertisement

ರೈಲು ಹಳಿಯ ಅಪಘಾತವನ್ನು ತಪ್ಪಿಸಬಹುದಾಗಿದೆ. ಮತ್ತು ಲೆವೆಲ್‌ಕ್ರಾಸಿಂಗ್‌ ಸಂಪರ್ಕ ರಸ್ತೆಯಲ್ಲಿ ಪ್ರಯಾಣಿಸುವ ವಾಹನಗಳನ್ನು ಗೇಟ್‌ ಹಾಕಿ ಗಂಟೆಗಟ್ಟಲೆ ತಡೆಯುವುದನ್ನು ತಪ್ಪಿಸುವ ಯೋಜನೆ ಇದಾಗಿದೆ. ಕುಂಬಳೆ ರೈಲು ನಿಲ್ದಾಣ ಬಳಿಯ ಲೆವೆಲ್‌ ಕ್ರಾಸಿಂಗ್‌ನ ಬಳಿಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ಪೂರ್ತಿಗೊಂಡು ಸ್ಥಳೀಯರು ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ಸಂಕಷÒ ನಿವಾರಣೆಯಾಗಿದೆ. ಕುಂಬಳೆ ಕೊಯಿಪ್ಪಾಡಿ ನಿವಾಸಿಗಳಿಗೆ ಅಂಡರ್‌ಪಾಸ್‌ ಸೇತುವೆ ವರದಾನವಾಗಿದೆ.

ಇದೀಗ ಮೊಗ್ರಾಲ್‌ ಪುತ್ತೂರಿನಲ್ಲಿ ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ನೂತನ ಅಂಡರ್‌ಪಾಸ್‌ ಕಾಮಗಾರಿ ಭರದಿಂದ ನಡೆಯುತ್ತಿದೆ.ಇಲ್ಲಿ ಬೃಹತ್‌ ಗಾತ್ರದ ಕ್ರೇನ್‌ ಮೂಲಕ ಸಿದ್ಧಪಡಿಸಿದ ಕಾಂಕ್ರಿಟ್‌ ಸೇತುವೆಯನ್ನು ಹಳಿಯ ಅಡಿಭಾಗಕ್ಕೆ ಜೋಡಿಸಿದೆ.ಈ ಯೋಜನೆಯಿಂದ ಈ ಪ್ರದೇಶದ ನಿವಾಸಿಗಳು ಹಲವಾರು ವರ್ಷಗಳ ಬೇಡಿಕೆ ಈಡೇರಿದ ಸಂತಸದಲ್ಲಿರುವರು.ಈ ಅಂಡರ್‌ಪಾಸ್‌ ಯೋಜನೆಯಿಂದ ಮೊಗ್ರಾಲಿನ ಪಡಿಞಾnರು ಪ್ರದೇಶದವರ ಕನಸು ನನಸಾಗಿದೆ.ಮುಂದೆ ಈ ಪ್ರದೇಶಕ್ಕೆ ನೂತನ ರಸ್ತೆ ನಿರ್ಮಾಣವಾಗಿ ಹೆದ್ದಾರಿಗೆ ಸಂಪರ್ಕವಾಗಲಿದೆ.

ರಾಜಕೀಯ ಲಾಭ : ಕೇಂದ್ರ ಸರಕಾರಕ್ಕೆ ಸ್ಥಳೀಯ ಲೋಕಸಭಾ ಸದಸ್ಯರು ಮತ್ತು ಕೇಂದ್ರವನ್ನಾಳುವ ರಾಜಕೀಯ ಪಕ್ಷಗಳ ನಾಯಕರ ಒತ್ತಡದ ಮೇರೆಗೆ ಇಲ್ಲಿ ಯೋಜನೆ ಸಾಕಾರಗೊಂಡಿದೆ. ಆದರೆ ಇದನ್ನು ಮರೆಮಾಚಿ ಇದರ ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷವೊಂದು ಪ್ರಯತ್ನಿಸಿ ವಿಫಲವಾಗಿದೆ.ಈ ಯೋಜನೆಯನ್ನು ಸಾಕಾರಾಗೊಳಿಸಿರುವುದು ತಮ್ಮ ಪಕ್ಷದ ನಾಯಕರೆಂಬುದಾಗಿ ಕಾಮಗಾರಿಗೆ ಮುನ್ನವೇ ಸ್ವಾಗತ ನೀಡುವ ಬೃಹತ್‌ ಫಲಕ ಇಲ್ಲಿ ನಾಟಿದ ಬಳಿಕ ಇದಕ್ಕೆ ಸ್ಥಳàಈಯರಿಂದ ವಿರೋಧ ವ್ಯಕ್ತವಾಗಿ ಬಳಿಕ ಇದನ್ನು ತೆರವುಗೊಳಿಸಲಾಗಿದೆ.ಎನ್‌.ಡಿ.ಎ. ಸರಕಾರದ ಸಾಧನೆಯನ್ನು ಮತ್ತು ಎಡರಂಗ ಪಕ್ಷದ ಲೋಕಸಭಾ ಸದಸ್ಯರ ಪ್ರಸ್ತಾವನೆಯನ್ನು ಒಪ್ಪದ ಪಕ್ಷದ ಕೆಲವರು ದೊಡ್ಡ ಫಲಕ ನಾಟಿ ಬಳಿಕ ಸ್ವಪಕೀÒಯರ ವಿರೋಧವನ್ನು ಪರಿಗಣಿಸಿ ಫಲಕವನ್ನು ಅನಿವಾರ್ಯವಾಗಿ ತೆರವುಗೊಳಿಸಬೇಕಾಯಿತಂತೆ ಅಭಿವೃದ್ಧಿಯಲ್ಲೂ ರಾಜಕೀಯ ಲಾಭ ಪಡೆಯಲು ಮುಂದಾದವರಿಗೆ ತಕ್ಕ ಶಾಸ್ತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next