Advertisement

ಮೊಗವೀರ ಮಾಸಿಕದ 78ರ ಸಂಭ್ರಮ:2  ಕೃತಿಗಳ ಬಿಡುಗಡೆ

01:50 PM Oct 24, 2017 | |

ಮುಂಬಯಿ: ಮೊಗ ವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಪ್ರಕಾಶಿತ ಮೊಗವೀರ ಮಾಸಿಕದ 78ರ ಸಂಭ್ರಮದ ಅಂಗ ವಾಗಿ ಪ್ರಾಂತೀಯ ಲೇಖಕರ ಮತ್ತು ಓದುಗರ ಸಮಾವೇಶವು ಮೊಗ ವೀರ ವ್ಯವಸ್ಥಾಪಕ ಮಂಡಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಖೆಯ ನೇತೃತ್ವದಲ್ಲಿ ಇತ್ತೀಚೆಗೆ ಸುರತ್ಕಲ್‌ನ ತಾರಾ ಟವರ್ಸ್‌ನಲ್ಲಿರುವ ಶಾಖೆಯ ಸಭಾಗೃಹದಲ್ಲಿ ನಡೆಯಿತು.

Advertisement

ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಜಿ. ಕೆ. ರಮೇಶ್‌ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಮಾರೋಪ ಸಮಾ ರಂಭದಲ್ಲಿ ಮೊಗವೀರ ಪತ್ರಿಕೆಯ ಲೇಖಕಿ ಶಾರದಾ ಉಳುವೆ ಅವರ ಪಾಣಿಗ್ರಹಣ ಕಥಾ ಸಂಕಲನ, ಮಾಧವಿಲತಾ ಚಿಪ್ಪಳಕಟ್ಟೆ ಅವರ ಚಿಗುರು ಕವನ ಸಂಕಲನ ಕೃತಿ ಗಳನ್ನು ಕ್ರಮವಾಗಿ ನಾರಾಯಣ ರೈ ಮತ್ತು ಅಂಬಿಕಾ ಜಾಲಗಾರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಜಿ. ಕೆ. ರಮೇಶ್‌ ಅವರು ಮಾತನಾಡಿ, ಮೊಗವೀರ ಪತ್ರಿಕೆಯು ಪ್ರಸ್ತುತ ಸಂಪಾದಕರ ಕಾರ್ಯವೈಖರಿಯಿಂದಾಗಿ ಜನ ಪ್ರಿಯತೆ ಹೊಂದಿದೆ. ಹಿರಿಯರು ಹಾಕಿಕೊಟ್ಟ ಧ್ಯೇಯ ಧೋರಣೆ ಯನ್ನು ನೀತಿಯಾಗಿಸಿಕೊಂಡು ಕಾಲಕಾಲಕ್ಕೆ ಓದುಗರ ಅಭಿರುಚಿಗೆ ಅನುಸಾರವಾಗಿ ಪತ್ರಿಕೆಯು ಪರಿವರ್ತನಶೀಲತೆಯಿಂದ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಲು ಅಭಿಮಾನವಾಗುತ್ತಿದೆ. ಸಂಪಾದಕ ಅಶೋಕ್‌ ಸುವರ್ಣ ಅವರ ಕಾರ್ಯತತ್ಪರತೆ, ನಿಷ್ಠಾವಂತ ಸೇವೆ ಪತ್ರಿಕೆಯ ಅಭಿವೃದ್ಧಿಗೆ ಮೂಲ ಕಾರಣವಾಗಿದೆ. ಜಾತಿ, ಮತ, ಭೇದವಿಲ್ಲದೆ ಈ ಪತ್ರಿಕೆಯು ಸರ್ವರಿಗೂ ಸಮಾನತೆಯ ನೆಲೆಯಲ್ಲಿ ಪ್ರಾಮುಖ್ಯತೆಯನ್ನು ಕೊಡುವುದರ ಪರಿಣಾಮವಾಗಿ ಇಂದು ಎರಡು ಕೃತಿಗಳು ಬೆಳಕು ಕಾಣಲು ಕಾರಣವಾಯಿತು ಎಂದು ನುಡಿದು ಕೃತಿಕಾರರನ್ನು ಅಭಿನಂದಿಸಿದರು.

ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾ ಬೆಂಗಳೂರು ಅಧ್ಯಕ್ಷ
ಅಂಬಿಕಾ ಜಾಲಗಾರ ಅವರು ಮಾತ ನಾಡಿ, 78 ವರ್ಷಗಳ ಸುದೀರ್ಘ‌ ಕಾಲದಲ್ಲಿ ಬೆಳೆದ ಈ ಪತ್ರಿಕೆಯು ಈಗ ಅಂತಾರಾಷ್ಟ್ರೀಯ ಖ್ಯಾತಿ ಯನ್ನು ಪಡೆದಿದೆ. ಜಾತಿಯನ್ನು ಮೀರಿ ಪತ್ರಿಕೆಯು ಬೆಳೆದಿದೆ. ಮೊಗವೀರರ ಸಂಸ್ಕೃತಿಗೆ ಇದು ಒಂದು ಉತ್ತಮ ಮಾಧ್ಯಮವನ್ನು ಕಲ್ಪಿಸಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಮಧು ಪ್ರಪಂಚದ ಸಂಪಾದಕ ನಾರಾ ಯಣ ರೈ ಕುಕ್ಕುವಳ್ಳಿ ಅವರು ಮಾತ ನಾಡಿ, ಮೊಗವೀರ ಮೊಗೆದಷ್ಟು ಸಾಹಿತ್ಯವನ್ನು ನೀಡುವ ಪತ್ರಿಕೆ ಯಾಗಿದ್ದು, ಇಂತಹ ಸಮಾವೇಶಗಳು ಇತರರಿಗೆ ಮಾದರಿಯಾಗಲಿ ಎಂದರು.

Advertisement

ಮುಂಬಯಿ ಲೇಖಕಿ, ಕವಿ ಡಾ| ಜಿ. ಪಿ. ಕುಸುಮಾ ಅವರು ಕೃತಿಗಳನ್ನು ಪರಿಚಯಿಸಿದರು.   ಮೊಗವೀರ ವ್ಯವಸ್ಥಾಪಕ ಮಂಡಳಿಅಧ್ಯಕ್ಷ ಕೃಷ್ಣ ಕುಮಾರ್‌ ಎಲ್‌.ಬಂಗೇರ, ಮೊಗವೀರ ಮಂಡಳಿ ಶಾಖೆಯ ಕಾರ್ಯಾಧ್ಯಕ್ಷ ಭರತ್‌ ಕುಮಾರ್‌ ಸಾಲ್ಯಾನ್‌ ಎರ್ಮಾಳ್‌ ಬಡಾ ಮೊದಲಾದವರು ವೇದಿಕೆ
ಯಲ್ಲಿ ಉಪಸ್ಥಿತರಿದ್ದರು. ಶಾಖೆಯ ಮಾಜಿ ಕಾರ್ಯಾಧ್ಯಕ್ಷ ಯತೀಶ್‌ ಬೈಕಂಪಾಡಿ ಸ್ವಾಗತಿಸಿದರು. ಮೊಗ ವೀರ ಸಂಪಾದಕ ಅಶೋಕ್‌ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಇದೇ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿರುವ ಸಹಾಯಧನ, ವಿದ್ಯಾರ್ಥಿ ವೇತನ ಮತ್ತು ಪರಿಹಾರ ಧನವನ್ನು ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಕೃಷ್ಣ ಕುಮಾರ್‌ ಎಲ್‌. ಬಂಗೇರ ಅವರು ವಿತರಿಸಿ ಶುಭ ಹಾರೈಸಿದರು. ಮಾಜಿ ಟ್ರಸ್ಟಿ ವಿ. ಆರ್‌. ಕೋಟ್ಯಾನ್‌, ಆಶಾ ಯು. ಸುವರ್ಣ, ಎಸ್‌. ಡಿ. ಅಮೀನ್‌, ಕವಿತಾ, ಸದಾಶಿವ ಕೋಟ್ಯಾನ್‌, ರೋಹಿತ್‌ ಆರ್‌. ಪುತ್ರನ್‌ ಅವರು ಅತಿಥಿಗಳನ್ನು ಗೌರವಿಸಿದರು. ಸಮಾಜ ಬಾಂಧವರು, ಸಾಹಿತ್ಯಾ ಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next