Advertisement

ಮೊಗವೀರ ಸಮಾಜದ 41 ಜೋಡಿಗಳು ಹಸೆಮಣೆಗೆ

02:01 AM May 02, 2019 | Sriram |

ಉಡುಪಿ: “ಆದಿತ್ಯಾದಿ ನವಗ್ರಹಾಃ ಶುಭಕರಾ ಮೇಷಾದಯೋ ರಾಶಯೋ|… ಸರ್ವೇ ಸ್ಥಾವರ ಜಂಗಮಾಃ ಪ್ರತಿದಿನಂ ಕುರ್ವಂತು ನೋ ಮಂಗಲಮ್‌||’

Advertisement

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಂಬಲಪಾಡಿ, ಜಿಲ್ಲಾ ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಬುಧವಾರ ನಡೆದ 11ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ಮೊಗವೀರ ಸಮಾಜದ 41 ಜೋಡಿ
ಗಳು ಹಸೆಮಣೆ ಏರಿ, ಮಾಂಗಲ್ಯ ಧಾರಣೆ ಮಾಡಿದರು.

ಪುರೋಹಿತರು ಜೋಡಿಗಳಿಗೆ ನವಗ್ರಹಗಳೂ ಸಕಲ ಸ್ಥಾವರ ಜಂಗಮಗಳೂ ಪ್ರತಿನಿತ್ಯ ಶುಭವನ್ನುತರಲಿ ಎಂದು ಹಾರೈಸುವುದೇ ಮೊದ ಲಾದ ಎಂಟು ಸೊಲ್ಲುಗಳಿರುವ, ಉಡುಪಿ ಪಲಿಮಾರು ಮಠದ ಆರನೆಯ ಯತಿ ಶ್ರೀರಾಜರಾಜೇಶ್ವರ ತೀರ್ಥರು ರಚಿಸಿದ “ಮಂಗಲಾಷ್ಟಕ’ ವನ್ನು ಪಠಿಸಿ ಶುಭ ಕೋರಿದರು.

ವರದಕ್ಷಿಣೆ ರಹಿತವಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ದಲ್ಲಿ ಈವರೆಗೆ ಒಟ್ಟು 271 ಜೋಡಿಗಳು ಕಂಕಣ ಭಾಗ್ಯ ಪಡೆದಿದ್ದಾರೆ. ಈಗಾ ಗಲೇ ವಿವಾಹವಾದ ಜೋಡಿಗಳು ನೆಮ್ಮದಿಯ ಪರಿಪೂರ್ಣ ಬದುಕುಸಾಗಿಸುತ್ತಿದ್ದಾರೆ ಎಂದು ಜಿ. ಶಂಕರ್‌
ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಹೇಳಿದರು.

ಮದುವೆಗಾಗಿ ಖರ್ಚು ಮಾಡಿ ಸಾಲಗಾರರಾಗಿ ಬದುಕುವ ಸನ್ನಿವೇಶ ಎದುರಾಗಬಾರದು, ಮದುವೆ ಯೋಗವೇ ಇಲ್ಲ ಎಂದು ಕೊರಗುವ ಜನರಿಗೆ ಅನುಕೂಲವಾಗಲಿ ಎನ್ನುವಮಹದಾಸೆ ಹೊತ್ತು ಈ ಉಚಿತ ಸಾಮೂಹಿಕ ವಿವಾಹ ಸಂಘಟಿಸ ಲಾಗಿದೆ. ಇದರಿಂದ ಹೊಸ ಜೋಡಿಗಳ ಬದುಕಿಗೆ ಅರ್ಥ ಬರುವುದಲ್ಲದೆ ನಮಗೂ ಸಂತೃಪ್ತಿ ದೊರಕಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ ಮಾತ ನಾಡಿ, ಮೊಗವೀರ ವಿವಾಹಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ; ಸರಳ, ಆದರ್ಶ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಾ| ಜಿ. ಶಂಕರ್‌ ಹುಟ್ಟು ಹಾಕಿದ ಪರಿಕಲ್ಪನೆಯೇ “ಉಚಿತ ಸಾಮೂಹಿಕ ವಿವಾಹ ಸಮಾರಂಭ’ ಎಂದರು.

ಶಾಲಿನಿ ಜಿ. ಶಂಕರ್‌, ನವೀನ್‌ ಮತ್ತು ಶ್ಯಾಮಿಲಿ ದಂಪತಿ, ಜಿಲ್ಲಾ ಮೊಗವೀರ ಯುವ ಸಂಘಟನೆ ನಿಕಟಪೂರ್ವಾಧ್ಯಕ್ಷ ಗಣೇಶ್‌ ಕಾಂಚನ್‌, ಸ್ಥಾಪಕಾಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಗಣ್ಯರಾದ ಸದಾನಂದ ಬಳ್ಕೂರು, ಸತೀಶ್‌ ಎಂ. ನಾಯ್ಕ, ಸಂಜೀವ ಎಂ.ಎಸ್‌. ಕೋಟ, ಸತೀಶ್‌ ಮರಕಾಲ, ಉಚ್ಚಿಲ ಹೋಬಳಿ ಅಧ್ಯಕ್ಷ ಜಯ
ಸಿ. ಕೋಟ್ಯಾನ್‌, ವಿಶ್ವನಾಥ ಕೂರಾಡಿ, ಕೆ.ಕೆ. ಕಾಂಚನ್‌, ಕೆ. ಗೋಪಾಲ ಪೂಜಾರಿ, ಯಶಪಾಲ್‌ ಎ. ಸುವರ್ಣ, ಶಿವಪ್ಪ ಟಿ. ಅಮೀನ್‌, ಶಿವ ಜಿ. ಕರ್ಕೇರ, ಆನಂದ ಕೆ. ಸಾಸ್ತಾನ, ಉಭಯ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು, 41 ಜೋಡಿಗಳ ಬಂಧು ಬಾಂಧವರು ಉಪಸ್ಥಿತರಿದ್ದರು.

ವೇದವ್ಯಾಸ ಐತಾಳ್‌ ಪೌರೋಹಿತ ದಲ್ಲಿ ಹಸೆಮಣೆ ಏರಿದ ಜೋಡಿಗಳಿಗೆ ಡಾ| ಜಿ. ಶಂಕರ್‌ ದಂಪತಿ, ಗಣ್ಯರು ಶುಭ ಹಾರೈಸಿದರು.

ವಿಶೇಷ ಚೇತನ ಜೋಡಿಗಳಿಗೆ ಧನಸಹಾಯ
ಮೂರು ವಿಶೇಷ ಚೇತನ ಜೋಡಿಗಳಿಗೆ ಮದುವೆ ಮಾಡಿಸಲಾಗಿದ್ದು, ಅವರ ಕುಟುಂಬ ನಿರ್ವಹಣೆಗೆ ಅನುಕೂಲವಾಗುವಂತೆ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಪ್ರತೀ ಜೋಡಿಗೆ 50 ಸಾವಿರ ರೂ. ಧನಸಹಾಯ ನೀಡುವುದಾಗಿ ಡಾ| ಜಿ. ಶಂಕರ್‌ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next