Advertisement

ಮೊಗರ್ಪಣೆ ಸೇತುವೆ ಶಿಥಿಲ: ದುರಸ್ತಿಯಿಲ್ಲ!

12:07 PM Sep 21, 2018 | Team Udayavani |

ಸುಳ್ಯ : ಮಾಣಿ-ಮೈಸೂರು ರಸ್ತೆಯ ಮೊಗರ್ಪಣೆ ಸೇತುವೆ ಮೇಲ್ಪದರ ದುರಸ್ತಿಗೆ ಸಂಬಂಧಿಸಿದ ಇಲಾಖೆ ಕೆಆರ್‌ ಡಿಸಿಎಲ್‌ ಮಳೆ ನೆಪದ ಕಾರಣವೊಡ್ಡಿ ಕಾಮಗಾರಿ ಮುಂದೂಡಿತ್ತು. ಈಗ ಮಳೆ ಬಿಟ್ಟು ಹತ್ತು ದಿನಗಳು ಕಳೆದಿವೆ. ಅದಾಗ್ಯೂ ದುರಸ್ತಿ ಕೈಗೆತ್ತಿಗೊಳ್ಳುವ ಬಗ್ಗೆ ಇಲಾಖೆ ಮನಸ್ಸು ಮಾಡಿಲ್ಲ.

Advertisement

ನಗರವನ್ನು ಬೆಸೆಯುವ ಪ್ರಮುಖ ಸೇತುವೆ ಇದಾಗಿದೆ. ದಿನಂಪ್ರತಿ ನೂರಾರು ವಾಹನ ಇಲ್ಲಿ ಸಂಚರಿಸುತ್ತಿವೆ. ಸೇತುವೆಯ ಮೇಲ್ಪದರ ಬಿರುಕು ಬಿಟ್ಟು ಕಬ್ಬಿಣದ ಸರಳುಗಳು ಮೇಲೆದ್ದು, ಸೇತುವೆ ಗುಣಮಟ್ಟದ ಬಗ್ಗೆ ಆತಂಕ ಉಂಟಾಗಿತ್ತು. 

ಬಳಿಕ ಕೆಎಆರ್‌ಡಿಸಿಎಲ್‌ ದುರಸ್ತಿ ಕೈಗೆತ್ತಿಕೊಂಡಿತ್ತು. ಜುಲೈ ತಿಂಗಳಲ್ಲಿ ಜಲ್ಲಿ ಮಿಶ್ರಿತ ಪರಿಕರ ಬಳಸಿ ದುರಸ್ತಿ ಮಾಡಿದ ಬೆನ್ನಲ್ಲೇ ಹೊಂಡ ಸೃಷ್ಟಿಯಾಗಿತ್ತು. ಮೂರು ನಾಲ್ಕು ಬಾರಿ ತೇಪೆ ಕಾಮಗಾರಿ ನಡೆಸಿದ್ದರೂ ಅದು ನಿಲ್ಲಲಿಲ್ಲ. ಮಳೆ ಕಡಿಮೆ ಆಗದೆ ದುರಸ್ತಿ ಸಾಧ್ಯವಿಲ್ಲ ಎಂದು ಅಧಿಕಾರಿಗಳು ದುರಸ್ತಿ ಕೆಲಸ ಸ್ಥಗಿತಗೊಳಿಸಿದ್ದರು.

ಈಗ ಮೌನ
ಬಿಸಿಲಿನ ವಾತಾವರಣ ಇದ್ದರೂ ಇಲಾಖೆ ದುರಸ್ತಿ ಕೈಗೆತ್ತಿಕೊಂಡಿಲ್ಲ. ಮೂರು ಕಡೆಗಳಲ್ಲಿ ಇದ್ದ ಬಿರುಕು ಈಗ ಐದಾರು ಕಡೆ ವ್ಯಾಪಿಸಿದೆ. ಜೋಡುಪಾಲ ಘಟನೆ ಅನಂತರ ಕೆಆರ್‌ಡಿಸಿಎಲ್‌ ಅಧಿಕಾರಿಗಳು ಈ ರಸ್ತೆಯಲ್ಲಿ ದಿನಂಪ್ರತಿ ಓಡಾಟ ನಡೆಸುತ್ತಾರೆ. ಆದಾಗ್ಯೂ ಮೇಲ್ಪದರ ಶಿಥಿಲವಾಗಿದ್ದನ್ನು ಗಮನಿಸಿಲ್ಲ. ಜತೆಗೆ ನಗರಾಡಳಿತ ಸೇರಿದಂತೆ ಜನಪ್ರತಿನಿಧಿಗಳು ಎಚ್ಚರಿಸುವ ಪ್ರಯತ್ನ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next