Advertisement

ಮೋದಿ ರಚನೆಯ ಮಾಡೀ ಬಿಡುಗಡೆ

10:50 PM Oct 15, 2023 | Team Udayavani |

ಹೊಸದಿಲ್ಲಿ: ದೇಶ ವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶರನ್ನವರಾತ್ರಿಯ ಶುಭಾಶಯ ಕೋರಿದರು. ಇದೇ ವೇಳೆ ಭಾನುವಾರ ನವರಾತ್ರಿ ಆರಂಭವಾದ ಹಿನ್ನೆಲೆಯಲ್ಲಿ ಅವರು ರಚಿಸಿರುವ “ಗಾರ್ಬಾ’ ಹಾಡನ್ನು ಟ್ವಿಟರ್‌(ಎಕ್ಸ್‌)ನಲ್ಲಿ ಅವರು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರ ಸಾಹಿತ್ಯ ರಚನೆಯ ಈ ಗಾರ್ಬಾ ಹಾಡನ್ನು ಗಾಯಕಿ ದಿವ್ಯಾ ಕುಮಾರ್‌ ಹಾಡಿದ್ದಾರೆ.

Advertisement

ಮೀಟ್‌ ಬ್ರಾಸ್‌ ಇದಕ್ಕೆ ಸಂಗೀತ ಸಂಯೋಜನೆ ಮಾಡಿದೆ. ಈ ಹಾಡಿಗೆ “ಮಾಡೀ’ ಎಂದು ಟೈಟಲ್‌ ನೀಡಲಾಗಿದೆ. ಗುಜರಾತ್‌ನ ಸಂಸ್ಕೃತಿಯನ್ನು ಬಿಂಬಿಸುವ ಗಾರ್ಬಾ ನೃತ್ಯವನ್ನು ವಿಶೇಷವಾಗಿ ನವರಾತ್ರಿ ಸಮಯದಲ್ಲಿ ಮಾಡಲಾಗುತ್ತದೆ. ಈ ವಿಡಿಯೋದಲ್ಲಿ ವಿವಿಧ ಗಾರ್ಬಾ ಕಲಾವಿದರು ನೃತ್ಯ ಮಾಡಿದ್ದು, ಗುಜರಾತ್‌ನ ಪ್ರಮುಖ ಪ್ರವಾಸಿ ಹಾಗೂ ಸಾಂಸ್ಕೃತಿಕ ಸ್ಥಳಗಳಲ್ಲಿ ಇದನ್ನು ಚಿತ್ರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next