Advertisement

Jana Sangh: ದೀನದಯಾಳ್‌ ಕನಸಿಗೆ ಮೋದಿಯ ಸ್ಪರ್ಶಮಣಿ

12:18 AM Sep 25, 2023 | Team Udayavani |

ಪಂಡಿತ್‌ ದೀನದಯಾಳ್‌ಉಪಾಧ್ಯಾಯ ಭಾರತೀಯ ಜನಸಂಘಕ್ಕೆ ಜೀವ ತುಂಬಿದವರು. 1965ರಲ್ಲೇ ಭಾರತದ ಆರ್ಥಿಕ ನೀತಿ ಹೇಗಿರಬೇಕು ಎಂದು ಕನಸು ಕಂಡವರು. ಅದನ್ನು ಎಲ್ಲ ಕಡೆ ಪ್ರತಿಪಾದಿಸಿದವರು. ಆಗ ಅವರ ಕನಸಿನ ಭಾರತ ಇನ್ನೂ ಮೂರ್ತ ರೂಪ ಪಡೆಯಲು ಅವಕಾಶ ದೊರಕಿರಲಿಲ್ಲ. ದೀನದಯಾಳ್‌ ಅವರ ಕನಸು ನನಸಾಗಲು 58 ವರ್ಷ ಕಾಯಬೇಕಾಗಿ ಬಂದಿತು.

Advertisement

ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಮೊಟ್ಟ ಮೊದಲ ಅವಕಾಶ ಸಿಗಬೇಕು. ಸರ್ವೋದಯ, ಅಂತ್ಯೋದಯ ದೊಂದಿಗೆ ಭಾರತ ಜಗತ್ತಿನಲ್ಲೇ “ಸೂಪರ್‌ ಪವರ್‌’ ಆಗಬೇಕು ಎಂದು ಬಯಸಿದ್ದರು. ಅದನ್ನು ಸಾಕಾರಗೊಳಿಸಿದವರು ನರೇಂದ್ರ ಮೋದಿ.

ಮೋದಿ ಅವರ ಈಗಿನ ಕಾರ್ಯಕ್ರಮಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ, ಎಲ್ಲವೂ ದೀನದಯಾಳ್‌ ಉಪಾಧ್ಯಾಯ ಕಂಡ ಕನಸು. ಇದು ಕಾಕತಾಳೀಯ ಎಂದರೂ ನಿಜ. 1965ರಲ್ಲಿ ದೀನದಯಾಳ್‌ “ಏಕಾತ್ಮ ಮಾನವದರ್ಶನ’ ವನ್ನು ಪ್ರತಿಪಾದಿಸಿದ್ದರು. ಅದು ಈಗ ಮೋದಿಯವರ ಕೈಯಲ್ಲಿ ಆತ್ಮನಿರ್ಬರ ಭಾರತ್‌ ಆಗಿದೆ. ಉನ್ನತ ವಿಚಾರಗಳು ಎಲ್ಲ ಕಾಲಕ್ಕೂ ಇದ್ದೇ ಇರುತ್ತದೆ ಎಂಬುದಕ್ಕೆ ಇದು ಸಾಕ್ಷಿ. 2014ರಿಂದ ಮೋದಿ ಇದರ ಬಗ್ಗೆ ಚಿಂತನೆ ನಡೆಸಿ ಈಗ ಅದಕ್ಕೆ ಯೋಜನೆಯ ರೂಪ ನೀಡುತ್ತಿದ್ದಾರೆ. ಸಂಸ್ಕೃತಿ ಮತ್ತು ನಾಗರಿಕತೆ ಯಾವುದೇ ಪುಸ್ತಕದಲ್ಲಿ ಇರುವುದಿಲ್ಲ. ಅದು ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವ ಸದ್ವಿಚಾರಗಳು. ಸನಾತನ ಧರ್ಮದ ಮಹತ್ವವೇ ಇದು. ದೀನದಯಾಳು ಹೇಳಿದ್ದು, ಮೋದಿ ಮಾಡಿದ್ದು ನಮಗೆ ಹೊಸದಾಗಿ ಕಾಣುವುದಿಲ್ಲ. ಏಕೆಂದರೆ ಅದು ನಮಗೆ ರಕ್ತವಾಗಿ ಬಂದಿರುತ್ತದೆ. ಪ್ರಾಚೀನ ನಾಗರಿಕತೆಯ ವಿಶೇಷ ಎಂದರೆ ಇದೇ. ಈ ನಾಗರಿಕತೆಯಲ್ಲಿ ಬೆಳೆದುಬಂದವರಿಗೆ ಹೊಸದಾಗಿ ಕಲಿಸಬೇಕಾದ ವಿಷಯ ಏನೂ ಇರುವುದಿಲ್ಲ.

ದೀನದಯಾಳ್‌ ಮೂಲತಃ ಆರ್‌ಎಸ್‌ಎಸ್‌ ಸ್ವಯಂಸೇವ ಕರು. ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸಿದವರು. ದೇಶದ ಆರ್ಥಿಕ ವ್ಯವಸ್ಥೆ ಅವರ ದೃಷ್ಟಿಯಲ್ಲಿ ಹಣ ಎಣಿಸುವುದಲ್ಲ. ಅದು ಆರ್ಥಿಕ ಆಧ್ಯಾತ್ಮ. ಆರ್ಥಿಕ ವ್ಯವ ಸ್ಥೆಗೂ ಆಧ್ಯಾತ್ಮಕ್ಕೂ ಸಂಬಅಧ ಕಲ್ಪಿಸಿಕೊಳ್ಳು ವುದು ಕಷ್ಟ. ಆದರೆ ಭಾರತೀಯರಿಗೆ ಇದು ಕಷ್ಟದ ಕೆಲಸವೇನಲ್ಲ. ಅವರಿಗೆ ಧರ್ಮದ ತಳಹದಿ ಇಲ್ಲದೆ ಯಾವ ಹುಲ್ಲುಕಡ್ಡಿಯೂ ಚಲಿಸುವುದಿಲ್ಲ. ಭಾರತೀಯ ಅರ್ಥವ್ಯ ವಸ್ಥೆಯಲ್ಲಿ ಮಾನವೀಯತೆಗೆ ಮೊದಲ ಸ್ಥಾನ. ರಾಷ್ಟ್ರೀಯತೆ ಇರಲೇಬೇಕು. ಮನುಷ್ಯತ್ವ ಮರೆತ ಅರ್ಥಿಕತೆ ಇರಲು ಸಾಧ್ಯವೇ ಇಲ್ಲ. ಪ್ರಜಾಪ್ರಭುತ್ವ ಹೇಗೆ ಜನರಿಂದ, ಜನರಿಗಾಗಿ ಜನರಿಗೋಸ್ಕರ ಇರುತ್ತದೋ ಹಾಗೆ ಆರ್ಥಿ ಕತೆಯೂ ಜನರಿಗೆ ಮೀಸಲು. ದೇಶದ ಪ್ರತಿಪ್ರಜೆ ಆರ್ಥಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗಲೇ ಪ್ರಜಾಪ್ರಭುತ್ವದಲ್ಲಿ ಆರ್ಥಿಕತೆಗೆ ಒಂದು ಅರ್ಥ. ದೀನದಯಾಳು ಇದನ್ನು ಪ್ರಸ್ತಾಪಿಸಿದ್ದರು. ಈಗ ಮೋದಿ ಜಾರಿಗೆ ತರುತ್ತಿದ್ದಾರೆ. ಉತ್ಪಾದನಾ ವಲಯ ಮತ್ತು ಸೇವಾ ವಲಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುವುದರಿಂದ ಜನರ ಪಾಲ್ಗೊಳ್ಳುವಿಕೆ ಕೂಡ ಇಲ್ಲಿ ಅಧಿಕ.

ಉತ್ಪಾದನೆ ಎಂದರೆ ನಾವು ಯಂತ್ರಗಳನ್ನು ಲೆಕ್ಕ ಹಾಕು ತ್ತೇವೆ. ಜನಸಮುದಾಯ ಸಾಮೂಹಿಕವಾಗಿ ಪಾಲ್ಗೊಂಡಲ್ಲಿ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಇದಕ್ಕೆ ತದ್ವಿರುದ್ದವಾಗಿ ನಡೆದುಕೊಂಡಿದ್ದರಿಅದಲೇ ಇಂದು ಔದ್ಯೋಗಿಕರಣ ಕುಸಿಯಲು ಕಾರಣ. ದೀನದಯಾಳ್‌ ಈ ದೋಷವನ್ನು ಗುರುತಿಸಿದ್ದರು. ಮೋದಿ ಅದನ್ನು ಈಗ ಸರಿಪಡಿಸುತ್ತಿದ್ದಾರೆ. ಈಗ ಸಾಫ್ಟ್ವೇ ರ್‌ ತಂತ್ರಜ್ಞಾನದಲ್ಲಿ ಸ್ಟಾರ್ಟ್‌ಅಪ್‌ ಬೆಳೆಯಲು ಮೋದಿಯವರ ದೂರದರ್ಶಿತ್ವ ಕಾರಣ. ಇದರಿಂದ ಈಗ ಯುವಕರು ಹೊಸ ಹೊಸ ಅನ್ವೇಷಣೆಗಳಿಗೆ ಸರಕಾರದ ನೆರವು ಪಡೆಯುತ್ತಿದ್ದಾರೆ. ಇದು ಕೈಗಾರಿಕಾ ವಲಯದಲ್ಲಿ ಹೊಸ ಗಾಳಿ ಬೀಸಲು ಕಾರಣ ವಾಗಿದೆ. ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರು ಖಾತೆ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ದೀನದಯಾಳ್‌ ಬಯಸಿದ್ದರು. ಅದನ್ನು ಜನ್‌ಧನ್‌ ಯೋಜನೆ ಮೂಲಕ ಮೋದಿ ಸಾಕಾರಗೊಳಿಸಿದರು. ಈಗ ಜಗತ್ತಿನಲ್ಲೇ ಅತಿ ಹೆಚ್ಚು ಡಿಜಿಟಲ್‌ ಬ್ಯಾಂಕಿಅಗ್‌ ವ್ಯವಸ್ಥೆ ಇರುವುದು ಭಾರತದಲ್ಲಿ ಮಾತ್ರ ಎಂಬುದನ್ನು ಮರೆಯುವ ಹಾಗಿಲ್ಲ.

Advertisement

ಕೃಷಿ ಸಂಚಾಯಿ, ಮುದ್ರಾ ಯೋಜನೆ ಗ್ರಾಮೀಣ ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ಸಿಗುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಅತ್ಮ ನಿರ್ಬರ ಭಾರತ್‌ ಉತ್ತಮ ಪ್ರತಿಫಲ ನೀಡಿದೆ. ಬಜೆಟ್‌ನಲ್ಲಿ ಇದಕ್ಕೆ 5.52 ಲಕ್ಷ ಕೋಟಿ ಇದಕ್ಕೆ ಮೀಸಲಿಡಲಾಗಿತ್ತು. ಈಗ ಗುರಿ ಮೀರಿ ಸಾಧನೆಯಾಗಿದೆ. ತೆರಿಗೆ ಪಾವತಿಯಲ್ಲಿ ಸಾಮಾನ್ಯವಾಗಿ ಕಳ್ಳರನ್ನು ಹುಡುಕುವುದೇ ಇಲಾಖೆಯ ಕೆಲಸ. ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರನ್ನು ಗುರುತಿಸುವ ಕೆಲಸ ನಡೆಯುತ್ತಿರಲಿಲ್ಲ. ಈಗ ಪ್ರಾಮಾಣಿಕರನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯುತ್ತಿದೆ. ಆರ್ಥಿಕ ರಂಗದಲ್ಲಿ ತಳ ಸಮುದಾಯದ ಬದುಕಿನಲ್ಲಿ ಮಹತ್ತರ ಬದಲಾವಣೆ ಬಂದಾಗ ಮಾತ್ರ ಇಡೀ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ನೋಡಲು ಸಾಧ್ಯ. ಇದನ್ನು ದೀನದಯಾಳು ಅಂತ್ಯೋದಯ ಎಂದು ಕರೆದರು. ಆಧುನಿಕ ಭಾರತದ ಕನಸು ಕಂಡಿದ್ದರು.

ಸ್ವದೇಶಿ ಭಾವನೆ ಯೊಂದಿಗೆ ವಿಕೇಂದ್ರೀಕರಣಗೊಂಡ ಉದ್ಯೋ ಗಾವಕಾಶ ಇರಬೇಕು. ಸಣ್ಣ ಅತಿ ಸಣ್ಣ ಕೈಗಾರಿಕೆಗಳು, ಸ್ವಯಂ ಉದ್ಯೋಗಿಗಳಿಗೆ ಉತ್ತೇಜನ ನೀಡುವ ಕೆಲಸ ನಡೆಯಬೇಕು. ಕೇಂದ್ರದ ಬಜೆಟ್‌ ನೋಡಿದರೆ ದೀನದಯಾಳ್‌ರ ಆಶಯ ಸ್ಪಷ್ಟವಾಗಿ ಗೋಚರಿಸುತ್ತದೆ. ಭಾರತದ ಭವ್ಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಆರ್ಥಿಕತೆ ಸದೃಢಗೊಳ್ಳಬೇಕು. ಪ್ರತಿ ಪ್ರಜೆಗೂ ಸ್ವಾತಂತ್ರ್ಯ, ಸಮಾನತೆ ಸಿಗಬೇಕು. ಧರ್ಮದ ಆಧಾರದ ಮೇಲೆ ಆಡಳಿತ ನಿಂತಿರಬೇಕು. ಎಂದು ಅವರು ಬಯಸಿದ್ದರು. ಅದನ್ನೇ ಮೋದಿ ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌’ ಎಂದು ಈಗಿನ ಪರಿಭಾಷೆಯಲ್ಲಿ ಹೇಳಿದ್ದಾರೆ.

ದೀನದಯಾಳ್‌ ಮೊದಲಿನಿಂದಲೂ ಆರ್‌ಎಸ್‌ಎಸ್‌ ಪ್ರಚಾರಕರು. 1916ರ ಸೆ.25ರಂದು ಜನಿಸಿದವರು. ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕುಗ್ರಾಮದವರು. ಚಿಕ್ಕಂದಿನಲ್ಲೇ ತಂದೆತಾಯಿ ವಾತ್ಸಲ್ಯ ಕಳೆದುಕೊಂಡವರು. ತಾಯಿಯ ರಾಜ್ಯ ರಾಜಸ್ಥಾನದಲ್ಲಿ ಬೆಳೆದವರು. ಬಿಎ ಮತ್ತು ಎಂಎ ಪದವಿಯಲ್ಲಿ ಚಿನ್ನದ ಪದಕ ಪಡೆದವರು. ರಾಷ್ಟ್ರಧರ್ಮ ವಾರಪತ್ರಿಕೆಯ ಸಂಪಾದಕರಾಗಿ ದುಡಿದವರು. 1937ರಲ್ಲಿ ನಾನಾಜಿ ದೇಶಮುಖ್‌ ಅವರ ಸಂಪರ್ಕದಲ್ಲಿ ಬೆಳೆದವರು. ಗುರೂಜಿ ಗೋಲ್ವಾಲ್ಕರ್‌ ಇವರನ್ನು ಬಿಜೆಪಿಯಲ್ಲಿ ಕೆಲಸ ಮಾಡಲು ನಿಯೋಜಿಸಿದರು. 1951ರಿಂದ 1967ವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1967ರ ಡಿಸೆಂಬರ್‌ನ ಲ್ಲಿ ಪಕ್ಷದ ಅಧ್ಯಕ್ಷರಾದರು. ಅಧಿಕಾರ ಸ್ವೀಕರಿಸಿ 43 ದಿನಗಳಷ್ಟೇ ಆಗಿತ್ತು. 1968ರ ಫೆಬ್ರ ವರಿ 11ರಂದು ಉತ್ತರ ಪ್ರದೇಶದ ಮೊಗಲ್‌ ಸರಾಯ್‌ ರೈಲ್ವೆ ನಿಲ್ದಾಣದಲ್ಲಿ ನಿಗೂಢ ರೀತಿಯಲ್ಲಿ ಅವರ ಪಾರ್ಥಿವ ಶರೀರ ಲಭಿಸಿತು. ದೀನದಯಾಳ್‌ ಅವರ ವಿಚಾರಧಾರೆಗಳು ಈಗ ಚಿರಂತನವಾಗಿದೆ. ದೀನದಯಾಳ್‌ ಅವರ ಮೂಲ ಹೆಸರು. ಹೆಸರಿಗೆ ತಕ್ಕಹಾಗೆ ಇದ್ದರು.

ಎಸ್‌.ಎ. ಹೇಮಂತ್‌, ಪತ್ರಕರ್ತ

 

Advertisement

Udayavani is now on Telegram. Click here to join our channel and stay updated with the latest news.

Next