Advertisement

ಕೇರಳದ ಕುರಿತು ಮೋದಿ ಕಟ್ಟುಕಥೆ: ಪಿಣರಾಯಿ

10:00 PM Apr 20, 2019 | sudhir |

ಕಾಸರಗೋಡು: ಆಚಾರ, ನಂಬಿಕೆ ಸಂರಕ್ಷಣೆ ಪ್ರಧಾನಿ ಮೋದಿಯವರ ಹೊಣೆಗಾರಿಕೆಯಾಗಿದೆ. ವಾಸ್ತವತೆಯನ್ನು ಮರೆಮಾಚಿ ಕಟ್ಟು ಕಥೆಯನ್ನು ಹೆಣೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಹೇಳಿದರು.

Advertisement

ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್‌ ಪರವಾಗಿ ನಗರದ ನುಳ್ಳಿಪ್ಪಾಡಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಂಬುಗೆಗೆ ಹಾನಿ ಉಂಟು ಮಾಡುವುದಲ್ಲ. ಬದಲಾಗಿ ಎಲ್ಲರಿಗೂ ಅವರವರ ನಂಬಿಕೆಗಳಿಗೆ ಹೊಂದಿಕೊಂಡು ಜೀವಿಸುವ ಹಕ್ಕಿಗಾಗಿ ನೆಲೆಗೊಂಡಿರುವ ಒಕ್ಕೂಟ ಎಡರಂಗ ಎಂದ ಪಿಣರಾಯಿ ಕ್ರಿಮಿನಲ್‌ಗ‌ಳನ್ನು ಸಂರಕ್ಷಿಸುವ ನಿಲುವನ್ನು ಎಂದೂ ಕೈಗೊಳ್ಳದು. ಇದು ಕೇರಳ ಎಂಬುದನ್ನು ಎಲ್ಲರೂ ಮನಗಾಣಬೇಕು.

ಕಾನೂನು ಮತ್ತು ಶಿಸ್ತು ಹದಗೆಟ್ಟಿರುವ ರಾಜ್ಯ ಕೇರಳವಾಗಿದೆ ಎಂದು ಹೇಳುತ್ತಿರುವ ಪ್ರಧಾನಿ ಅವರ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುವುದನ್ನು ಅವರು ಮೊದಲು ಮನಗಾಣ ಬೇಕು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕ್ರಿಮಿನಲ್‌ಗ‌ಳಿಗೆ ಪೂರ್ಣ ಸಂರಕ್ಷಣೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next