Advertisement

BJP: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ರದ್ದು

11:22 PM Jan 17, 2024 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ರೋಡ್‌ ಶೋ ಕೊನೆಯ ಘಳಿಗೆಯಲ್ಲಿ ರದ್ದಾಗಿದೆ. ಜ. 19ರಂದು ಅಪರಾಹ್ನ 2.10ರಿಂದ 3.55ರ ವರೆಗೆ ಮಾತ್ರ ಬೆಂಗಳೂರು ಕಾರ್ಯಕ್ರಮಕ್ಕೆ ಸಮಯಾವಕಾಶ ನೀಡಲಾಗಿದೆ.

Advertisement

ಪ್ರಧಾನಿ ಕಾರ್ಯಾಲಯದ ಸೂಚನೆ ಹಿನ್ನೆಲೆಯಲ್ಲೇ ಬಿಜೆಪಿ ನಾಯಕರು ರೋಡ್‌ ಶೋಗೆ ಸಿದ್ಧತೆ ನಡೆಸಿದ್ದರು. ಆದರೆ ಜ. 19ರಂದು ಸೊಲ್ಲಾಪುರಕ್ಕೂ ಅವರು ಭೇಟಿ ನೀಡಲಿದ್ದಾರೆ. ಸಮಯದ ಕೊರತೆಯಿಂದಾಗಿ ರೋಡ್‌ ಶೋ ರದ್ದಾಗಿದೆ.

ಜ. 19ರ ಕಾರ್ಯಕ್ರಮ ಏನು?
ಬೆಳಗ್ಗೆ 9.35ಕ್ಕೆ ಪ್ರಧಾನಿ ಮೋದಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿ ಕಾಪ್ಟರ್‌ನಲ್ಲಿ ಸೊಲ್ಲಾಪುರಕ್ಕೆ ಭೇಟಿ ನೀಡಿ ಕಲಬುರಗಿಗೆ ವಾಪಸಾಗಲಿದ್ದಾರೆ. ಮಧ್ಯಾಹ್ನ 1.05ಕ್ಕೆ ಕಲ ಬುರಗಿಯಿಂದ ಹೊರಟು 2.10ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು.

ಅಪರಾಹ್ನ 2.15ಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಹೊರಟು ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಆಂಡ್‌ ಟೆಕ್ನಾಲಜಿ ಹಾಗೂ ಬೋಯಿಂಗ್‌ ಸುಕನ್ಯಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. 2.45ರಿಂದ 3.45ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next