Advertisement

ಕಾರ್ಪೊರೇಟ್‌ ವಲಯಕ್ಕೆ ಮೋದಿ ಭರವಸೆಯ ಮಾತು

10:15 AM Jan 07, 2020 | sudhir |

ನವದೆಹಲಿ: “ಕೆಲವೊಂದು ಭ್ರಷ್ಟ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡೊಡನೆ, ಇಡೀ ಕಾರ್ಪೊರೇಟ್‌ ವಲಯದ ಮೇಲೆಯೇ ಸರ್ಕಾರ ದಾಳಿ ನಡೆಸುತ್ತಿದೆ ಎಂದು ಭಾವಿಸಬಾರದು.’

Advertisement

ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ದೆಹಲಿಯಲ್ಲಿ ಸೋಮವಾರ ಕ್ರಿರ್ಲೋಸ್ಕರ್‌ ಸಹೋದರರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರದ ನೈಜ ಉದ್ದೇಶಗಳನ್ನು ಉದ್ಯಮಿಗಳಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ.

ಉದ್ದಿಮೆಗಳು ಯಾವುದೇ ಭಯ ಹಾಗೂ ಅಡೆತಡೆಯಿಲ್ಲದೇ ಪಾರದರ್ಶಕ ಪರಿಸರದಲ್ಲಿ ಸಂಪತ್ತು ಸೃಷ್ಟಿಸುವಂತೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ ಕಾನೂನುಗಳ ಜಾಲದಿಂದ ಉದ್ದಿಮೆಗಳನ್ನು ಪಾರು ಮಾಡುವ ಪ್ರಯತ್ನವನ್ನೂ ನಡೆಸುತ್ತಿದ್ದೇವೆ. ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ತರಲಾಗಿದೆ, ಕಾರ್ಪೊರೇಟ್‌ ತೆರಿಗೆಯನ್ನೂ ಇಳಿಸಲಾಗಿದೆ ಎಂದೂ ಮೋದಿ ತಿಳಿಸಿದ್ದಾರೆ.

ಪ್ರಮುಖರ ಜತೆ ಚರ್ಚೆ:
ಈ ನಡುವೆ, ಪ್ರಧಾನಿ ಮೋದಿ ಸೋಮವಾರ ಪ್ರಮುಖ ಉದ್ದಿಮೆ ದಿಗ್ಗಜರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಜೆಟ್‌ಗೂ ಮುನ್ನ, ದೇಶದ ಆರ್ಥಿಕತೆ ಬಗ್ಗೆ ಹಾಗೂ ಆರ್ಥಿಕ ಪ್ರಗತಿಗೆ, ಉದ್ಯೋಗ ಸೃಷ್ಟಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ. ಮುಕೇಶ್‌ ಅಂಬಾನಿ, ರತನ್‌ ಟಾಟಾ, ಸುನೀಲ್‌ ಭಾರ್ತಿ ಮಿತ್ತಲ್‌, ಆನಂದ್‌ ಮಹೀಂದ್ರಾ, ಅನಿಲ್‌ ಅಗರ್ವಾಲ್‌, ಅದನಿ ಸೇರಿದಂತೆ ಪ್ರಮುಖ ಉದ್ಯಮಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next