Advertisement

ಬಿಜೆಪಿ ಸಂಸದರ‌ ಪಾದಯಾತ್ರೆ

09:13 AM Jul 11, 2019 | mahesh |

ನವದೆಹಲಿ: ಈ ವರ್ಷ, ಮಹಾತ್ಮ ಗಾಂಧಿಯವರ 150ನೇ ಜನ್ಮದಿನೋತ್ಸವ ವರ್ಷವಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಬಿಜೆಪಿ ಸಂಸದನೂ ತಮ್ಮ ಕ್ಷೇತ್ರದಲ್ಲಿ ಅಕ್ಟೋಬರ್‌ 2ರಿಂದ 31ರೊಳಗೆ 150 ಕಿ.ಮೀ.ಗಳವರೆಗೆ ಪಾದಯಾತ್ರೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Advertisement

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಎಲ್ಲಾ ಸಂಸದರಿಗೆ ಈ ಆದೇಶ ರವಾನಿಸಿರುವ ಮೋದಿ, ರಾಜ್ಯಸಭೆಯ ಬಿಜೆಪಿ ಸಂಸದರಿಗೆ ತಾವು ಪ್ರತಿನಿಧಿಸಿರುವ ರಾಜ್ಯಗಳಲ್ಲಿ ಬಿಜೆಪಿ ಎಲ್ಲಿ ದುರ್ಬಲವಾಗಿದೆಯೋ ಅಲ್ಲಿಗೆ ಭೇಟಿ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್, ಅ. 2ರಂದೇ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲರ ಜನ್ಮದಿನವೂ ಇರುವುದರಿಂದ ಆ ಇಬ್ಬರೂ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಈ ಪಾದಯಾತ್ರೆಗಳನ್ನು ಆಯೋಜಿಸಬೇಕು ಎಂಬುದು ಮೋದಿಯವರ ಆಶಯ ಎಂದು ತಿಳಿಸಿದರು.

ಜನಾಭಿಮತ ಅರಿಯುವ ಉದ್ದೇಶ: ಪಾದಯಾತ್ರೆಯ ರೂಪುರೇಷೆಗಳನ್ನು ವಿವರಿಸಿದ ಸಚಿವ ಮೇಘ್ವಾಲ್, ಪ್ರತಿಯೊಬ್ಬ ಸಂಸದನೂ ತನ್ನ ಕ್ಷೇತ್ರದಲ್ಲಿ ಪಾದಯಾತ್ರೆಗಾಗಿ 150 ಗುಂಪುಗಳನ್ನು ರಚಿಸಬೇಕು. ಆ ಗುಂಪುಗಳೆಲ್ಲವೂ 150 ಕಿ.ಮೀ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಆಯಾ ಕ್ಷೇತ್ರದ ಸಂಸದರು ಆ ಗುಂಪುಗಳ ಜತೆಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಬೇಕು ಎಂದರು. ಜನರೊಟ್ಟಿಗೆ ಸಂಸದರು ಬೆರೆಯುವಂತೆ ಮಾಡಲು, ಸರ್ಕಾರದ ಆಡಳಿತದ ಬಗ್ಗೆ ಜನರ ಪ್ರತಿಕ್ರಿಯೆಗಳನ್ನು ದಾಖಲಿಸುವ ಹಾಗೂ ಸರ್ಕಾರದ ಬಗ್ಗೆ ಅವರು ಹೊಂದಿರುವ ನಿರೀಕ್ಷೆಗಳನ್ನು ಅರಿಯುವ ಉದ್ದೇಶವೂ ಈ ಪಾದಯಾತ್ರೆಯ ಹಿಂದಿದೆ ಎಂದು ಅವರು ತಿಳಿಸಿದರು.

ಗಿಡ ನೆಡುವ ಕ್ರಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ
”ಪಾದಯಾತ್ರೆಯ ಜತೆಗೆ ತಮ್ಮ ಕ್ಷೇತ್ರಗಳಲ್ಲಿ ಎಲ್ಲಾ ಸಂಸದರೂ ಗಿಡ ನೆಡುವುದು, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂಥ ಕೆಲಸಗಳನ್ನು ಮಾಡಬೇಕು ಎಂದಿರುವ ಪ್ರಧಾನಿ ಮೋದಿ, ಹಳ್ಳಿಗಳ ಸಮಸ್ಯೆ ನಿರ್ಮೂಲನೆಯ ಕಾರ್ಯಗಳಿಗೆ ಚಾಲನೆ ನೀಡಬೇಕು ಎಂದೂ ಸೂಚಿಸಿದ್ದಾರೆ” ಎಂದು ಮೇಘ್ವಾಲ್ ಹೇಳಿದ್ದಾರೆ. ಅಸಲಿಗೆ, ಅ. 2ರಿಂದ ಗಾಂಧಿಯವರ ಪುಣ್ಯತಿಥಿಯಾದ ಜ. 31ರವರೆಗೆ ಪಾದಯಾತ್ರೆಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆಯಾದರೂ, ಆ ಕಾರ್ಯಕ್ರಮದ ಅವಧಿಯನ್ನು ಪಕ್ಷವೇ ನಿರ್ಧರಿಸಲಿದೆ” ಎಂದು ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next