Advertisement

ಮೋದಿ ಪ್ರಮಾಣವಚನ –ಮೇ 30ರಂದು 1 ಲಕ್ಷ ಲಾಡು ಹಂಚುತ್ತೇವೆ: ಕೆಎಸ್ ಈಶ್ವರಪ್ಪ

10:00 AM May 29, 2019 | Nagendra Trasi |

ಶಿವಮೊಗ್ಗ:ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಹಾಗೂ ಬಿಜೆಪಿ ವಿಜಯ ಸಂಭ್ರಮಕ್ಕಾಗಿ ಮೇ 30ರಂದು ಪ್ರತಿ ಮನೆಗೂ ಲಾಡು ಹಂಚುವ ನಿಟ್ಟಿನಲ್ಲಿ ಒಂದು ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಪ್ರಚಂಡ ವಿಜಯದ ಸಂಭ್ರಮಕ್ಕಾಗಿ ಮನೆ, ಮನೆಗೆ ಲಾಡು ಹಂಚಲು. ಸುಮಾರು 60-70 ಬಾಣಸಿಗರಿಂದ ಒಂದು ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದೆ ಎಂದರು.

ಶಿವಮೊಗ್ಗ ನಗರದಲ್ಲಿ 84 ಸಾವಿರ ಮನೆಗಳಿವೆ. ಪ್ರತಿ ಮನೆಗೂ ಮೇ 30ರಂದು ಲಾಡುಗಳನ್ನು ಹಂಚಲು ನಿರ್ಧರಿಸಿದ್ದೇವೆ, ಅದಕ್ಕಾಗಿ ಮೂರು ಕಡೆ ಲಾಡುಗಳನ್ನು ತಯಾರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next