Advertisement

ಮೋದಿ ಪ್ರಮಾಣವಚನ: ಅಭಿಮಾನಿಗಳಿಂದ ವಿವಿಧ ಉಚಿತ ಸೇವೆ

11:12 PM May 30, 2019 | Sriram |

ಮಹಾನಗರ: ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ದಿನವಾದ ಗುರುವಾರ ನಗರದ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತ್ತು.

Advertisement

ಮೋದಿ ಪ್ರಮಾಣ ವಚನವನ್ನು ಕಣ್ತುಂಬಿಕೊಳ್ಳಲು ಬಹುತೇಕ ಜನತೆ ಟಿವಿ ಮುಂದೆ ಕಾದು ಕುಳಿತಿದ್ದರೆ, ಇತ್ತ ನಗರದ ಅಲ್ಲಲ್ಲಿ ಹಾಕಲಾದ ಎಲ್ಸಿಡಿ ಪರದೆಯ ಮೂಲಕ ನೇರ ವೀಕ್ಷಣೆ ಮಾಡಿದರು. ಕಳೆದ ಎಪ್ರಿಲ್ನಲ್ಲಿ ಚುನಾವಣ ಪ್ರಚಾರಕ್ಕಾಗಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಿದ್ದ ವೇಳೆ ಅವರ ಭಾಷಣ ಆಲಿಸಲು ಸಾಗರೋಪಾದಿಯಲ್ಲಿ ಜನ ಸೇರಿದ್ದರು. ಮೋದಿ ಆ ದಿನ ಸಂಚರಿಸಿದ್ದ ರಸ್ತೆಯ ಇಕ್ಕೆಲಗಳಲ್ಲೂ ಜನ ಸಾಗರವೇ ನೆರೆದಿದ್ದು, ತಮ್ಮತ್ತ ಕೈ ಬೀಸುತ್ತಿದ್ದ ದೃಶ್ಯ ಸ್ವತಃ ನರೇಂದ್ರ ಮೋದಿಯವರನ್ನೇ ಚಕಿತರನ್ನಾಗಿಸಿತ್ತು.

ಬೆಳಗ್ಗಿನಿಂದಲೇ ಪ್ರಮಾಣ ವಚನದ ಹೊತ್ತಿಗಾಗಿ ಕಾಯುತ್ತಿದ್ದ ಅಭಿಮಾನಿ ಗಳು, ದಿಲ್ಲಿಯಲ್ಲಿ ಸಮಾರಂಭ ಆರಂಭ ವಾಗುತ್ತಿದ್ದಂತೆ ಚಪ್ಪಾಳೆ ತಟ್ಟುತ್ತಾ ‘ಮೋದಿ ಮೋದಿ’ ಎಂದು ಘೋಷಣೆ ಕೂಗತೊಡಗಿದ್ದರು. ಕಳೆದ ಅವಧಿಯಲ್ಲಿ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಮೋದಿ, ಈ ಬಾರಿಯೂ ಈಶ್ವರರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮೂರು ಕಡೆ ಎಲ್ಸಿಡಿ ಪರದೆ
ಪ್ರಮಾಣವಚನ ಸ್ವೀಕಾರ ಸಮಾ ರಂಭದ ನೇರ ವೀಕ್ಷಣೆಗೆ ಸಾರ್ವಜನಿಕರಿಗೂ ಅನುಕೂಲವಾಗುವಂತೆ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರ ನೇತೃತ್ವದಲ್ಲಿ ವಿಎಸ್‌ ಬಳಿಯಿರುವ ಬಿಜೆಪಿ ಕಚೇರಿಯ ಎದುರು ಬೃಹತ್‌ ಎಲ್ಸಿಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಎದುರು ಮೋದಿ ಅಭಿಮಾನಿಗಳ ವತಿಯಿಂದ ಮತ್ತು ಬಿಜೆಪಿ ಸ್ಲಂ ಮೋರ್ಚಾದ ವತಿಯಿಂದ ಪಿವಿಎಸ್‌ ಕಲಾಕುಂಜದ ಬಳಿ ಇರುವ ಬಿಜೆಪಿ ಕಾರ್ಯಾಲಯದಲ್ಲಿ ಬೃಹತ್‌ ಎಲ್ಸಿಡಿ ಪರದೆಗಳನ್ನು ಹಾಕಲಾಗಿತ್ತು. ಸಂಜೆ 5 ಗಂಟೆಗೆ ಮೊದಲೇ ಜನ ಆಗಮಿಸಿ ಪ್ರಮಾಣವಚನದ ನೇರ ವೀಕ್ಷಣೆಗೆ ಎಲ್ಸಿಡಿ ಮುಂದೆ ನಿಂತಿದ್ದರು. ಇಲ್ಲಿಯೂ ಮೋದಿ ಪರ ಘೋಷಣೆ ಸಾಮಾನ್ಯವಾಗಿತ್ತು.

ಮರಳು ಶಿಲ್ಪ
ಪಿವಿಎಸ್‌ ಕಲಾಕುಂಜದ ಬಳಿಯಿರುವ ಬಿಜೆಪಿ ಕಾರ್ಯಾಲಯದಲ್ಲಿ ಮರಳು ಚಿತ್ರಕಾರ ಹರೀಶ್‌ ಆಚಾರ್ಯ ಅವರಿಂದ ಮೋದಿಯವರ ಮರಳಿನ ರೂಪ ಚಿತ್ರವನ್ನು ಪ್ರದರ್ಶಿಸುವ ವ್ಯವಸ್ಥೆಯೂ ಇತ್ತು. ಎಲ್ಸಿಡಿ ಮೂಲಕ ನೇರ ವೀಕ್ಷಣೆಗೆ ಆಗಮಿಸಿದವರೆಲ್ಲ ಮರಳಿನಲ್ಲಿ ರಚಿಸಿದ ಮೋದಿ ಚಿತ್ರವನ್ನು ನೋಡಿ ಖುಷಿಯಾದರು.

Advertisement

ನಮೋ ಟೀ ಸ್ಟಾಲ್
ಮೋರ್ಗನ್ಸ್‌ಗೇಟ್ ಮೋದಿ ಅಭಿಮಾನಿ ಬಳಗದ ವತಿಯಿಂದ ಮೋರ್ಗನ್‌ಗೇಟ್ ಜಂಕ್ಷನ್‌ನಲ್ಲಿ ನಮೋ ಟೀ ಸ್ಟಾಲ್ ತೆರೆಯಲಾಗಿದ್ದು, ಗುರುವಾರ ಬೆಳಗ್ಗೆಯಿಂದಲೇ ಉಚಿತ ಟೀ ಮತ್ತು ಸಮೋಸದ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಾಸಕ ಡಿ. ವೇದವ್ಯಾಸ ಕಾಮತ್‌ ಸಾರ್ವಜನಿಕರಿಗೆ ಚಹಾ ನೀಡುವ ಮೂಲಕ ಚಾಲನೆ ನೀಡಿದರು. ಹಲವಾರು ಮಂದಿ ಉಚಿತ ಸೇವೆಯನ್ನು ಸ್ವೀಕರಿಸಿದರು. ಮುಖಂಡರಾದ ನಿತಿನ್‌ ಕುಮಾರ್‌, ರವಿ ಶಂಕರ್‌ ಮಿಜಾರು, ಪ್ರೇಮಾನಂದ್‌ ಶೆಟ್ಟಿ, ದೀಪಕ್‌ ವೈ. ವಸಂತ್‌ ಜೆ. ಪೂಜಾರಿ, ಉಮಾನಾಥ ಬೋಳಾರ್‌, ಶಿವಪ್ರಸಾದ್‌, ಜನಾರ್ದನ ಕುಡ್ವ, ದೇವದಾಸ್‌ ಶೆಟ್ಟಿ, ಅನಿಲ್ ಕುಮಾರ್‌, ಲತೀಶ್‌, ಭಾಸ್ಕರ್‌ ಚಂದ್ರ ಶೆಟ್ಟಿ, ಲಲೇಶ್‌ ಅತ್ತಾವರ ಮದೊಲಾದವರು ಉಪಸ್ಥಿತರಿದ್ದರು.

ಉಚಿತ ಪಾಸ್‌ಪೋರ್ಟ್‌ ಸೇವೆ
ಮೋದಿ ಪ್ರಮಾಣವಚನದಂದು ನಗ ರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಪುನಿಕ್‌ ಸ್ಟುಡಿಯೋದಲ್ಲಿ ಉಚಿತ ಪಾಸ್‌ಪೋರ್ಟ್‌ ಸೇವೆಯನ್ನು ಒದಗಿಸಲಾಗಿತ್ತು.

ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣದ ಬಳಿ ಕಬ್ಬಿನ ಹಾಲು ವ್ಯಾಪಾರದಲ್ಲಿ ತೊಡಗಿರುವ ಶಂಕರ್‌ ಅವರು ಗುರುವಾರ ಸಂಜೆ 5ರಿಂದ 8ರ ತನಕ ತಮ್ಮ ಅಂಗಡಿಗೆ ಆಗಮಿಚಿಸಿದ ಎಲ್ಲರಿಗೂ ಉಚಿತ ಕಬ್ಬಿನ ಹಾಲು ವಿತರಿಸಿದರು. ಸಾಮಾಜಿಕ ತಾಣಗಳಾದ ಟ್ವಿಟರ್‌, ಫೇಸ್ಬುಕ್‌, ವಾಟ್ಸಾಪ್‌ಗ್ಳಲ್ಲಿಯೂ ನಮೋ ಪ್ರಮಾಣವಚನದ ಸುದ್ದಿಯೇ ಹರಿದಾಡುತ್ತಿತ್ತು. ಇನ್ನು ಪ್ರಮಾಣವಚನ ಸಮಾರಂಭ ಆರಂಭವಾಗುತ್ತಿದ್ದಂತೆ ಮನೆಗಳು, ಅಂಗಡಿ ಮುಂಗಟ್ಟು, ಹೊಟೇಲ್, ಮಾಲ್ ಸೇರಿದಂತೆ ಎಲ್ಲೆಡೆಯೂ ಕುತೂಹಲದಿಂದ ಟಿವಿ ವೀಕ್ಷಣೆಯಲ್ಲಿ ತೊಡಗಿದ್ದರು.

ಕಿನ್ನಿಗೋಳಿ: ಉಚಿತ ಬಸ್‌ ಸೇವೆ
ಕಿನ್ನಿಗೋಳಿ: ನರೇಂದ್ರ ಮೋದಿಯವರು ಗುರುವಾರ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿ ಬಳಗದವರು ದಿನಪೂರ್ತಿ ಪ್ರಯಾಣಿಕರಿಗೆ ಉಚಿತ ಬಸ್‌ ಸೇವೆಯನ್ನು ನೀಡುತ್ತಿದ್ದು, ಅದಕ್ಕಾಗಿ ಮೇ 30 ರಂದು ಬೆಳಗ್ಗೆ 7 ಗಂಟೆಗೆ ಕಿನ್ನಿಗೋಳಿಯ ಬಸ್ಸು ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಿಹಿ ತಿಂಡಿ ವಿತರಣೆ ಮಾಡಿ ಚಾಲನೆ ನೀಡಲಾಯಿತು.

ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮುಖಂಡ ಭುವನಾಭಿರಾಮ ಉಡುಪ, ಚಾಲಕ ಶ್ರೀಕಾಂತ್‌ ಬಲವಿನ ಗುಡ್ಡೆ , ಮಿಥುನ್‌ ಆಚಾರ್ಯ ಬಲವಿನ ಗುಡ್ಡೆ, ಜಗದೀಶ್‌, ಪ್ರಕಾಶ್‌ ತಾಳಿಪಾಡಿ, ಎಸ್‌.ಸಿ. ಮೋರ್ಚಾ ವಿಟuಲ ಎಂ.ಎನ್‌., ಗಣೇಶ್‌ ಶೆಟ್ಟಿ ಉಪಸ್ಥಿತರಿದ್ದರು.

ಕಿನ್ನಿಗೋಳಿಯಿಂದ ಮೂಡುಬಿದಿರೆ ಮತ್ತು ಮಂಗಳೂರು ಸಂಚರಿಸುವ ಕೋಟ್ಯಾನ್‌ ಕಿನ್ನಿಗೋಳಿಯಿಂದ ಮೂಡು ಬಿದಿರೆಗೆ ಹೊರಟು ಅಲ್ಲಿಂದ ಕಿನ್ನಿಗೋಳಿಗೆ ವಾಪಾಸ್ಸಾಗಿ ನಂತರ ಮಂಗಳೂರು ತಲು ಪಲಿದ್ದು ಹೀಗೆ ಎರಡು ಟ್ರಿಪ್‌ ಇದೇ ಮಾರ್ಗವಾಗಿ ಸಂಚರಿಸಲಿದೆ.

ನಗರದ ಸಿಟಿ ಸೆಂಟರ್‌ ಮುಂಭಾಗದ ವಸಂತ್‌ಮಹಲ್ ಬಳಿ ಹೂವಿನ ವ್ಯಾಪಾರಿ ಫಕೀರಬ್ಬ ಅವರು 100 ಅಟ್ಟೆ (400 ಚೆಂಡು) ಮಲ್ಲಿಗೆಯನ್ನು ಮಹಿಳೆಯರಿಗೆ ಉಚಿತವಾಗಿ ಹಂಚಿದರು. ವಿಶೇಷವೆಂದರೆ, ಮಲ್ಲಿಗೆ ಪಡೆದುಕೊಳ್ಳಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಹದಿನೈದೇ ನಿಮಿಷದಲ್ಲಿ ಮಲ್ಲಿಗೆ ಹೂ ಖಾಲಿಯಾಗಿತ್ತು. ಈ ವೇಳೆ ಮಾತನಾಡಿದ ಫಕೀರಬ್ಬ, ‘ನಾನು ಯಾವುದೇ ಪಕ್ಷದವನಲ್ಲ. ಮೋದಿಯವರ ಅಭಿಮಾನಿ. ಮೋದಿ ಆಡಳಿತದಲ್ಲಿ ದೇಶ ಸುಭಿಕ್ಷವಾಗಬೇಕು ಎಂಬ ಆಶಯ ಹೊತ್ತು ಅವರ ಪ್ರಮಾಣವಚನದ ದಿನ ಈ ಸಣ್ಣ ಸೇವೆಯನ್ನು ನೀಡಿದ್ದೇನೆ’ ಎಂದರು.

ಪಕ್ಷಿಕೆರೆ: ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿ ಸೀತಾರಾಮ ಪಂಜ ಇಡೀ ದಿನ ಪ್ರಯಾಣಿಕರಿಗೆ ಉಚಿತ ಆಟೋ ಸೇವೆ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್‌ ಚಾಲನೆ ನೀಡಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್‌ ಸದಸ್ಯ ವಿನೋದ್‌ ಬೊಳ್ಳೂರು, ಕೆಮ್ರಾಲ್ ಗ್ರಾಮ ಪಂಚಾಯತ್‌ ಅಧ್ಯಕ್ಷ ನಾಗೇಶ್‌ ಬೊಳ್ಳೂರು, ಈಶ್ವರ್‌ ಕಟೀಲು , ಹರಿಪ್ರಸಾದ್‌, ಸೇಸಪ್ಪ ಸಾಲ್ಯಾನ್‌, ಲೋಹಿತ್‌, ರಾಜೇಶ್‌ ಪಂಜ, ಶಂಭು ಶೆಟ್ಟಿ, ಸಚಿನ್‌, ದಿನೇಶ್‌ ಹರಿಪಾದೆ, ಮೋಹನ್‌ ದಾಸ್‌, ನಿತಿನ್‌, ಸುನಾಲ್ ಶೆಟ್ಟಿ ಉಪಸ್ಥಿತರಿದ್ದರು.

100 ಅಟ್ಟೆ ಮಲ್ಲಿಗೆ 15 ನಿಮಿಷದಲ್ಲಿ ಖಾಲಿ!

ನಗರದ ಸಿಟಿ ಸೆಂಟರ್‌ ಮುಂಭಾಗದ ವಸಂತ್‌ಮಹಲ್ ಬಳಿ ಹೂವಿನ ವ್ಯಾಪಾರಿ ಫಕೀರಬ್ಬ ಅವರು 100 ಅಟ್ಟೆ (400 ಚೆಂಡು) ಮಲ್ಲಿಗೆಯನ್ನು ಮಹಿಳೆಯರಿಗೆ ಉಚಿತವಾಗಿ ಹಂಚಿದರು. ವಿಶೇಷವೆಂದರೆ, ಮಲ್ಲಿಗೆ ಪಡೆದುಕೊಳ್ಳಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಹದಿನೈದೇ ನಿಮಿಷದಲ್ಲಿ ಮಲ್ಲಿಗೆ ಹೂ ಖಾಲಿಯಾಗಿತ್ತು. ಈ ವೇಳೆ ಮಾತನಾಡಿದ ಫಕೀರಬ್ಬ, ‘ನಾನು ಯಾವುದೇ ಪಕ್ಷದವನಲ್ಲ. ಮೋದಿಯವರ ಅಭಿಮಾನಿ. ಮೋದಿ ಆಡಳಿತದಲ್ಲಿ ದೇಶ ಸುಭಿಕ್ಷವಾಗಬೇಕು ಎಂಬ ಆಶಯ ಹೊತ್ತು ಅವರ ಪ್ರಮಾಣವಚನದ ದಿನ ಈ ಸಣ್ಣ ಸೇವೆಯನ್ನು ನೀಡಿದ್ದೇನೆ’ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next