Advertisement

ದಿಲ್ಲಿಯಿಂದ ಕಲಬುರಗಿಗೆ ಬಂದು ಸೊಲ್ಲಾಪುರಕ್ಕೆ ಮೋದಿ ಪ್ರಯಾಣ

01:39 AM Jan 19, 2024 | Team Udayavani |

ಬೆಂಗಳೂರು/ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಕರ್ನಾಟಕ ಮತ್ತು ತಮಿಳುನಾಡುಗಳಿಗೆ ಭೇಟಿ ನೀಡಲಿದ್ದಾರೆ. ಜ. 19ರಂದು ಬೆಳಗ್ಗೆ 7.35ಕ್ಕೆ ದಿಲ್ಲಿಯಿಂದ ಭಾರತೀಯ ವಾಯುಸೇನೆಯ ವಿಶೇಷ ವಿಮಾನದಲ್ಲಿ ಹೊರಟು 9.35ಕ್ಕೆ ಕಲಬುರಗಿ ತಲುಪಿ ಅಲ್ಲಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಅನಂತರ ಕಲಬುರಗಿ ಮೂಲಕ ಅಪರಾಹ್ನ 2.15ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

Advertisement

ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಬಿ. ಮಾರನ ಹಳ್ಳಿಯಲ್ಲಿ ಬೋಯಿಂಗ್‌ ಇಂಡಿಯಾ ಇಂಜಿನಿಯ ರಿಂಗ್‌ ಮತ್ತು ಟೆಕ್ನಾಲಜಿ ಕೇಂದ್ರಕ್ಕೆ ಚಾಲನೆ ನೀಡಿ, ಬೋಯಿಂಗ್‌ ಸುಕನ್ಯಾ ಕಾರ್ಯಕ್ರಮವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅಪರಾಹ್ನ 2.45ರಿಂದ 3.45ರ ವರೆಗೆ ಜರುಗಲಿರುವ ಕಾರ್ಯಕ್ರಮ ಮುಗಿಸಿಕೊಂಡು ಚೆನ್ನೈಯತ್ತ ತೆರಳಲಿದ್ದಾರೆ. ಅಲ್ಲಿ ಖೇಲೋ ಇಂಡಿಯಾದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಜ. 20ರಂದು ತಮಿಳುನಾಡಿನಲ್ಲಿ ಶ್ರೀರಾಮೇಶ್ವರ ದೇವಸ್ಥಾನಕ್ಕೂ ತೆರಳಿ ಅಗ್ನಿತೀರ್ಥದ ಪವಿತ್ರ ಜಲವನ್ನು ಸಂಗ್ರಹಿಸಿಕೊಂಡು ಹೊಸದಿಲ್ಲಿಗೆ ಮರಳಲಿದ್ದಾರೆ. ಲೇಪಾಕ್ಷಿ, ಗುರುವಾಯೂರು, ರಾಮೇಶ್ವರದ ಪ್ರಸಾದವನ್ನು ಅಯೋಧ್ಯೆಯ ಶ್ರೀರಾಮ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬಳಕೆ ಮಾಡಲಿದ್ದಾರೆ.

ಪ್ರಧಾನಿ ನಾಲ್ಕೈದು ದಿನಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಲೇಪಾಕ್ಷಿ, ಗುರುವಾಯೂರುಗಳಿಗೆ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next