Advertisement

ಮೋದಿ ಭಾರತದಲ್ಲಿ ಜನರು ಸ್ವಂತ ಹಣ ಬಳಸುವಂತಿಲ್ಲ: ರಾಹುಲ್‌ ಟೀಕೆ

04:04 PM Oct 01, 2018 | udayavani editorial |

ಹೊಸದಿಲ್ಲಿ : ಬಾಲಬಡುಕ ಬಂಡವಾಳಶಾಹಿ (croni capitalistrs) ಗಳನ್ನು ಆರ್ಥಿಕ ದೀವಾಳಿತನದಿಂದ ಪಾರುಗೊಳಿಸಲು ಬಿಜೆಪಿ ನೇತೃತ್ವದ ಪ್ರಧಾನಿ ಮೋದಿ ಸರಕಾರ ಸಾರ್ವಜನಿಕರ ಹಣವನ್ನು ಬಳಸುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 

Advertisement

ಮೋದಿ ಸರಕಾರದಲ್ಲಿ ಸಾಮಾನ್ಯ ಜನರು ತಮ್ಮದೇ ಹಣವನ್ನು ತಾವು ಬಳಸಲು ಅಸಮರ್ಥರಾಗಿದ್ದಾರೆ. ಮೋದಿ ಸರಕಾರ ಜನಸಾಮಾನ್ಯರನ್ನು  ನೋಟ್‌ ಬಂದಿ ಲೈನ್‌ನಲ್ಲಿ ನಿಲ್ಲಿಸಿದೆ; ಅವರು ತಮ್ಮ ಹಣವನ್ನು ಬ್ಯಾಂಕುಗಳಿಗೆ ಹಾಕುವಂತೆ ಮಾಡಿದೆ ಮತ್ತು ತಮ್ಮ ಎಲ್ಲ ಮಾಹಿತಿಗಳನ್ನು ಆಧಾರ್‌ ಮೂಲಕ ಒಪ್ಪಿಸುವಂತೆ ಮಾಡಿದೆ ಎಂದು ರಾಹುಲ್‌ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಸರಕಾರಿ ಕೃಪಾ ಪೋಷಿತ ಬಂಡವಾಳಶಾಹಿಗಳಿಗೆ ನೋಟ್‌ ಬಂದಿ ಮೂಲಕ ತಮ್ಮಲ್ಲಿನ ಎಲ್ಲ  ಕಪ್ಪು ಹಣವನ್ನು ಬಿಳಿ ಮಾಡಲು ಅವಕಾಶ ಮಾಡಿಕೊಡಲಾಗಿದೆ; ಸಾರ್ವಜನರಿಕ ಹಣವನ್ನು ಬಳಸಿಕೊಂಡು ಉದ್ಯಮಿಗಳ 3.16 ಲಕ್ಷ ಕೋಟಿ ಸಾಲವನ್ನು ರೈಟ್‌ ಆಫ್ ಮಾಡಲಾಗಿದೆ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next