Advertisement

ಮೋದಿಗೆ ಸಂಬಂಧಿಸಿದ 2 ಚಿತ್ರಕ್ಕೆ ಸೆನ್ಸಾರ್‌ ಬ್ರೇಕ್‌!

03:45 AM Feb 17, 2017 | Team Udayavani |

ಮುಂಬೈ: ಪ್ರಧಾನಿ ಮೋದಿ ಅವರಿಗೆ ಸಂಬಂಧಿಸಿದ ಎರಡು ಚಿತ್ರಗಳು ಈಗ ಸೆನ್ಸಾರ್‌ ಮಂಡಳಿಯ ಬಾಗಿಲ ಬಳಿ ಅನುಮತಿಗಾಗಿ ಕಾಯುವಂತಾಗಿವೆ. 

Advertisement

ಮೋದಿ ಅವರ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಕೊಂಡಾಡಿರುವ ಅರೆ-ಕಾಲ್ಪನಿಕ ಚಿತ್ರ “ಮೋದಿ ಕಾ ಗಾಂವ್‌’ ಹಾಗೂ ಪ್ರಧಾನಿ ಮೋದಿಯ ವರನ್ನು ಹೋಲುವ ಪಾತ್ರವಿರುವ ದಿವಂಗತ ನಟ ಓಂ ಪುರಿ ನಟಿಸಿರುವ ಬಾಲಿವುಡ್‌ ಚಿತ್ರ “ರಾಮ್‌ ಭಜನ್‌ ಜಿಂದಾಬಾದ್‌’ಗೆ ಕೇಂದ್ರ ಸೆನ್ಸಾರ್‌ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. 

ಪಿಎಂಒ, ಚುನಾವಣಾ ಆಯೋಗದಿಂದ “ನಿರಾಕ್ಷೇಪಣಾ ಪತ್ರ’ ತರುವಂತೆ ಮೋದಿ ಕಾ ಗಾಂವ್‌ ಚಿತ್ರತಂಡಕ್ಕೆ ಸೆನ್ಸಾರ್‌ ಮಂಡಳಿ ಸೂಚಿಸಿದೆ. ಪಿಎಂಒ ಅನುಮತಿ ಪಡೆಯುವಂತೆ ಚಿತ್ರವೊಂದಕ್ಕೆ ಮಂಡಳಿ ಸೂಚಿಸಿರುವುದು ಇದೇ ಮೊದಲು. 

Advertisement

Udayavani is now on Telegram. Click here to join our channel and stay updated with the latest news.

Next