Advertisement

ಮಹದಾಯಿ ವಿಚಾರದಲ್ಲಿ ಮೋದಿ ನಿರಾಸಕ್ತಿ: ಎಚ್‌ಡಿಕೆ

03:57 PM Apr 19, 2019 | pallavi |

ಎಂ.ಕೆ.ಹುಬ್ಬಳ್ಳಿ: ಮಹದಾಯಿ ಕುರಿತ ತೀರ್ಪು ಈಗಾಗಲೇ ಬಂದಾಗಿದೆ. ಸಿಕ್ಕಿರುವ ನೀರು ಬಳಸುವ ಗೆಜೆಟ್‌ ನೋಟಿಫಿಕೇಶನ್‌ ಕೊಡಿ ಎಂದು ಈಗಾಗಲೇ ಮೋದಿ, ಗಡ್ಕರಿ ಅವರಲ್ಲಿ ಮನವಿ ಮಾಡಿಕೊಂಡರೂ, ಅವರು ನೋಟಿಫಿಕೇಶನ್‌ ಹೊರಡಿಸಿಲ್ಲ. ರಾಜ್ಯದ ಬಿಜೆಪಿ ಸಂದಸರು ಈ ಬಗ್ಗೆ ಸಂಸತ್‌ನಲ್ಲಿ ಧ್ವನಿಯೆತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

Advertisement

ಪಟ್ಟಣದಲ್ಲಿ ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಪರ ಬಹಿರಂಗ ಮತಯಾಚನೆ ಸಭೆ ಉದ್ಘಾಟಿಸಿ ಅವರು ಮಾತನಾಡಿ, ಮೋದಿ ಉದ್ಯೋಗ ಕೊಡುವ ಬದಲಿಗೆ ಇದ್ದ ಉದ್ಯೋಗವನ್ನು ಯುವಕರಿಂದ ಕಸಿದುಕೊಂಡಿದ್ದಾರೆ. 50 ಲಕ್ಷ ಉದ್ಯೋಗಿಗಳನ್ನು ಮನೆಗೆ ಕಳಿಸಿದ್ದಾರೆ. ಚುನಾವಣೆ ಮುಗಿದ ನಂತರ ನಾನು ನೆಗೆದು ಬಿಳ್ಳುತ್ತೇನೆ ಅಂತ ಈಶ್ವರಪ್ಪ ಹೇಳ್ತಾರೆ. ನಾನ್ಯಾಕೆ ನೆಗೆದು ಹೋಗಬೇಕು? ರೈತರ ಸಾಲಮನ್ನಾ ಮಾಡಿದ್ದಕ್ಕೆ ನಾನು ನೆಗೆದು ಹೋಗಬೇಕಾ. ನಾನು ರೈತರಿಗಾಗಿ ಇರುವ ಸಿಎಂ ಎಂದರು.

ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಜೈನ್‌ ಸಮುದಾಯದ ಗೋಮಟೇಶ್ವರ ಬಗ್ಗೆ ಅನಂತಕುಮಾರ ಹೆಗಡೆ ಕೆಟ್ಟದಾಗಿ ಮಾತನಾಡಿದ್ದಾರೆ. ಇವರಿಗೆ ಅನ್ಯ ಧರ್ಮಗಳ ಬಗ್ಗೆ ಕಾಳಜಿ ಇಲ್ಲ. ಪ್ರತಾಪ ಸಿಂಹ ಹಾಗೂ ಅನಂತಕುಮಾರ ಅವರನ್ನು ಮೈಸೂರು ಮೃಗಾಲಯದಲ್ಲಿ ಇರಬೇಕಾದವರು ಇಲ್ಲಿ ಇದ್ದಾರೆ. ಇದು ನಮ್ಮ ದುರ್ದೈವ ಎಂದರು.

ಉತ್ತರ ಕನ್ನಡ ಮತಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ, ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟಿ, ಶಾಸಕ ಮಹಾಂತೇಶ ಕೌಜಲಗಿ, ಎನ್‌.ಎಚ್‌.ಕೋನರೆಡ್ಡಿ, ಮಾಜಿ ಶಾಸಕ ಡಿ.ಬಿ. ಇನಾಮದಾರ, ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಬಾಬಾಸಾಹೇಬ, ರಾಧಾ ಶಾಮ ಕಾದ್ರೋಳ್ಳಿ, ಪಪಂ ಅಧ್ಯಕ್ಷ ಸಿದ್ದಪ್ಪ ಗೊರಕೊಳ್ಳಿ, ನಾಸೀರ ಬಾಗವಾನ, ವಿಕ್ರಂ ಇನಾಮದಾರ, ಶಂಕರ ಹೊಳಿ, ಮೇಘಾ ಕುಂದರಗಿ, ಎಂ.ಟಿ.ಸಂಬಣ್ಣವರ, ಶಂಕರ ಮಾಡಲಗಿ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next