Advertisement
ರಾತ್ರಿ 7.40ರ ಸುಮಾರಿಗೆ ಪ್ರಧಾನಿ ಮೋದಿಯವರು ವೇದಿಕೆ ಪ್ರವೇಶ ಮಾಡಿದರು. ವೇದಿಕೆ ಮೇಲೇರುತ್ತಿದ್ದಂತೆ ಬೆಂಗಳೂರು ಉತ್ತರದ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ, ದಕ್ಷಿಣದ ತೇಜಸ್ವಿ ಸೂರ್ಯ, ಕೇಂದ್ರದ ಪಿ.ಸಿ.ಮೋಹನ್ ಹಾಗೂ ಗ್ರಾಮಾಂತರ ಅಭ್ಯರ್ಥಿ ಅಶ್ವಥ್‌ನಾರಾಯಣಗೌಡರನ್ನು ಮಾತನಾಡಿದರು. ಈ ವೇಳೆ ತೇಜಸ್ವಿ ಸೂರ್ಯ ಅವರು ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದು ವಿಶೇಷವಾಗಿತ್ತು. ವೇದಿಕೆಯಿಂದ ತೆರಳುವ ಮುನ್ನವೂ ನಾಲ್ಕೂ ಅಭ್ಯರ್ಥಿಗಳ ಜತೆ ಕೈ ಎತ್ತಿ ವಿಜಯದ ಸಂಕೇತ ಪ್ರದರ್ಶಿಸಿದರು.
Related Articles
Advertisement
ಬಿಲ್ಲುಬಾಣದ ಅರ್ಪಣೆ: ಶನಿವಾರ ದೇಶಾದ್ಯಂತ ರಾಮನವಮಿ ಆಚರಣೆ ಮಾಡುತ್ತಿರುವುದರಿಂದ ಇದರ ನೆನಪಿಗಾಗಿ ರಾಜ್ಯ ಬಿಜೆಪಿಯಿಂದ ಮೋದಿಯವರಿಗೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬಿಲ್ಲುಬಾಣ ಅರ್ಪಿಸಿದರು.ಖುಷಿಯಿಂದ ಸ್ವೀಕರಿಸಿದ ಮೋದಿ, ಅದನ್ನು ಜನರತ್ತ ತೋರಿಸಿದರು.
ಜನ ಸಾಗರ: ಸಂಜೆ 6.45ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದು ಗಂಟೆ ತಡವಾಗಿ ಶುರವಾಗಿತ್ತು. ಸಂಜೆ 5.30ರ ಸುಮಾರಿಗೆ ಮೈದಾನ ಬಹುತೇಕ ಭರ್ತಿಯಾಗಿತ್ತು. ವಿಐಪಿ, ವಿವಿಐಪಿ ಹಾಗೂ ಸಮಾನ್ಯ ಕಾರ್ಯಕರ್ತರಿಗಾಗಿ ಹಾಕಿದ್ದ ಎಲ್ಲ ಕುರ್ಚಿಗಳು ಭರ್ತಿಯಾಗಿದ್ದು, ವೇದಿಕೆಯ ಮೂರು ಸುತ್ತುಗಳಲ್ಲೂ ಕಾರ್ಯಕರ್ತರು ನಿಂತಿದ್ದರು. ಮೋದಿ ಭಾಷಣ ವೀಕ್ಷಿಸಲು 11 ಬೃಹದಾಕಾರದ ಎಲ್‌ಇಡಿ ಸ್ಕ್ರೀನ್ ಕೂಡ ಅಳವಡಿಸಲಾಗಿತ್ತು. ಹಾಗೆಯೇ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕಣ್ಗಾವಲು ಇತ್ತು. ಎಲ್ಲೆಲ್ಲೂ ಬಿಜೆಪಿ ಬಾವುಟ ರಾರಾಜಿಸುತ್ತಿತ್ತು.
ಬಿಜೆಪಿ ರ್ಯಾಲಿಯಲ್ಲಿ ವೈದ್ಯರು, ಎಂಜಿನಿಯರ್‌ಗಳು, ಆಟೋ ಚಾಲಕರು, ಖಾಸಗಿ ಉದ್ಯೋಗಿಗಳು ಸೇರಿ ಎಲ್ಲ ವೃತ್ತಿಯವರೂ ಸ್ವ ಇಚ್ಛೆಯಿಂದ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್‌ನವರು ಇಂತಹ ಒಂದು ರ್ಯಾಲಿ ಮಾಡಿ ತೋರಿಸಲಿ.-ತೇಜಸ್ವಿ ಸೂರ್ಯ ದೇಶದ ಸೈನಿಕರಿಗೆ ಒನ್‌ರ್‍ಯಾಂಕ್-ಒನ್‌ಪೆನ್ಷನ್ ಜಾರಿ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ನರೇಂದ್ರ ಮೋದಿ ಸರ್ಕಾರ ಇದನ್ನು ಮಾಡಿ ತೋರಿಸಿತು. ಕಾಂಗ್ರೆಸ್‌ಗೆ ಒಆರ್‌ಒಪಿ ಅಂದರೆ-ಒನ್ ರಾಹುಲ್ ಒನ್ ಪ್ರಿಯಾಂಕ ಎಂದಷ್ಟೇ ಗೊತ್ತು.
-ಡಿ.ವಿ.ಸದಾನಂದಗೌಡ 70 ವರ್ಷದಲ್ಲಿ ಆಗದ ಕೆಲಸವನ್ನು 5ವರ್ಷದಲ್ಲಿ ಮೋದಿ ಮಾಡಿ¨ªಾರೆ. ಮೈತ್ರಿ ಸರ್ಕಾರದಲ್ಲಿ ಭ್ರಷ್ಟಚಾರ ತುಂಬಿ ತುಳುಕುತ್ತಿದೆ. ರಾಜ್ಯ ಸರ್ಕಾರ ಬೆಂಗಳೂರನ್ನು ಮರೆತಿದೆ. ವೈಟ್ ಟಾಪಿಂಗ್ ಹೆಸರಿನಲ್ಲಿ ಜನರ ದುಡ್ಡು ಲೂಟಿ ಹೊಡೆಯುತ್ತಿದೆ.
-ಪಿ.ಸಿ.ಮೋಹನ್ ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬಂಡೆ ಗುಡ್ಡ ಕಂಡಲ್ಲಿ ಕ್ರಷರ್‌ಮಾಡುತ್ತಾರೆ. ಕೇಂದ್ರದ ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ.
-ಅಶ್ವತ್ಥನಾರಾಯಣ ಮಂಡ್ಯದಲ್ಲಿ ಈಗಾಗಲೇ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿಗೆ ಕೈಕೊಟ್ಟಿ¨ªಾರೆ. ಜನರೂ ಕೈ ಕೊಡುತ್ತಾರೆ. ಮೋದಿ ಪ್ರಧಾನಿಯಾದರೆ ಸನ್ಯಾಸ ಸ್ವೀಕರಿಸುವುದಾಗಿ ಎಚ್.ಡಿ.ರೇವಣ್ಣ ಹೇಳಿದ್ದಾರೆ. ರೇವಣ್ಣ ಯಾವ ಮಠ ಸೇರುತ್ತಾರೆ?
-ಆರ್.ಅಶೋಕ್ ಚುನಾವಣೆಗೆ ನಾಲ್ಕು ದಿನ ಉಳಿದಿದ್ದು, ನಾವೆಲ್ಲರೂ ಸಂಘಟಿತವಾಗಿ ವ್ಯಾಪಕ ಪ್ರಚಾರನಡೆಸಬೇಕಿದೆ. ಮೋದಿಯವರ ಆಡಳಿತದಲ್ಲಿ ದೇಶ ಸರ್ವಾಂಗೀಣ ಅಭಿವೃದ್ಧಿ ಕಂಡಿದೆ. ವಿರೋಧ ಪಕ್ಷಗಳ ಘಟಬಂಧನ್ ನೆಲಕಚ್ಚಿದೆ.
-ವಿ.ಸೋಮಣ್ಣ