Advertisement
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಅಭಿವೃದ್ದಿ ವಿಚಾರ ಬಿಟ್ಟು ತಾಳಿ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜಿಲ್ಲೆಯ ಅನೇಕ ಸಮಸ್ಯೆ ಇತ್ಯರ್ಥದ ಭರವಸೆ ನೀಡಬೇಕಿತ್ತು ಎಂದೂ ಹೇಳಿದರು.
Related Articles
Advertisement
ಅಯೋಧ್ಯೆ ರಾಮನ ಸೇವೆಯಲ್ಲಿ ಎಲ್ಲರ ಕಾಣಿಕೆ ಇದೆ. ಆದರೆ, ಇದನ್ನು ಬಿಜೆಪಿ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳುತ್ತಿದೆ ಎಂದ ಅವರು, ಪರೇಶ ಮೇಸ್ತಾ ಪ್ರಕರಣವನ್ನು ಎಬ್ಬಿಸಿದವರು ಯಾರು? ವಿಕಾಸಾಶ್ರಮ ಬಯಲಿನಲ್ಲಿ ಚಾಲನೆ ನೀಡಿ, ಯುವಕರ ಮೇಲೆ ಪ್ರಕರಣ ಬರುವಂತೆ ಮಾಡಿದವರು ಯಾರು? ಪ್ರಧಾನಿಗಳು ಇದರ ಬಗ್ಗೆ ಕೂಡ ನೋಡಬೇಕಿತ್ತು ಎಂದರು.
ದೇವರ ಹೆಸರಿನಲ್ಲಿ ಮತ ಕೇಳುವುದು, ಕೊಟ್ಟ ಮಾತು ಈಡೇರಿಸದೇ ಮತ್ತೆ ಅಧಿಕಾರ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರ 34 ರೂ.ಗೆ ಅಕ್ಕಿ ಕೊಡುತ್ತೇನೆ ಎಂದರೂ ಕೊಡದ ಕೇಂದ್ರ ಸರಕಾರ ಈಗ 29 ರೂ.ಗೆ ಮಾರಾಟ ಮಾಡುತ್ತಿದೆ. ಕಾಂಗ್ರೆಸ್ ಸರಕಾರವು ಜನರಿಗೆ ಉಚಿತವಾಗಿ ಅಕ್ಕಿ ಪೂರೈಸಲಾಗಿತ್ತು. ಆಗ ಕೇಳಿದರೂ ಕೊಡದ ಕೇಂದ್ರ ಬಿಜೆಪಿ ಸರಕಾರದ ನಡೆ ಸರಿನಾ ಎಂದೂ ಕೇಳಿದರು.
ಈ ವೇಳೆ ದೀಪಕ್ ದೊಡ್ಡೂರು, ಜಗದೀಶ ಗೌಡ, ಗಣೇಶ ದಾವಣಗೆರೆ, ಸುಮಾ ಉಗ್ರಾಣಕರ, ಪ್ರಸನ್ನ ಶೆಟ್ಟಿ ಇತರರಿದ್ದರು.
ಪ್ರಧಾನಿಗಳು ಬಂದಾಗ ನಾನೂ ಸ್ವಾಗತ ಕೋರಲು ಮುಂದಾಗಿದ್ದೆ. ಆದರೆ, ಚುನಾವಣೆ ಕಾರಣದಿಂದ ಹೋಗಿಲ್ಲ. ಪ್ರಧಾನಿಗಳ ಕಾರ್ಯಕ್ರಮ ಸಹಿತ, ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಥವಾ ಸರಕಾರ ಹಸ್ತಕ್ಷೇಪ ಮಾಡಿಲ್ಲ. ಅಧಿಕಾರಿಗಳು, ಇಲಾಖೆ ತಪ್ಪು ಮಾಡಿದರೆ ಚುನಾವಣೆ ಆಯೋಗ ಕಠಿಣ ಕ್ರಮ ಕೈಗೊಳ್ಳಲಿ. – ಭೀಮಣ್ಣ ನಾಯ್ಕ, ಶಾಸಕ